Prasar Bharati Recruitment 2022: ಸುದ್ದಿ ವಾಚಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಪ್ರಸಾರ ಭಾರತಿ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

ಸುದ್ದಿ ವಾಚಕ ಕಮ್​ ಭಾಷಾಂತರಕಾರ ಮತ್ತು ಕ್ಯಾಶುಯಲ್​ ರಿಪೋರ್ಟರ್​, ಎಡಿಟರ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

 • Share this:
  ಪ್ರಸಾರ ಭಾರತಿಯ (Prasar Bharati) ಆಲ್​ ಇಂಡಿಯಾ ರೇಡಿಯೋದಲ್ಲಿ (ALL India Radio) ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸುದ್ದಿ ವಾಚಕ ಕಮ್​ ಭಾಷಾಂತರಕಾರ (News Reader cum Translator) ಮತ್ತು ಕ್ಯಾಶುಯಲ್​ ರಿಪೋರ್ಟರ್​, ಎಡಿಟರ್ (Reporter/Editor)​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 28 ಆಗಿದೆ.

  ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಮಿಜೋರಾಂನಲ್ಲಿ ಕಾರ್ಯ ನಿರ್ವಹಣೆಯನ್ನು ಮಾಡಬೇಕಿದ್ದು, ಅಭ್ಯರ್ಥಿ ಮಿಜೋ-ಇಂಗ್ಲಿಷ್​ ಭಾಷೆಯಲ್ಲಿ ಹಿಡಿತ ಹೊಂದಿರಬೇಕು. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.  ಹುದ್ದೆ ಮಾಹಿತಿಹುದ್ದೆ ವಿವರ
  ಸಂಸ್ಥೆಪ್ರಸಾರ ಭಾರತಿ
  ಹುದ್ದೆಯ ಹೆಸರುಸುದ್ದಿ ವಾಚಕ ಕಮ್​ ಭಾಷಾಂತರಕಾರ, ವರದಿಗಾರ/ಸಂಪಾದಕ
  ಒಟ್ಟು ಹುದ್ದೆ ಸಂಖ್ಯೆನಿರ್ದಿಷ್ಟಪಡಿಸಿಲ್ಲ
  ಕಾರ್ಯ ನಿರ್ವಹಣೆ ಸ್ಥಳಮಿಜೋರಾಂ
  ವೇತನಪ್ರಸಾರ ಭಾರತಿ ನಿಯಮ ಅನುಸಾರ

  ಶೈಕ್ಷಣಿಕ ಅರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ/ ಸಮೂಹ ಸಂವಹನದಲ್ಲಿ ಪಿಜಿ ಡಿಪ್ಲೊಮಾ/ ಎಂಎ ಜೊತೆಗೆ ಯಾವುದೇ ವಿಭಾಗಗಳಲ್ಲಿ ಪದವಿಯನ್ನು ಹೊಂದಿರಬೇಕು.

  ಇದನ್ನು ಓದಿ: ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬೃಹತ್​ ನೇಮಕಾತಿ; 437 ಹುದ್ದೆ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ

  ವಯೋಮಿತಿ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯ ವಯಸ್ಸು ಗರಿಷ್ಟ 45 ವರ್ಷ ಮೀರಿರಬಾರದು.

  ಅರ್ಜಿ ಸಲ್ಲಿಕೆ : ಆನ್​​ಲೈನ್

  ಅರ್ಜಿ ಶುಲ್ಕ:
  ಪ.ಜಾ, ಪ.ಪಂ ಮತ್ತು ಒಬಿಸಿ: 225 ರೂ
  ಸಾಮಾನ್ಯ ಅಭ್ಯರ್ಥಿಗಳು: 300 ರೂ

  ಅರ್ಜಿ ಶುಲ್ಕ ಪಾವತಿ: ಡಿಮ್ಯಾಂಡ್​ ಡ್ರಾಫ್ಟ್​

  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ ಮತ್ತು ಸಂದರ್ಶನ

  ಪ್ರಮುಖ ದಿನಾಂಕಗಳು:
  ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17 ಸೆಪ್ಟೆಂಬರ್​ 2022
  ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಸೆಪ್ಟೆಂಬರ್​ 2022

  ಇದನ್ನು ಓದಿ: ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

  ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: prasarbharati.gov.in

  ಅರ್ಜಿ ಸಲ್ಲಿಕೆ ಪ್ರಕ್ರಿಯೆ:

  ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

  -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

  - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

  - ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಲೋಡ್​ ಮಾಡಿ.

  -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
  Published by:Seema R
  First published: