1947ರಲ್ಲಿ ಡಾ. ವಿಕ್ರಮ್ ಸಾರಾಭಾಯ್ ಅವರಿಂದ ಸ್ಥಾಪಿಸಲ್ಪಟ್ಟ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (Physical Research Laboratory) ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಘಟಕವಾಗಿದೆ. ಈ ಸಂಸ್ಥೆಯು ಭೌತಶಾಸ್ತ್ರ, ಬಾಹ್ಯಾಕಾಶ ಮತ್ತು ವಾಯುಮಂಡಲದ ವಿಜ್ಞಾನ (Science), ಖಗೋಳವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ಸೌರ ಭೌತಶಾಸ್ತ್ರ, ಮತ್ತು ಗ್ರಹ ಮತ್ತು ಭೂ-ವಿಜ್ಞಾನಗಳ ಆಯ್ದ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗಳನ್ನು (Research) ನಡೆಸುತ್ತದೆ. ಸಹಾಯಕ ಮತ್ತು ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ನೇಮಕಾತಿಗಾಗಿ (Recruitment) ಆನಲೈನ್ನಲ್ಲಿ ಆರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 15, 2022 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆ | ಜೂನಿಯರ್ ಪರ್ಸನಲ್ ಅಸಿಸ್ಟಂಟ್, ಅಸಿಸ್ಟಂಟ್ |
ಸಂಸ್ಥೆ | ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ |
ಖಾಲಿ ಹುದ್ದೆಗಳು | 18 |
ವಯೋಮಾನ | 18 - 28 ವರ್ಷಗಳು |
ವಿದ್ಯಾರ್ಹತೆ | ಪದವಿ ಮತ್ತು ಕಂಪ್ಯೂಟರ್ |
ಅರ್ಜಿ ಸಲ್ಲಿಕೆಗೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಶುಲ್ಕ | 250/– (SC/ST/PH ಮತ್ತು ಮಹಿಳೆಯರಿಗೆ ಶುಲ್ಕವಿಲ್ಲ) |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | ಅಕ್ಟೋಬರ್ 15, 2022 |
ವಿದ್ಯಾರ್ಹತೆ:
ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರ ಬೇಕು.
ಕಂಪ್ಯೂಟರ್ ಪ್ರಾವೀಣ್ಯತೆಹೊಂದಿರಬೇಕು.
ವಯೋಮಿತಿ :
ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷಗಳು.
ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ PRL 2022 ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
UR/OBC/EWS ಅಭ್ಯರ್ಥಿಗಳು 250/–
SC/ST/PH ಮತ್ತು ಎಲ್ಲಾ ಮಹಿಳೆಯರಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಗ್ ಫೀಸ್ ಅಥವಾ UPI ಯಾವುದರ ಮೂಲಕವಾದರೂ ಅರ್ಜಿ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ