ಪೆಲಿಕಾನ್ ಕಂಪನಿಯಲ್ಲಿ ಫ್ರೆಶರ್ಗಳಿಗೆ ಉತ್ತಮ ಉದ್ಯೋಗಾವಕಾಶವಿದೆ. ಪ್ರಸ್ತುತ ಕಂಪನಿಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಒಟ್ಟು 2 ಕ್ವಾಲಿಟಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅನುಭವ ಕೇಳಿಲ್ಲ. ಹೀಗಾಗಿ ಫ್ರೆಶರ್ಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಪೆಲಿಕಾನ್ |
ಹುದ್ದೆಯ ಹೆಸರು | ಟ್ರೇನಿ- ಕ್ವಾಲಿಟಿ ಎಂಜಿನಿಯರ್ |
ಉದ್ಯೋಗದ ಸ್ಥಳ | ಮುಂಬೈ |
ಅನುಭವ | ಫ್ರೆಶರ್ |
ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಟೆಸ್ಟಿಂಗ್ ಸರ್ಟಿಫಿಕೇಟ್ ಹೊಂದಿರಬೇಕು.
ಕೌಶಲ್ಯಗಳು:
ಸ್ಟ್ರಾಂಗ್ ಅನಾಲಿಟಿಕಲ್ ಮತ್ತು ಲಾಜಿಕಲ್ ಸ್ಕಿಲ್ ಹೊಂದಿರಬೇಕು.
ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ ಇರಬೇಕು.
ಒರಾಕಲ್ RDBMS / SQL ಸ್ಕ್ರಿಪ್ಟ್ಗಳ ಕೆಲಸದ ಬಗ್ಗೆ ತಿಳಿದಿರಬೇಕು.
ವಿಂಡೋಸ್ ಓಎಸ್, ಯುನಿಕ್ಸ್ / ಲಿನಕ್ಸ್ ಓಎಸ್ ಬಗ್ಗೆ ಜ್ಞಾನವಿರಬೇಕು.
ವರ್ಡ್, ಎಕ್ಸೆಲ್, ಪವರ್ಪಾಯಿಂಟ್ನಂತಹ ಎಂಎಸ್ ಅಪ್ಲಿಕೇಶನ್ಗಳ ಬಳಕೆ ಗೊತ್ತಿರಬೇಕು.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಥವಾ
ನಿಮ್ಮ ರೆಸ್ಯೂಮ್ನ್ನು careers@pelican.ai ಗೆ ಇ-ಮೇಲ್ ಮಾಡಿ.
ಪೆಲಿಕಾನ್ ಕಂಪನಿಯ ಬಗ್ಗೆ ಒಂದಷ್ಟು ಮಾಹಿತಿ:
ಪೆಲಿಕಾನ್ ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾ-ಪೆಸಿಫಿಕ್ನಲ್ಲಿ ಎಲ್ಲಾ ರೀತಿಯ ಕಾರ್ಪೊರೇಟ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಪಾವತಿ ಮತ್ತು ಅನುಸರಣೆ ಪರಿಹಾರಗಳನ್ನು ಒದಗಿಸುವ ಪ್ರಮುಖ ಪೂರೈಕೆದಾರ. ವಿಶ್ವಾದ್ಯಂತ ಹಣಕಾಸು ಸಂಸ್ಥೆಗಳು ಮತ್ತು ಕಾರ್ಪೊರೇಟ್ಗಳು ತಮ್ಮ ಪಾವತಿಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ನಿಯಂತ್ರಿಸಲು ಪೆಲಿಕಾನ್ ಅನ್ನು ಅವಲಂಬಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ