Amazon Recruitment 2023: ಅಮೆರಿಕಾದ ಮಲ್ಟಿನ್ಯಾಷನಲ್ ಟೆಕ್ನಾಲಜಿ ಕಂಪನಿಯಾದ ಅಮೆಜಾನ್(Amazon) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಮೆಜಾನ್ ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಆನ್ಲೈನ್ ಜಾಹೀರಾತು, ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಕೇಂದ್ರೀಕರಿಸುವ ದೈತ್ಯ ಕಂಪನಿಯಾಗಿದೆ. ಇಲ್ಲಿ ಆಪರೇಷನ್ಸ್ ಮ್ಯಾನೇಜರ್(Opeartions Manager) ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಅಮೆಜಾನ್ |
ಹುದ್ದೆ | ಆಪರೇಷನ್ಸ್ ಮ್ಯಾನೇಜರ್ |
ವೇತನ | ನಿಯಮಾನುಸಾರ |
ಅನುಭವ | 1-13 ವರ್ಷ |
ಉದ್ಯೋಗದ ಸ್ಥಳ | ಬೆಂಗಳೂರು |
ವಿದ್ಯಾರ್ಹತೆ | ಪದವಿ (ಬಿಇ/ಬಿಟೆಕ್) |
ಅರ್ಜಿ ಸಲ್ಲಿಸಲು ಕೊನೆ ದಿನ | 18/01/2023 |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.
ಉದ್ಯೋಗದ ಸ್ಥಳ:
ಆಪರೇಷನ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಇದನ್ನೂ ಓದಿ: IDBI Recruitment 2023: ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ IDBI ಬ್ಯಾಂಕ್
ವೇತನ:
ಆಪರೇಷನ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ನಿಯಮಾನುಸಾರ ವೇತನ ಕೊಡಲಾಗುತ್ತದೆ.
ಅನುಭವ:
ಟೆಕ್ನಿಕಲ್ ಸಪೋರ್ಟ್, ಎಂಜಿನಿಯರಿಂಗ್/ ಆಪರೇಷನ್ಸ್ ಎನ್ವಿರಾನ್ಮೆಂಟ್ನಲ್ಲಿ 10 ವರ್ಷಕ್ಕೂ ಹೆಚ್ಚು ಕೆಲಸ ಮಾಡಿದ ಅನುಭವ, ಜೊತೆಗೆ ಮ್ಯಾನೇಜಿಂಗ್ ಟೆಕ್ನಿಕಲ್ ಟೀಮ್ಸ್ ನಿರ್ವಹಣೆ ಮಾಡುವಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಅಭ್ಯರ್ಥಿಯು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ