Karnataka Post Office Recruitment 2023: ಭಾರತೀಯ ಅಂಚೆ ಇಲಾಖೆ(Indian Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ಒಟ್ಟು 3036 ಪೋಸ್ಟ್ ಆಫೀಸ್ ಹುದ್ದೆಗಳು(Post Office Jobs) ಖಾಲಿ ಇವೆ. ಹೀಗಾಗಿ ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ. ಅಂಚೆ ಇಲಾಖೆಯಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟಲ್ಡ್ ಎಂದೇ ಅರ್ಥ. ಹೀಗಾಗಿ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 3036 ವಿವಿಧ ಹುದ್ದೆಗಳಿಗೆ ಈಗಲೇ ಅಪ್ಲೈ ಮಾಡಿ.
ಒಟ್ಟು 3036 ಗ್ರಾಮೀಣ ಡಕ್ ಸೇವಕ್ (GDS) ಹುದ್ದೆಗಳು ಖಾಲಿ ಇವೆ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಅರ್ಜಿ ಹಾಕಲು ಇದೇ ಫೆಬ್ರವರಿ 16, 2023 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಅಂಚೆ ಇಲಾಖೆ |
ಹುದ್ದೆ | ಗ್ರಾಮೀಣ ಡಕ್ ಸೇವಕ್ |
ಒಟ್ಟು ಹುದ್ದೆ | 3036 |
ವಿದ್ಯಾರ್ಹತೆ | 10ನೇ ತರಗತಿ |
ವೇತನ | ಮಾಸಿಕ ₹12,000-29380 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 16, 2023 |
ಬಾಗಲಕೋಟೆ-55
ಬಳ್ಳಾರಿ- 103
ಬೆಂಗಳೂರು GPO- 6
ಬೆಳಗಾವಿ-98
ಬೆಂಗಳೂರು ಪೂರ್ವ-90
ಬೆಂಗಳೂರು ದಕ್ಷಿಣ- 120
ಬೆಂಗಳೂರು ಪಶ್ಚಿಮ- 53
ಬೀದರ್- 40
ಚನ್ನಪಟ್ಟಣ- 119
ಚಿಕ್ಕಮಗಳೂರು- 116
ಚಿಕ್ಕೋಡಿ- 59
ಚಿತ್ರದುರ್ಗ- 84
ದಾವಣಗೆರೆ ಡಿವಿಶನಲ್ ಆಫೀಸ್- 67
ಧಾರವಾಡ- 67
ಗದಗ- 115
ಗೋಕಾಕ್- 34
ಹಾಸನ- 100
ಹಾವೇರಿ- 89
ಕಲಬುರಗಿ- 74
ಕಾರವಾರ- 63
ಕೊಡಗು- 73
ಕೋಲಾರ- 165
ಮಂಡ್ಯ- 40
ಮಂಗಳೂರು- 95
ಮೈಸೂರು - 73
ನಂಜನಗೂಡು- 76
ಪುತ್ತೂರು- 113
ರಾಯಚೂರು- 74
RMS HB- 1
RMS Q- 10
ಶಿವಮೊಗ್ಗ- 147
ಶಿರಸಿ- 78
ತುಮಕೂರು- 171
ಉಡುಪಿ- 68
ವಿಜಯಪುರ- 89
ಯಾದಗಿರಿ- 38
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 16, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ ST ಅಭ್ಯರ್ಥಿಗಳು- 5 ವರ್ಷ
PWD (ಜನರಲ್) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಇದನ್ನೂ ಓದಿ: Police Jobs: ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- PUC ಪಾಸಾದವರು ಅಪ್ಲೈ ಮಾಡಿ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಸಂದರ್ಶನ
ವೇತನ:
ಬಿಪಿಎಂ- ಮಾಸಿಕ ₹12,000-29380
ಎಬಿಪಿಎಂ/ ಡಕ್ ಸೇವಕ್- ಮಾಸಿಕ ₹10,000-24,470
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 16, 2023
ಅರ್ಜಿಯಲ್ಲಿ ಎಡಿಟ್/ತಿದ್ದುಪಡಿ/ಮಾರ್ಪಾಡು ಮಾಡಲು ಕೊನೆಯ ದಿನಾಂಕ: ಫೆಬ್ರವರಿ 17- 19, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ