• Home
  • »
  • News
  • »
  • jobs
  • »
  • Post Office Jobs: ಭಾರತೀಯ ಅಂಚೆ ಇಲಾಖೆಯಲ್ಲಿ 1 ಲಕ್ಷ ಹುದ್ದೆಗಳು ಖಾಲಿ, 10th, PU ಪಾಸಾದವರು ಅರ್ಜಿ ಹಾಕಿ

Post Office Jobs: ಭಾರತೀಯ ಅಂಚೆ ಇಲಾಖೆಯಲ್ಲಿ 1 ಲಕ್ಷ ಹುದ್ದೆಗಳು ಖಾಲಿ, 10th, PU ಪಾಸಾದವರು ಅರ್ಜಿ ಹಾಕಿ

ಅಂಚೆ ಇಲಾಖೆ

ಅಂಚೆ ಇಲಾಖೆ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಪೋಸ್ಟ್​ ಮ್ಯಾನ್​, ಮೇಲ್​​ ಗಾರ್ಡ್ಸ್​, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ಮೀರಿರಬಾರದು.

  • Share this:

    ಭಾರತೀಯ ಅಂಚೆ ಇಲಾಖೆ(India Post Office)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಕೇಂದ್ರ ಸರ್ಕಾರದ ಉದ್ಯೋಗ(Central Government Job) ಬಯಸುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಟ್ಟು 1,10,229 ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ಮ್ಯಾನ್ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​ಲೈನ್​(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಟಿ ನೀಡಬಹುದಾಗಿದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಅಂಚೆ ಇಲಾಖೆ
    ಹುದ್ದೆಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್​ಮ್ಯಾನ್
    ಒಟ್ಟು ಹುದ್ದೆ1,10,229
    ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ
    ವೇತನಮಾಸಿಕ ₹ 18,000-81,100
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ಸರ್ಕಲ್ ಆಧಾರಿತ ಹುದ್ದೆಗಳ ಮಾಹಿತಿ ಇಲ್ಲಿದೆ:


    ಆಂಧ್ರ ಪ್ರದೇಶ ಸರ್ಕಲ್- 4957
    ಅಸ್ಸಾಂ ಸರ್ಕಲ್- 1897
    ಬಿಹಾರ ಸರ್ಕಲ್-4053
    ಛತ್ತೀಸ್​ಗಢ ಸರ್ಕಲ್-1338
    ದೆಹಲಿ ಸರ್ಕಲ್- 3641
    ಗುಜರಾತ್ ಸರ್ಕಲ್- 6542
    ಹರಿಯಾಣ ಸರ್ಕಲ್- 2105
    ಹಿಮಾಚಲ ಪ್ರದೇಶ ಸರ್ಕಲ್- 1540
    ಜಮ್ಮು & ಕಾಶ್ಮೀರ ಸರ್ಕಲ್- 875
    ಜಾರ್ಖಂಡ್​-2489
    ಕರ್ನಾಟಕ ಸರ್ಕಲ್-7258
    ಕೇರಳ ಸರ್ಕಲ್- 6095
    ಮಧ್ಯ ಪ್ರದೇಶ ಸರ್ಕಲ್- 4341
    ಮಹಾರಾಷ್ಟ್ರ ಸರ್ಕಲ್- 13,225
    NE ಸರ್ಕಲ್-1095
    ಒಡಿಶಾ ಸರ್ಕಲ್- 3809
    ಪಂಜಾಬ್ ಸರ್ಕಲ್- 3629
    ರಾಜಸ್ಥಾನ ಸರ್ಕಲ್-4634
    ತಮಿಳುನಾಡು ಸರ್ಕಲ್- 12,415
    ತೆಲಂಗಾಣ ಸರ್ಕಲ್-2826
    ಉತ್ತರಾಖಂಡ ಸರ್ಕಲ್-1554
    ಉತ್ತರ ಪ್ರದೇಶ ಸರ್ಕಲ್-11,052
    ಪಶ್ಚಿಮ ಬಂಗಾಳ ಸರ್ಕಲ್-8859


    ಇದನ್ನೂ ಓದಿ: Banking Jobs: ಎಂಜಿನಿಯರಿಂಗ್ ಪದವೀಧರರಿಗೆ ಇಲ್ಲಿದೆ ಉದ್ಯೋಗ-ಮಾಸಿಕ ವೇತನ 63,000


    ಪೋಸ್ಟ್​ ಆಧಾರಿತ ಹುದ್ದೆಗಳ ಮಾಹಿತಿ:
    ಪೋಸ್ಟ್​ಮ್ಯಾನ್​- 59,099
    ಮೇಲ್​ ಗಾರ್ಡ್ಸ್​- 1445
    ಮಲ್ಟಿ ಟಾಸ್ಕಿಂಗ್ ಸ್ಟಾಫ್​ (MTS)-37,539


    ಶೈಕ್ಷಣಿಕ ಅರ್ಹತೆ:
    ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಪೋಸ್ಟ್​ ಮ್ಯಾನ್​, ಮೇಲ್​​ ಗಾರ್ಡ್ಸ್​, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಸ್ಥಳೀಯ ಭಾಷೆಯ ಜ್ಞಾನವಿರಬೇಕು. ಕಂಪ್ಯೂಟರ್ ತಿಳುವಳಿಕೆ ಇರಬೇಕು. ದ್ವಿಚಕ್ರ ವಾಹನದ ಡ್ರೈವಿಂಗ್ ಲೈಸೆನ್ಸ್​ ಹೊಂದಿರಬೇಕು.


    ವಯೋಮಿತಿ:
    ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಪೋಸ್ಟ್​ ಮ್ಯಾನ್​, ಮೇಲ್​​ ಗಾರ್ಡ್ಸ್​, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
    PWD (ಜನರಲ್) ಅಭ್ಯರ್ಥಿಗಳು-10 ವರ್ಷ
    PWD(ಒಬಿಸಿ) ಅಭ್ಯರ್ಥಿಗಳು-13 ವರ್ಷ
    PWD (ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD/ಮಹಿಳಾ & ಟ್ರಾನ್ಸ್​ವುಮನ್ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
    ಎಲ್ಲಾ ಅಭ್ಯರ್ಥಿಗಳು- 100 ರೂ.
    ಪಾವತಿಸುವ ಬಗೆ-ಆನ್​ಲೈನ್​


    ಇದನ್ನೂ ಓದಿ: JOB ALERT: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 250 ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    Published by:Latha CG
    First published: