Post Office Recruitment 2021: ತಿಂಗಳಿಗೆ ₹81,100 ಸಂಬಳ, 10th, 12th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ

ಆಸಕ್ತರು ಆಫ್​ಲೈನ್​(ಪೋಸ್ಟ್) ಮೂಲಕ ನವೆಂಬರ್ 12ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 1ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Post Office Recruitment 2021: ಭಾರತೀಯ ಅಂಚೆ ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಒಟ್ಟು 221 ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. e

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.











































ಸಂಸ್ಥೆ ಭಾರತೀಯ ಅಂಚೆ ಇಲಾಖೆ
ಹುದ್ದೆಯ ಹೆಸರು ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು 221
ಜಾಹೀರಾತು ಸಂಖ್ಯೆ R&E/R-1/Rectt-Sports/2014/Pt-II
ವಿದ್ಯಾರ್ಹತೆ  10ನೇ ತರಗತಿ, 12ನೇ ತರಗತಿ ಪಾಸ್
ಸಂಬಳ ಮಾಸಿಕ ₹ 18,000-81,100
ಉದ್ಯೋಗದ ಸ್ಥಳ ದೆಹಲಿ
ಅರ್ಜಿ ಸಲ್ಲಿಸುವ ವಿಧಾನ ಆಫ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 01/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/11/2021

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12/11/2021



ಇದನ್ನೂ ಓದಿ:India Post GDS Recruitment 2021: 10ನೇ ತರಗತಿ ಪಾಸಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಅರ್ಜಿ ಶುಲ್ಕ:

ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಭಾರತದ ಯಾವುದೇ ಗಣಕೀಕೃತ ಪೋಸ್ಟ್​ ಆಫೀಸ್​​ನಲ್ಲಿ ಚಲನ್ ಬಳಸಿ, ಇ-ಪೇಮೆಂಟ್ ಮಾಡಬಹುದು. ಒಂದು ಬಾರಿ ಪಾವತಿಯಾದ ಬಳಿಕ ಆ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

ಹುದ್ದೆಯ ಮಾಹಿತಿ:

ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್- 72 ಹುದ್ದೆಗಳು
ಪೋಸ್ಟ್​ಮ್ಯಾನ್- 90 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್- 59 ಹುದ್ದೆಗಳು
ಒಟ್ಟು: 221 ಹುದ್ದೆಗಳು

ವಿದ್ಯಾರ್ಹತೆ:

ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್​ ಅಸಿಸ್ಟೆಂಟ್ -12 ನೇ ತರಗತಿ ಪಾಸಾಗಿರಬೇಕು.
ಪೋಸ್ಟ್​ ಮ್ಯಾನ್-12 ನೇ ತರಗತಿ ಪಾಸಾಗಿರಬೇಕು
ಮಲ್ಟಿ-ಟಾಸ್ಕಿಂಗ್ ಸ್ಟಾಫ್-10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಪೋಸ್ಟಲ್​ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್​ -18ರಿಂದ27 ವರ್ಷಗಳು
ಮಲ್ಟಿ- ಟಾಸ್ಕಿಂಗ್ ಸ್ಟಾಫ್-18ರಿಂದ 25 ವರ್ಷಗಳು

ಇದನ್ನೂ ಓದಿ:Post Office Recruitment 2021: ತಿಂಗಳಿಗೆ ₹ 34,800 ಸಂಬಳ; ಮೈಸೂರು ಪೋಸ್ಟಲ್​ ಟ್ರೈನಿಂಗ್ ಸೆಂಟರ್​ನಲ್ಲಿ ಉದ್ಯೋಗ



ಸಂಬಳ:

ಪೋಸ್ಟಲ್​ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್- ಮಾಸಿಕ ₹25,500-81,100
ಪೋಸ್ಟ್​ ಮ್ಯಾನ್- ಮಾಸಿಕ ₹21,700-69,100
ಮಲ್ಟಿ ಟಾಸ್ಕಿಂಗ್ ಸ್ಟಾಫ್​- ಮಾಸಿಕ ₹18,000-56,900

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: