• ಹೋಂ
  • »
  • ನ್ಯೂಸ್
  • »
  • Jobs
  • »
  • Zycus Infotechನಲ್ಲಿ ಫ್ರೆಶರ್​ಗಳಿಗೆ ಬಂಪರ್ ಉದ್ಯೋಗ- 5 ಲಕ್ಷದವರೆಗೆ ಸಂಬಳ, Walk-in-Driveನಲ್ಲಿ ಪಾಲ್ಗೊಳ್ಳಿ

Zycus Infotechನಲ್ಲಿ ಫ್ರೆಶರ್​ಗಳಿಗೆ ಬಂಪರ್ ಉದ್ಯೋಗ- 5 ಲಕ್ಷದವರೆಗೆ ಸಂಬಳ, Walk-in-Driveನಲ್ಲಿ ಪಾಲ್ಗೊಳ್ಳಿ

zycus

zycus

ಈ ವಾಕ್-ಇನ್-ಡ್ರೈವ್ B.E./B.Tech ಪದವೀಧರರಿಗೆ (ಫ್ರೆಶರ್​ಗಳಿಗೆ) ಮಾತ್ರ.

  • News18 Kannada
  • 5-MIN READ
  • Last Updated :
  • New Delhi, India
  • Share this:

Zycus Infotech Fresher Walk-in-Drive 2023: ಝೈಕಸ್ ಇನ್ಫೋಟೆಕ್ ಪ್ರಮುಖ ಜಾಗತಿಕ ಸಾಫ್ಟ್‌ವೇರ್ ಸೊಲ್ಯೂಶನ್ ಒದಗಿಸುವ ಕಂಪನಿಯಾಗಿದೆ. 2023 ಮೇ ತಿಂಗಳಲ್ಲಿ ಟ್ರೈನಿ- ಪ್ರೊಕ್ಯೂರ್​ಮೆಂಟ್ ಅನಾಲಿಸ್ಟ್/ ಸ್ಪೆಂಡ್ ಅನಾಲಿಸ್ಟ್​ ಹುದ್ದೆಗಳಿಗೆ ಪ್ರತಿಭಾವಂತ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು Zycus Fresher Walk-in-Drive ಅನ್ನು ನಡೆಸಲಾಗುತ್ತಿದೆ. ನೀವು ಇತ್ತೀಚಿನ B.E./B.Tech ಪದವೀಧರರಾಗಿದ್ದರೆ, IT ಉದ್ಯಮದಲ್ಲಿ ವೃತ್ತಿ ಅವಕಾಶವನ್ನು ಹುಡುಕುತ್ತಿದ್ದರೆ ನೀವು ಈ ಅದ್ಭುತ ಅವಕಾಶವನ್ನು ಬಳಸಿಕೊಳ್ಳಬಹುದು.


ಝೈಕಸ್ ಆಫ್ ಕ್ಯಾಂಪಸ್ ವಾಕ್-ಇನ್-ಡ್ರೈವ್ ಕುರಿತ ಎಲ್ಲಾ ಅಗತ್ಯ ವಿವರಗಳು ಇಲ್ಲಿವೆ. ಇದರಲ್ಲಿ ಅರ್ಹತಾ ಮಾನದಂಡಗಳು, ಅಪ್ಲಿಕೇಶನ್ ಪ್ರಕ್ರಿಯೆ ಇನ್ನಿತರ ಮಾಹಿತಿ ಸೇರಿವೆ.

ಸಂಸ್ಥೆಝೈಕಸ್ ಇನ್ಫೋಟೆಕ್
ಹುದ್ದೆಟ್ರೈನಿ- ಪ್ರೊಕ್ಯೂರ್​ಮೆಂಟ್ ಅನಾಲಿಸ್ಟ್/ ಸ್ಪೆಂಡ್ ಅನಾಲಿಸ್ಟ್​
ವಿದ್ಯಾರ್ಹತೆಬಿಇ/ ಬಿ.ಟೆಕ್
ವೇತನಮಾಸಿಕ ₹ 4,50,000- 5,00,000
ಉದ್ಯೋಗದ ಸ್ಥಳಭಾರತ
ಸಂದರ್ಶನ ನಡೆಯುವ ಸ್ಥಳಮುಂಬೈ
ಸಂದರ್ಶನ ನಡೆಯುವ ದಿನಮೇ 13, 2023

Zycus ಕಂಪನಿಯು 2022 & 23ರ ಬಿಇ ಪದವೀಧರರನ್ನು ಟ್ರೈನಿ- ಪ್ರೊಕ್ಯೂರ್​ಮೆಂಟ್ ಅನಾಲಿಸ್ಟ್/ ಸ್ಪೆಂಡ್ ಅನಾಲಿಸ್ಟ್ ಹುದ್ದೆಗಳಿಗೆ ನೇಮಿಸಿಕೊಳ್ಳಲಿದೆ. ಈ ವಾಕ್-ಇನ್-ಡ್ರೈವ್ B.E./B.Tech ಪದವೀಧರರಿಗೆ (ಫ್ರೆಶರ್​ಗಳಿಗೆ) ಮಾತ್ರ. Zycus Infotech ವಿಶ್ವಾದ್ಯಂತ ಗ್ರಾಹಕರಿಗೆ ನವೀನ ಸಾಫ್ಟ್‌ವೇರ್ ಪರಿಹಾರಗಳನ್ನು ಒದಗಿಸುವ ಖ್ಯಾತಿಯನ್ನು ಹೊಂದಿದೆ. ನೀವು Zycus ಗ್ಲೋಬಲ್ ತಂಡವನ್ನು ಸೇರಲು ಆಸಕ್ತಿ ಹೊಂದಿದ್ದರೆ, ನೀವು ಮೇ 13, 2023 ರಂದು ಮುಂಬೈ, ಅಂಧೇರಿಯಲ್ಲಿರುವ Zycus ಕಚೇರಿಯಲ್ಲಿ ಈ ವಾಕ್-ಇನ್ ಡ್ರೈವ್‌ನಲ್ಲಿ ಭಾಗವಹಿಸಬಹುದು.


ಇದನ್ನೂ ಓದಿ: Government Job: ಭಾರತೀಯ ಆಹಾರ ಸಂಸ್ಕರಣಾ ನಿಗಮದಲ್ಲಿ ಖಾಯಂ ನೇಮಕಾತಿ- ಈಗಲೇ ಅರ್ಜಿ ಹಾಕಿ


ವೇತನ:
ಮಾಸಿಕ ₹ 4,50,000- 5,00,000


Zycus ಆಫ್ ಕ್ಯಾಂಪಸ್ ಡ್ರೈವ್ 2023 ಗಾಗಿ ಅರ್ಹತಾ ಮಾನದಂಡಗಳು:


ಝೈಕಸ್ ಇನ್ಫೋಟೆಕ್ ಫ್ರೆಶರ್ ವಾಕ್-ಇನ್-ಡ್ರೈವ್‌ಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರಬೇಕು.


ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ CS/IT/ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಲ್ಲಿ B.E./B.Tech ಪದವಿಯನ್ನು ಪೂರ್ಣಗೊಳಿಸಿರಬೇಕು.


ಪದವಿಯ ವರ್ಷ: 2022 ಅಥವಾ 2023 ರಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಮಾತ್ರ ಅರ್ಹರು.


ಶೈಕ್ಷಣಿಕ ಕಾರ್ಯಕ್ಷಮತೆ: ಅಭ್ಯರ್ಥಿಗಳು ಸ್ಟ್ರಾಂಗ್ ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.


ಇದನ್ನೂ ಓದಿ:Banking Jobs: ಸಿಟಿ ಯೂನಿಯನ್ ಬ್ಯಾಂಕ್ ನೇಮಕಾತಿ- ಮ್ಯಾನೇಜರ್ ಹುದ್ದೆಗಳಿಗೆ ಇವತ್ತೇ ಅರ್ಜಿ ಹಾಕಿ


ವಾಕ್-ಇನ್-ಡ್ರೈವ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?


ಝೈಕಸ್ ಇನ್ಫೋಟೆಕ್ ಫ್ರೆಶರ್ ವಾಕ್-ಇನ್-ಡ್ರೈವ್‌ಗಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:


ಫ್ರಿಸ್ಟ್, Zycus Infotech ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://zycus.skillate.com/).


ಕೆರಿಯರ್ ಪುಟಕ್ಕೆ ಹೋಗಿ (ಫೈಂಡ್ ದಿ ವಾಕ್-ಇನ್-ಡ್ರೈವ್ -2023)
ಜಾಬ್ ಪೋಸ್ಟ್ ಅನ್ನು ಕ್ಲಿಕ್ ಮಾಡಿ ಅರ್ಹತೆಯನ್ನು ಓದಿ.


ಈಗ Apply ಕೆಳಗೆ ಕ್ಲಿಕ್ ಮಾಡಿ, ನಿಮ್ಮ ಅರ್ಜಿಯನ್ನು ಸಲ್ಲಿಸಿ.


ಆನ್​ಲೈನ್ ಅಪ್ಲಿಕೇಶನ್ ಇಲ್ಲಿದೆ:


ಸಂದರ್ಶನದ ವಿವರಗಳು:


ಸ್ಥಳ: Zycus Infotech Pvt Ltd.Plot No GJ-07, SEEPZ++, SEEPZ, MIDC, ಅಂಧೇರಿ ಪೂರ್ವ, ಮುಂಬೈ ಮಹಾರಾಷ್ಟ್ರ- 400096.


ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ




ಇಂಟರ್​ವ್ಯೂಗೆ ಹೋಗುವ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್, 1 ಪಾಸ್‌ಪೋರ್ಟ್ ಅಳತೆಯ ಕಲರ್ ಫೋಟೋ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಕೊಂಡೊಯ್ಯಿರಿ.


ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 022 -66407676 ಗೆ ಸಂಪರ್ಕಿಸಿ.

First published: