ಫೈನಾನ್ಸಿಯಲ್ ಸರ್ವೀಸಸ್ ಕಂಪನಿಯಾದ HSBC ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ (Senior Software Engineer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದು ಬ್ರಿಟಿಷ್ ಬಹುರಾಷ್ಟ್ರೀಯ ಸಾರ್ವತ್ರಿಕ ಬ್ಯಾಂಕ್ ಮತ್ತು ಹಣಕಾಸು ಸೇವೆಗಳನ್ನು ಹೊಂದಿರುವ ಕಂಪನಿಯಾಗಿದ್ದು, ಇಲ್ಲಿ ಕೆಲಸ ಮಾಡಲು ಬಯಸುವವರು ಈಗಲೇ ಅಪ್ಲೈ (Apply) ಮಾಡಿ.
ಮೇ 10, 2023ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಹೀಗಾಗಿ ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ.
ಸಂಸ್ಥೆ | HSBC ಕಂಪನಿ |
ಹುದ್ದೆ | ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ |
ವಿದ್ಯಾರ್ಹತೆ | ಪದವಿ |
ವೇತನ | ವಾರ್ಷಿಕ ಪ್ಯಾಕೇಜ್ 9 ಲಕ್ಷ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 10, 2023 |
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಡಿಗ್ರಿ ಕಂಪ್ಲೀಟ್ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
ಇದನ್ನೂ ಓದಿ:SAI Recruitment 2023: ಬೆಂಗಳೂರಿನಲ್ಲಿ ಕೇಟರಿಂಗ್ ಮ್ಯಾನೇಜರ್ ಹುದ್ದೆ ಖಾಲಿ ಇದೆ- ತಿಂಗಳಿಗೆ 50 ಸಾವಿರ ಸಂಬಳ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾರ್ಷಿಕ ಪ್ಯಾಕೇಜ್ 9 ಲಕ್ಷದವರೆಗೆ ಸಂಬಳ ನೀಡಲಾಗುತ್ತದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪುಣೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇತರೆ ಕೌಶಲ್ಯಗಳು:
JSON ನಲ್ಲಿ ಮಾಡೆಲಿಂಗ್ ಡೇಟಾದಲ್ಲಿ ಅನುಭವ
ಸ್ಕ್ರಮ್ ಮತ್ತು ಅಗೈಲ್‌ನಲ್ಲಿ ಅನುಭವ
ಯುನಿಟ್ ಟೆಸ್ಟಿಂಗ್, ಡೇಟಾ ಮೋಕಪ್ ಮತ್ತು ಆಟೊಮೇಷನ್ ಪರೀಕ್ಷೆಯಲ್ಲಿ ಅನುಭವ
ಜಾವಾ, ಸ್ಪ್ರಿಂಗ್ ಫ್ರೇಮ್‌ವರ್ಕ್, ಮೈಕ್ರೋ ಸರ್ವಿಸ್, RAML ಕೌಶಲ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ