HP is Hiring: ಅಮೆರಿಕದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಹೆವ್ಲೆಟ್-ಪ್ಯಾಕರ್ಡ್ ಕಂಪನಿ/(The Hewlett-Packard Company) HP ಕಂಪನಿ (HP Company) ನೇಮಕಾತಿ ಆರಂಭಿಸಿದೆ. ಕಂಪ್ಯೂಟರ್ ಹಾರ್ಡ್ವೇರ್ ಕಂಪನಿ (Computer Hardware Company) HPಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಸೇಲ್ಸ್ ಸಪೋರ್ಟ್ ಮ್ಯಾನೇಜ್ಮೆಂಟ್ ಕೋಆರ್ಡಿನೇಟರ್ ಹುದ್ದೆ ಖಾಲಿ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಫೆಬ್ರವರಿ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | HP |
ಹುದ್ದೆ | ಸೇಲ್ಸ್ ಸಪೋರ್ಟ್ ಮ್ಯಾನೇಜ್ಮೆಂಟ್ ಕೋಆರ್ಡಿನೇಟರ್ |
ಒಟ್ಟು ಹುದ್ದೆ | 1 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 28, 2023 |
ಇದನ್ನೂ ಓದಿ: Banking Job: ಅರ್ಜಿ ಹಾಕಲು ಇವತ್ತೇ ಕೊನೆ ದಿನ- ಇಲ್ಲಿ ಅಪ್ಲೈ ಮಾಡಿ
ಅನುಭವ:
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 4 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಉದ್ಯೋಗದ ಸ್ಥಳ:
ಸೇಲ್ಸ್ ಸಪೋರ್ಟ್ ಮ್ಯಾನೇಜ್ಮೆಂಟ್ ಕೋಆರ್ಡಿನೇಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವೇತನ:
ಸೇಲ್ಸ್ ಸಪೋರ್ಟ್ ಮ್ಯಾನೇಜ್ಮೆಂಟ್ ಕೋಆರ್ಡಿನೇಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಅನುಭವ ಮತ್ತು ಕಾರ್ಯಕ್ಷಮತೆಯನ್ನು ಆಧರಿಸಿ ವೇತನ ಕೊಡಲಾಗುತ್ತದೆ.
ವಾರಕ್ಕೆ 6 ದಿನ ಕೆಲಸ ಇರುತ್ತದೆ. ಫುಲ್ ಟೈಂ ಉದ್ಯೋಗ ಇದಾಗಿರುತ್ತದೆ.
ಇದನ್ನೂ ಓದಿ: Big Bazaar Jobs: ಬಿಗ್ ಬಜಾರ್ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 48,000 ಸಂಬಳ
ಇತರೆ ಕೌಶಲ್ಯಗಳು:
ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಮತ್ತು ವ್ಯವಹರಿಸಲು ತಿಳಿದಿರಬೇಕು.
ಟೈಂ ಮ್ಯಾನೇಜ್ಮೆಂಟ್ ಸ್ಕಿಲ್ ಡೆವಲಪಿಂಗ್ ಬಗ್ಗೆ ಉತ್ತಮ ಜ್ಞಾನ ಹೊಂದಿರಬೇಕು.
ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ಅನಾಲಿಟಿಕಲ್ ಸ್ಕಿಲ್ ಹೊಂದಿರಬೇಕು.
ಟೀಂ ವರ್ಕ್ ಸ್ಕಿಲ್ ಡೆವಲಪಿಂಗ್ ಬಗ್ಗೆ ತಿಳಿದಿರಬೇಕು.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಫೆಬ್ರವರಿ 11, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 28, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ