Infosys Recruitment 2023: ಇನ್ಫರ್ಮೇಶನ್ ಟೆಕ್ನಾಲಜಿ ಕಂಪನಿಯಾದ ಇನ್ಫೋಸಿಸ್ (Information Technology Company Infosys) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಕಂಪನಿಯು ಫ್ರೆಶರ್ಸ್ಗೆ (Fresher's) ಹೆಚ್ಚಿನ ಮನ್ನಣೆ ನೀಡುತ್ತಿದೆ. ಹೀಗಾಗಿ ಹೊಸದಾಗಿ ಕೆಲಸಕ್ಕೆ ಸೇರಬೇಕು ಎಂದು ಜಾಬ್ ಸರ್ಚ್ (Job Search) ಮಾಡುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಇನ್ಫೋಸಿಸ್ ದೇಶಾದ್ಯಂತ ಫ್ರೆಶರ್ಸ್ಗಳಿಗೆ ಇಂಟರ್ನ್ಶಿಪ್ (Internship) ಅವಕಾಶವನ್ನು ನೀಡುತ್ತಿದೆ.
ಸುಮಾರು 500 ಇಂಟರ್ನ್ಶಿಪ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಇವತ್ತೇ ಅಪ್ಲೈ ಮಾಡಬೇಕು. ಯಾಕೆಂದರೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಮತ್ತೊಂದು ಪ್ರಮುಖ ವಿಷಯ ಏನೆಂದರೆ ಇನ್ಫೋಸಿಸ್ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನೂ ಸಹ ನೀಡುತ್ತಿದೆ. ಹೀಗಾಗಿ ಮನೆಯಿಂದಲೇ ಕೆಲಸ ಮಾಡಲು ಇಚ್ಛಿಸುವವರು ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇನ್ಫೋಸಿಸ್ |
ಹುದ್ದೆ | ಇಂಟರ್ನ್ಶಿಪ್ |
ಒಟ್ಟು ಹುದ್ದೆ | 500 |
ವಿದ್ಯಾರ್ಹತೆ | ಪದವಿ |
ವೇತನ | ಮಾಸಿಕ ₹ 34,000- 52,000 |
ಉದ್ಯೋಗದ ಸ್ಥಳ | ಭಾರತ / ವರ್ಕ್ ಫ್ರಂ ಹೋಂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 18, 2023 (ಇಂದು) |
ಇದನ್ನೂ ಓದಿ: Canara Bank Recruitment 2023: ಕೆನರಾ ಬ್ಯಾಂಕ್ನಲ್ಲಿ ಗೋಲ್ಡ್ ಅಪ್ರೈಸರ್ ಹುದ್ದೆ ಖಾಲಿ ಇದೆ- SSLC ಪಾಸಾಗಿದ್ರೆ ಸಾಕು
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.
ವೇತನ:
ಮಾಸಿಕ ₹ 34,000- 52,000
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು 2 ಹಂತಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲಿಗೆ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಾಗುತ್ತದೆ. ಬಳಿಕ ದಾಖಲಾತಿ ಪರಿಶೀಲನೆ ಇರುತ್ತದೆ. ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಕಂಪನಿಯು ಅಭ್ಯರ್ಥಿಗಳ ಹೆಸರನ್ನು ಶಾರ್ಟ್ಲಿಸ್ಟ್ ಮಾಡುತ್ತದೆ.
ಇದನ್ನೂ ಓದಿ: Central Bank of India Recruitment 2023: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಸೆಂಟ್ರಲ್ ಬ್ಯಾಂಕ್
ಉದ್ಯೋಗದ ಸ್ಥಳ:
ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಜೊತೆಗೆ ವರ್ಕ್ ಫ್ರಮ್ ಹೋಂ ಆಯ್ಕೆಯೂ ಸಹ ಇದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮಾರ್ಚ್ 8, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 18, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ