ಬೆಂಗಳೂರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಸುದ್ದಿ ಸಂಪಾದಕರು, ವರದಿಗಾರರು ಹಾಗೂ ಸಾಂದರ್ಭಿಕ ಸುದ್ದಿ ವಾಚಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಒಪ್ಪಂದ ಮೇರೆಗೆ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 10 ಆಗಿದೆ.
ಹುದ್ದೆ ಮಾಹಿತಿ |
ವಿವರ |
ಸಂಸ್ಥೆ |
ಪ್ರಸಾರ ಭಾರತಿ |
ಉದ್ಯೋಗ ಸ್ಥಳ |
ಬೆಂಗಳೂರು ಆಕಾಶವಾಣಿ ಕಚೇರಿ |
ಹುದ್ದೆಗಳು |
ಸುದ್ದಿ ಸಂಪಾದಕರು, ವರದಿಗಾರರು ಹಾಗೂ ಸಾಂದರ್ಭಿಕ ಸುದ್ದಿ ವಾಚಕರು |
ಒಟ್ಟು ಹುದ್ದೆಗಳು |
ನಿಗದಿ ಪಡಿಸಿಲ್ಲ. |
ಕಾರ್ಯ ನಿರ್ವಹಿಸುವ ಸ್ಥಳ |
ಬೆಂಗಳೂರು |
ವಿದ್ಯಾರ್ಹತೆ:
ಸುದ್ದಿ ಸಂಪಾದಕರು ಹಾಗೂ ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ಪತ್ರಿಕೋದ್ಯಮದಲ್ಲಿ ಪದವಿ, ಅಥವಾ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಹೊಂದಿರಬೇಕು.
ಅನುವಾದಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರಬೇಕು.
ಸುದ್ದಿ ವಾಚಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿಯನ್ನು ಹೊಂದಿರಬೇಕು.
ಅನುಭವ:
ಸುದ್ದಿ ಸಂಪಾದಕರು ಹಾಗೂ ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪತ್ರಿಕೆ, ಟಿವಿ ಮಾಧ್ಯಮದಲ್ಲಿ ಐದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅನುವಾದಕರ ಹುದ್ದೆ ಹಾಗೂ ಸುದ್ದಿ ವಾಚಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೇಡಿಯೋ ಅಥವಾ ಟಿವಿ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ ಕಂಪ್ಯೂಟರ್ ಅಪ್ಲಿಕೇಷನ್ ಸಾಮಾನ್ಯ ಜ್ಞಾನ ಇರಬೇಕು.
ವಯೋಮಿತಿ:
ಅಧಿಕೃತ ಅಧಿಸೂಚನೆ ಅನುಸಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ರಿಂದ 50 ವರ್ಷ ವಯೋಮಿತಿ ಹೊಂದಿರಬೇಕು.
ವೇತನ: ಬೆಂಗಳೂರು ಆಕಾಶವಾಣಿ ನಿಯಮ ಅನುಸಾರ
ಅರ್ಜಿ ಸಲ್ಲಿಕೆ
ಆಫ್ಲೈನ್
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 225 ರೂ.
ಇದನ್ನು ಓದಿ: ಈಶಾನ್ಯ ಗಡಿ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 5636 ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ ಸಲ್ಲಿಸುವ ವಿಧಾನ
ಅರ್ಜಿಯನ್ನು The Station Director, All India Radil, Bengaluru ಇವರ ಹೆಸರಿಗೆ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಪ್ರಮುಖ ಸೂಚನೆ:
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 10 ಆಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
- ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿಗಳ ದಾಖಲೆಗಳನ್ನು ಸಿದ್ದಪಡಿಸಿ.
ಇದನ್ನು ಓದಿ: ಐಡಿಬಿಐ ಬ್ಯಾಂಕ್ನಲ್ಲಿ 1544 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಇದರ ಜೊತೆಗೆ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್ ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ ಅಂಚೆ, ಸ್ಪೀಡ್ ಪೋಸ್ಟ್ ಅಥವಾ ಖುದ್ದಾಗಿ ಈ ವಿಳಾಸಕ್ಕೆ ತಲುಪಿಸಬೇಕು.
- ದಿ ಡೆಪ್ಯುಟಿ ಜನರಲ್ (ಇ) ಅನದ ಎಚ್.ಓ,ಓ, ರೀಜಿನಲ್ ನ್ಯೂಸ್ ಯುನಿಟ್, ಆಲ್ ಇಂಡಿಯಾ ರೇಡಿಯೋ, ರಾಜ್ ಭವನ್ ರಸ್ತೆ, ಬೆಂಗಳೂರು -560001.
ಹೆಚ್ಚಿನ ಮಾಹಿತಿಗೆ 8317466729, 9448159726, 080 22356344, 22373000 ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ ಎಂದು ಪ್ರಸಾರ ಭಾರತಿ ಪ್ರಕಟಣೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ