Job Alert: CredRನಲ್ಲಿದೆ ಲಾಜಿಸ್ಟಿಕ್​ ಎಕ್ಸ್​​ಪರ್ಟ್​ ಹುದ್ದೆ; ಎಸ್​ಎಸ್​ಎಲ್​ಸಿ ಆಗಿದ್ರೆ ಅರ್ಜಿ ಸಲ್ಲಿಸಿ

ಸಂಸ್ಥೆಯ ಲಾಜಿಸ್ಟಿಕ್​ ವಿಭಾಗದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಲಾಜಿಸ್ಟಿಕ್​ ಎಕ್ಸ್​​ಪರ್ಟ್​ ಹುದ್ದೆ

ಲಾಜಿಸ್ಟಿಕ್​ ಎಕ್ಸ್​​ಪರ್ಟ್​ ಹುದ್ದೆ

  • Share this:
    ಉಪಯೋಗಿಸಿದ ಬೈಕ್​ಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಹೆಸರಾಗಿರುವ ಬೆಂಗಳೂರು ಮೂಲದ ಕ್ರೇಡ್​​ಆರ್ (CredR)​ ಸಂಸ್ಥೆ ಇದೀಗ ಉದ್ಯೋಗ ನೇಮಕಾತಿಗೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಹೆಸರಾಗಿರುವ ಸಂಸ್ಥೆ ಇದೀಗ ಲಾಜಿಸ್ಟಿಕ್​ ಎಕ್ಸ್​ಪರ್ಟ್ (Logistic Expert)​ ಹುದ್ದೆ ಭರ್ತಿಗೆ ಮುಂದಾಗಿದೆ. ಎಸ್​ಎಸ್​ಎಲ್​ಸಿ ಪಾಸಾಗಿದ್ದು, ಮುಂದೆ ಯಾವ ಕೆಲಸ ಮಾಡುವುದು ಎಂದು ಯೋಚಿಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ.

    ಆಟೋಮೊಬೈಲ್​ ಕ್ಷೇತ್ರದ ಬಗ್ಗೆ ಕೊಂಚ ಅರಿವಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಲಾಜಿಸ್ಟಿಕ್​ ವಿಭಾಗದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆCredR
    ಹುದ್ದೆಲಾಜಿಸ್ಟಿಕ್​​​ ಎಕ್ಸ್​ಪರ್ಟ್
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಅಹಮದಾಬಾದ್​, ದೆಹಲಿ, ಜೈಪುರ, ಹೈದ್ರಾಬಾದ್​​
    ವೇತನಕಂಪನಿಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಅನುಸಾರ  ಅಭ್ಯರ್ಥಿಯು 10 ನೇ ತರಗತಿ ಪಾಸ್​ ಆಗಿರಬೇಕು.

    ಇದನ್ನು ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿದೆ ಉದ್ಯೋಗ; ಇಲ್ಲಿದೆ ಹುದ್ದೆ ವಿವರ

    ಹುದ್ದೆಯ ಜವಾಬ್ದಾರಿ (Jobs Roles And Responsibility)

    -ಅಭ್ಯರ್ಥಿಗಳು ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ಬೈಕ್​ಗಳನ್ನು ನಿಗದಿತ ಸ್ಥಳಗಳಿಗೆ ವಿತರಿಸಬೇಕು.
    -ಬೈಕ್​ಗಳನ್ನು ಗ್ರಾಹಕರಿಗೆ ವಿತರಿಸುವ ಮತ್ತು ಅವರಿಂದ ಪಡೆಯಬೇಕು.
    -ಬೈಕ್​ಗಳನ್ನು ಕೇಂದ್ರಕ್ಕೆ ತಲುಪಿಸುವ ಮುನ್ನ ಬೈಕ್​ನ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಬೇಕು.
    -ಬೈಕ್​ ಕಾರ್ಯಾಚರಣೆಯ ಸಮಸ್ಯೆ ಬಗ್ಗೆ ಅಲ್ಪ ಅರಿವಿರಬೇಕು.
    -ಅಭ್ಯರ್ಥಿಗಳ ಬಳಿ ಕಡ್ಡಾಯವಾಗಿ ಡ್ರೈವಿಂಗ್​ ಲೆಸೆನ್ಸ್​ ಇರಬೇಕು.
    -ಅಭ್ಯರ್ಥಿಗಳ ಬಗ್ಗೆ ಸ್ಮಾರ್ಟ್​ ಫೋನ್​ ಇದ್ದು, ಆ್ಯಪ್​ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com
    ಅಧಿಕೃತ ವೆಬ್​ಸೈಟ್​: credr.com

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಇದನ್ನು ಓದಿ: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ, ಕ್ರೇಡ್​ಆರ್​ ನೀಡುತ್ತಿದೆ ಅವಕಾಶ; ಮಿಸ್​ ಮಾಡಬೇಡಿ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: