• ಹೋಂ
  • »
  • ನ್ಯೂಸ್
  • »
  • Jobs
  • »
  • UPSC, KAS, RRB ಸೇರಿದಂತೆ ಹಲವು ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ; ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30

UPSC, KAS, RRB ಸೇರಿದಂತೆ ಹಲವು ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ; ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Competitive Exam coaching: ಸರ್ಕಾರದಿಂದ ನೀಡುವ ಈ ತರಬೇತಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಇದಕ್ಕಾಗಿ ರ್ನಾಟಕ ಪರೀಕ್ಷಾ ಪ್ರಾಧಿಕಾರ ಆಸಕ್ತ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ. ಇದರಲ್ಲಿ ಪಾಸ್​ ಆದ ಅಭ್ಯರ್ಥಿಗಳಿಗೆ ತರಬೇತಿ ಸಿಗಲಿದೆ

  • Share this:

ಯುಪಿಎಸ್​ಸಿ, ಕೆಎಸ್​, ಆರ್​ಆರ್​ಬಿ ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗ ಪಡೆಯಲು ಅನೇಕ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಅಧ್ಯಯನ ನಡೆಸುತ್ತಾರೆ. ಈ ವೇಳೆ ಅವರಿಗೆ ಸರಿಯಾದ ಮಾರ್ಗದರ್ಶನ ಕೂಡ ಅವಶ್ಯಕವಾಗಿದೆ. ಇದೇ ಹಿನ್ನಲೆ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ಭಾವಿಯಾಗಿ ಉಚಿತವಾಗಿ ಉತ್ತಮ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಈ ತರಬೇತಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ ಮಾತ್ರ ಆಗಿದೆ. ಪ್ರಸಕ್ತ ಸಾಲಿನ ತರಬೇತಿಗೆ ಸದ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30 ಆಗಿದೆ. ಈ ತರಬೇತಿ ವೇಳೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಶಿಷ್ಯ ವೇತನ ಮತ್ತು ತರಬೇತಿ ವೆಚ್ಚವನ್ನು ಕೂಡ ಸರ್ಕಾರವೇ ಪಾವತಿ ಮಾಡಲಿದೆ.


ತರಬೇತಿ ಪಡೆಯುವುದು ಹೇಗೆ?
ಸರ್ಕಾರದಿಂದ ನೀಡುವ ಈ ತರಬೇತಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಇದಕ್ಕಾಗಿ ರ್ನಾಟಕ ಪರೀಕ್ಷಾ ಪ್ರಾಧಿಕಾರ ಆಸಕ್ತ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ. ಇದರಲ್ಲಿ ಪಾಸ್​ ಆದ ಅಭ್ಯರ್ಥಿಗಳಿಗೆ ತರಬೇತಿ ಸಿಗಲಿದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


ಯಾವ ಯಾವ ಕೋರ್ಸ್​ಗಳಿಗೆ ತರಬೇತಿ
ಅಭ್ಯರ್ಥಿಗಳಿಗೆ ಯುಪಿಎಸ್​ಸಿ, ಕೆಎಎಸ್​, ಬ್ಯಾಂಕಿಂಗ್​, ಗ್ರೂಪ್​ ಸಿ, ಎಸ್​ಎಸ್​ಸಿ ಮತ್ತು ಆರ್​ಆರ್​ಬಿ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುವುದು


ತರಬೇತಿ ಅವಧಿ
ಯುಪಿಎಸ್​ಸಿಗೆ 9 ತಿಂಗಳ ತರಬೇತಿ ನೀಡಲಾಗುವುದು
ಕೆಎಎಸ್​ಗೆ 7 ತಿಂಗಳ ತರಬೇತಿ ನೀಡಲಾಗುವುದು
ಗ್ರೂಪ್​ ಸಿಗೆ 3 ತಿಂಗಳ ತರಬೇತಿ ನೀಡಲಾಗುವುದು.
ಬ್ಯಾಂಕಿಂಗ್​, ಎಸ್​ಎಸ್ಸಿ , ಮತ್ತು ಆರ್​ಆರ್​ಬಿಗೂ ಕೂಡ ತಲಾ ಮೂರು ತಿಂಗಳ ತರಬೇತಿ ನೀಡಲಾಗುವುದು


ಇದನ್ನು ಓದಿ: ಸೇನೆ ಸೇರಬೇಕು ಎಂಬ ಮಹಿಳೆಯರಿಗೆ Good News​: ಮೇನಲ್ಲಿ ನಡೆಯಲಿದೆ NDA Exam


ವಯಸ್ಸು
ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಸಕ್ತ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿದ್ದು ಗರಿಷ್ಠ 40 ವರ್ಷ ವಯೋಮಿತಿ ಹೊಂದಿರಬೇಕು


ವಿದ್ಯಾರ್ಹತೆ
ಯುಪಿಎಸ್ಸಿಗೆ ಅಭ್ಯರ್ಥಿಗಳು ಪದವಿಯಲ್ಲಿ ಉತ್ತೀರ್ಣರಾಗಿದ್ದು, ಶೇ 55ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.  ಕೆಎಎಸ್​, ಗ್ರೂಪ್​ ಸಿ, ಬ್ಯಾಂಕಿಂಗ್​, ಆರ್​ಆರ್​ಬಿ ಮತ್ತು ಎಸ್ಎಸ್​ಸಿಗೆ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಪದವಿಯಲ್ಲಿ ಶೇ 50 ಅಂಕ ಗಳಿಸಿರಬೇಕು


ಇದನ್ನು ಓದಿ: ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್​, ಟೈಪಿಸ್ಟ್​ ಹುದ್ದೆ ಖಾಲಿ; SSLC ಪಾಸ್​ ಆಗಿದ್ರೆ ಸಾಕು


ವಿಶೇಷ ಸೂಚನೆ
ಈ ತರಬೇತಿಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರಬೇಕು. ಅಭ್ಯರ್ಥಿಗಳ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ 5 ಲಕ್ಷ ಮೀರಿರಬಾರದು.


ಶಿಷ್ಯ ವೇತನ
ಯುಪಿಎಸ್​ಸಿ ತರಬೇತಿ ದೆಹಲಿಯಲ್ಲಿ ಪಡೆದರೆ ತಿಂಗಳಿಗೆ 10 ಸಾವಿರ, ಹೈದರಾಬಾದ್​ನಲ್ಲಿ ಪಡೆದರೆ 8 ಸಾವಿರ, ಬೆಂಗಳೂರಿನಲ್ಲಿ ಪಡೆದ 6 ಸಾವಿರ ಮತ್ತು ಇತರೆ ಸ್ಥಳಗಳಲ್ಲಿ ಪಡೆದರೆ 5 ಸಾವಿರ ಶಿಷ್ಯ ವೇತನ ನೀಡಲಾಗುವುದು.


ಇನ್ನು ಕೆಎಎಸ್​, ಬ್ಯಾಂಕಿಂಗ್​, ಗ್ರೂಪ್​ ಸಿ ಇತರೆ ಹುದ್ದೆಗೆ ಬೆಂಗಳೂರು, ಧಾರವಾಡ, ಬೆಳಗಾಂ, ದಾವಣಗರೆ ಇತರೆ ಸ್ಥಳಗಳಲ್ಲಿ ಸ್ಥಳೀಯ ಅಭ್ಯರ್ಥಿಗೆ 4ಸಾವಿರ ಮತ್ತು ಹೊರ ಜಿಲ್ಲೆ ಅಭ್ಯರ್ಥಿಗಳಿಗೆ 5 ಸಾವಿರ ಶಿಷ್ಯ ವೇತನ ನೀಡಲಾಗುವುದು.


ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು https://sw.kar.nic.in/ ಈ ಜಾಲತಾಣಕ್ಕೆ ಭೇಟಿ ನೀಡಬೇಕು. ಇಲ್ಲಿ ಅರ್ಜಿಯನ್ನು ಸಂಪೂರ್ಣವಾಗಿ ಓದಿ ನಂತರ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30 ಆಗಿದೆ.

top videos
    First published: