• Home
  • »
  • News
  • »
  • jobs
  • »
  • Jobs in NITK: ಸುರತ್ಕಲ್​ನ ಎನ್​ಐಟಿಕೆಯಲ್ಲಿದೆ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ; ತಿಂಗಳಿಗೆ 31 ಸಾವಿರ ವೇತನ

Jobs in NITK: ಸುರತ್ಕಲ್​ನ ಎನ್​ಐಟಿಕೆಯಲ್ಲಿದೆ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ; ತಿಂಗಳಿಗೆ 31 ಸಾವಿರ ವೇತನ

ಎನ್​​ಐಟಿಕೆ

ಎನ್​​ಐಟಿಕೆ

ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ವಿವರಗಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 5 ಆಗಿದೆ.

  • News18 Kannada
  • 5-MIN READ
  • Last Updated :
  • Jobat, India
  • Share this:

    ಸುರತ್ಕಲ್​ನಲ್ಲಿರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (National Institute of Technology Karnataka) ಪ್ರಾಜೆಕ್ಟ್ ಅಸೋಸಿಯೇಟ್-1 ಮತ್ತು ಪ್ರಾಜೆಕ್ಟ್ ಅಸೋಸಿಯೇಟ್-2 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಜಿನಿಯರಿಂಗ್​ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ವಿವರಗಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 5 ಆಗಿದೆ.


    ಮೈರ್ ಟೆಕ್ನಿಮಾಂಟ್ ಸೆಂಟರ್ ಫಾರ್ ಕ್ಲೀನ್ ಎನರ್ಜಿ ಟ್ರಾನ್ಸಿಶನ್ ಫಾರ್ ಸಂಶೋಧನೆಗಾಗಿ ಈ ಹುದ್ದೆಯೂ ತಾತ್ಕಾಲಿಕ ಗುತ್ತಿಗೆ ಆಧಾರದ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆ ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.


    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
    ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸೋಸಿಯೇಟ್
    ಹುದ್ದೆಗಳ ಸಂಖ್ಯೆ: 2
    ಉದ್ಯೋಗ ಸ್ಥಳ: ಸುರತ್ಕಲ್ - ಕರ್ನಾಟಕ
    ವೇತನ: 18000-31000 ರೂ. ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಪ್ರಾಜೆಕ್ಟ್ ಅಸೋಸಿಯೇಟ್-11ಥರ್ಮಲ್ ಇಂಜಿನಿಯರಿಂಗ್/ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಎಂಇ ಅಥವಾ ಎಂಟೆಕ್​31000 ರೂ ಮಾಸಿಕ
    ಪ್ರಾಜೆಕ್ಟ್ ಅಸೋಸಿಯೇಟ್-21ಎಂಎಸ್ಸಿ ಪದವಿ18000 ರೂ ಮಾಸಿಕ

    ವಯೋಮಿತಿ:  ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು ಮೀರಿರಬಾರದು.


    ಇದನ್ನು ಓದಿ: ಐಟಿಐ ಆಗಿದ್ರೆ ಕೈಗಾದಲ್ಲಿದೆ ಕೆಲಸ; ಇಲ್ಲಿದೆ ಹುದ್ದೆಯ ಸಂಪೂರ್ಣ ಮಾಹಿತಿ


    ವಯೋಮಿತಿ ಸಡಿಲಿಕೆ:
    ಪ.ಜಾ, ಪ.ಪಂ, ಹಿಂದುಳಿದ ವರ್ಗ ಮತ್ತು ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು: 05 ವರ್ಷಗಳು


    ಆಯ್ಕೆ ಪ್ರಕ್ರಿಯೆ
    ಅರ್ಹತೆ, ಅನುಭವ, ಪರೀಕ್ಷಾ ಕಾರ್ಯಕ್ಷಮತೆ ಮತ್ತು ಸಂದರ್ಶನ


    ಅರ್ಜಿ ಸಲ್ಲಿಕೆ: ಆಫ್​ಲೈನ್​ನ ಅಥವಾ ಇಮೇಲ್​ ಮುಖಾಂತರ


    ಇಮೇಲ್​ ವಿಳಾಸ: mt.center-research@nitk.edu.in


    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-07-2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-ಆಗಸ್ಟ್-2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: nitk.ac.in


    ಇದನ್ನು ಓದಿ: ಆಟೋ ಮೊಬೈಲ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ರೆ, ಇಲ್ಲಿದೆ ಭರಪೂರ ಅವಕಾಶ


    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನೀಡಿ. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅವುಗಳನ್ನು ನೀಡಿ.


    - ನಿಗದಿತ ನಮೂನೆಯಲ್ಲಿ ಫಾರ್ಮ್ ಅಲ್ಲಿ ಶೈಕ್ಷಣಿಕ ಮಾಹಿತಿ, ಅನುಭವ ಸೇರಿದಂತೆ ಇತರೆ ವಿವರಗಳನ್ನು ನೀಡಿ. ಯಾವ ಹುದ್ದೆಗೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿ. ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ


    -ಕೊನೆಯದಾಗಿ ಅರ್ಜಿ ನಮೂನೆಯನ್ನು ಪರಿಶೀಲಿಸಿ ಕೆಳಗಿನ ಇಮೇಲ್​ ವಿಳಾಸ ಅಥವಾ ಪೋಸ್ಟಲ್​ ನಿಗದಿತ ದಿನಾಂಕದೊಳಗೆ ಕಳುಹಿಸಬೇಕಿದೆ.


    ಡಾ. ವಾಸುದೇವ ಮಾದವ್, ಸಿಎಸ್ಆರ್ ಪ್ರಾಜೆಕ್ಟ್ ಸಂಯೋಜಕರು, ಮೈರ್ ಟೆಕ್ನಿಮಾಂಟ್ ಸೆಂಟರ್ ಫಾರ್ ಕ್ಲೀನ್ ಎನರ್ಜಿ ಟ್ರಾನ್ಸಿಶನ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್

    Published by:Seema R
    First published: