• Home
 • »
 • News
 • »
 • jobs
 • »
 • Post Office Jobs: ಅಂಚೆ ಇಲಾಖೆಯಲ್ಲಿ 41 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

Post Office Jobs: ಅಂಚೆ ಇಲಾಖೆಯಲ್ಲಿ 41 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

IPPB

IPPB

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು.

 • Share this:

  IPPB Recruitment 2022: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(India Post Payments Bank-IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಒಟ್ಟು 41 ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಮತ್ತು ಮ್ಯಾನೇಜರ್(Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(IPPB) ಭಾರತೀಯ ಅಂಚೆ ಇಲಾಖೆಯ ವಿಭಾಗವಾಗಿದೆ. ಅಂಚೆ ಇಲಾಖೆಯು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಅಂಚೆ ಇಲಾಖೆಯ ಮಾಲೀಕತ್ವದಲ್ಲಿದೆ. 2018 ರಲ್ಲಿ ಪ್ರಾರಂಭವಾದ IPPB ಜನವರಿ 2022ರ ಹೊತ್ತಿಗೆ 5 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ನವೆಂಬರ್ 18, 2022 ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
  ಹುದ್ದೆಯ ಹೆಸರುಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್
  ಒಟ್ಟು ಹುದ್ದೆ41
  ವಿದ್ಯಾರ್ಹತೆಬಿಸಿಎ, ಬಿಇ/ಬಿ.ಟೆಕ್, ಎಂಸಿಎ, ಎಂಎಸ್ಸಿ
  ವೇತನನಿಯಮಾನುಸಾರ
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ04/11/2022
  ಅರ್ಜಿ ಸಲ್ಲಿಸಲು ಕೊನೆ ದಿನ18/11/2022


  ಹುದ್ದೆಯ ಮಾಹಿತಿ:
  ಅಸಿಸ್ಟೆಂಟ್ ಮ್ಯಾನೇಜರ್(IT)-18
  ಮ್ಯಾನೇಜರ್(IT)-13
  ಸೀನಿಯರ್ ಮ್ಯಾನೇಜರ್(IT)-8
  ಚೀಫ್​ ಮ್ಯಾನೇಜರ್(IT)-2


  ಇದನ್ನೂ ಓದಿ: SSLC, PUC ಪಾಸಾದವರಿಗೆ ಪೋಸ್ಟ್​ ಆಫೀಸ್ ಜಾಬ್, ತಿಂಗಳಿಗೆ ₹ 81 ಸಾವಿರ ಸಂಬಳ


  ವಿದ್ಯಾರ್ಹತೆ:
  ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು ಅಥವಾ ಕಂಪ್ಯೂಟರ್​ ಸೈನ್ಸ್​ ವಿಭಾಗದಲ್ಲಿ ಎಂಸಿಎ, ಎಂಎಸ್ಸಿ ಪೂರ್ಣಗೊಳಿಸಿರಬೇಕು.


  ಉದ್ಯೋಗದ ಸ್ಥಳ: ಚೆನ್ನೈ, ನವದೆಹಲಿ, ಮುಂಬೈ


  ಇದನ್ನೂ ಓದಿ:JOB ALERT: ಸರ್ಕಾರಿ ಕೆಲಸ ಬೇಕು ಅಂದ್ರೆ ಇವತ್ತೇ ಅರ್ಜಿ ಹಾಕಿ, ವಿಕಾಸಸೌಧದಲ್ಲಿ ನ.9ಕ್ಕೆ ಸಂದರ್ಶನ


  ವಯೋಮಿತಿ:
  ಅಸಿಸ್ಟೆಂಟ್ ಮ್ಯಾನೇಜರ್(IT)- 20 ರಿಂದ 30 ವರ್ಷ
  ಮ್ಯಾನೇಜರ್(IT)- 23 ರಿಂದ 35 ವರ್ಷ
  ಸೀನಿಯರ್ ಮ್ಯಾನೇಜರ್(IT)-26 ರಿಂದ 35 ವರ್ಷ
  ಚೀಫ್​ ಮ್ಯಾನೇಜರ್(IT)- 29 ರಿಂದ 45 ವರ್ಷ


  ವಯೋಮಿತಿ ಸಡಿಲಿಕೆ:
  ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


  ಅರ್ಜಿ ಶುಲ್ಕ:
  ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು.
  ಪಾವತಿಸುವ ಬಗೆ- ಆನ್​ಲೈನ್​


  ಆಯ್ಕೆ ಪ್ರಕ್ರಿಯೆ:
  ಅಸೆಸ್ಮೆಂಟ್
  ಗ್ರೂಪ್ ಡಿಸ್ಕಸನ್
  ಆನ್​ಲೈನ್​ ಟೆಸ್ಟ್​
  ಸಂದರ್ಶನ


  ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ippbonline.com ಗೆ ಭೇಟಿ ನೀಡಬಹುದು.


  ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
  ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 18/11/2022

  Published by:Latha CG
  First published: