ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ(Pradhan Mantri National Apprenticeship Mela (PMNAM))ವು ಇದೇ ಡಿಸೆಂಬರ್ 12ರಂದು ನಡೆಯಲಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ(The Ministry of Skill Development and Entrepreneurship)ವು ಹೇಳಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ apprenticeshipindia.gov.in ನಲ್ಲಿ ಈವೆಂಟ್ಗೆ ನೋಂದಾಯಿಸಿಕೊಳ್ಳಬಹುದು.
ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳವನ್ನು ಈ ವರ್ಷ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 197 ಸ್ಥಳಗಳಲ್ಲಿ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಲೋಕಲ್ ಬ್ಯುಸಿನೆಸ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅದರಂತೆ ಸ್ಥಳೀಯ ಯುವಕರಿಗೆ ಅಪ್ರೆಂಟಿಸ್ಶಿಪ್ ತರಬೇತಿ ನೀಡುವ ಮೂಲಕ ಅವರು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಅವಕಾಶವನ್ನು ಒದಗಿಸಲಾಗುತ್ತಿದೆ. ಅಪ್ರೆಂಟಿಸ್ ಶಿಪ್ ಮೇಳದಲ್ಲಿಯೇ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಂಪನಿಗಳಿಗೆ ಅವಕಾಶವಿರುತ್ತದೆ.
ಈ ಅಪ್ರೆಂಟಿಸ್ ಶಿಪ್ ಮೇಳದ ಮೂಲಕ ಸರ್ಕಾರವು ವರ್ಷಕ್ಕೆ 1 ಮಿಲಿಯನ್ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: JNCASR Recruitment 2022: ಡಿಪ್ಲೊಮಾ, ಡಿಗ್ರಿ ಆಗಿದ್ರೆ ರೆಸ್ಯೂಮ್ ಇ-ಮೇಲ್ ಮಾಡಿ-ಇಲ್ಲಿದೆ ಸರ್ಕಾರಿ ಕೆಲಸ
ಅಷ್ಟೇ ಅಲ್ಲದೇ, ಈ ಮೇಳದ ಮೂಲಕ ಅಭ್ಯರ್ಥಿಗಳು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್(NCVET) ಮಾನ್ಯತೆ ಪಡೆದ ಪ್ರಮಾಣ ಪತ್ರಗಳನ್ನು ಪಡೆಯುತ್ತಾರೆ. ಇದು ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಕೆಲಸ ಪಡೆಯಲು ಸಹಕಾರಿಯಾಗಿದೆ.
ಈ ಅಪ್ರೆಂಟಿಸ್ ಶಿಪ್ ಮೇಳದಲ್ಲಿ ಭಾಗಿಯಾಗುವ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.
ಅಭ್ಯರ್ಥಿಯು 5ನೇ ತರಗತಿಯಿಂದ 12ನೇ ತರಗತಿಯವರೆಗೆ ತೇರ್ಗಡೆಯಾಗಿರಬೇಕು.
ITI, ಡಿಪ್ಲೋಮಾ, ಪದವೀಧರರು ಕೌಶಲ್ಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ ಮೂರು ಪ್ರತಿಗಳು, ಫೋಟೋ ಐಡಿ (ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಇತ್ಯಾದಿ) ಮತ್ತು 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರ(ಫೋಟೋ)ಗಳನ್ನು ಅಪ್ರೆಂಟಿಸ್ ಶಿಪ್ ಮೇಳಕ್ಕೆ ತೆಗೆದುಕೊಂಡು ಹೋಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ