• Home
  • »
  • News
  • »
  • jobs
  • »
  • PhonePe: ಬೆಂಗಳೂರಿಗೆ ಬರಲಿದೆ ಫೋನ್ ಪೇ ಆಫೀಸ್! ಕನ್ನಡಿಗರಿಗೆ ಸಿಗುತ್ತಾ ಉದ್ಯೋಗ?

PhonePe: ಬೆಂಗಳೂರಿಗೆ ಬರಲಿದೆ ಫೋನ್ ಪೇ ಆಫೀಸ್! ಕನ್ನಡಿಗರಿಗೆ ಸಿಗುತ್ತಾ ಉದ್ಯೋಗ?

ಫೋನ್ ಪೇ

ಫೋನ್ ಪೇ

PhonePe: ಸಾರ್ವಜನಿಕ ಪ್ರಕಟಣೆಯಲ್ಲಿ ಈ ಬಗ್ಗೆ ಸೂಚಿಸಿರುವ ಸಂಸ್ಥೆ ಮುಂಬೈನಲ್ಲಿರುವ ಫೋನ್‌ಪೇ ಕಚೇರಿಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸಲಾಗುತ್ತದೆ ಎಂಬ ಸೂಚನೆ ನೀಡಿದೆ.

  • Share this:

ಮಹಾರಾಷ್ಟ್ರದಲ್ಲಿ, ಇತ್ತೀಚೆಗೆ, ಬಹುರಾಷ್ಟ್ರೀಯ ಗಣಿ ಕಂಪನಿ ವೇದಾಂತ ಲಿಮಿಟೆಡ್ ತನ್ನ 20 ಶತಕೋಟಿ ಡಾಲರ್ (ರೂ. 1.54 ಲಕ್ಷ ಕೋಟಿ) ಸೆಮಿಕಂಡಕ್ಟರ್ ಯೋಜನೆಗಾಗಿ ಗುಜರಾತ್ ಅನ್ನು ಆಯ್ಕೆಮಾಡಿದ ನಂತರ ರಾಜಕೀಯದಲ್ಲಿ ಭಾರೀ ವಿವಾದ ಸ್ಫೋಟಗೊಂಡಿದೆ. ವೇದಾಂತ-ಫಾಕ್ಸ್‌ಕಾನ್ (Vedanta Foxconn) ಸೆಮಿಕಂಡಕ್ಟರ್ ಯೋಜನೆಯು ಗುಜರಾತ್‌ಗೆ (Gujarath) ಸ್ಥಳಾಂತರಗೊಂಡ ನಂತರ ಫಿನ್‌ಟೆಕ್ ಆ್ಯಪ್ ಫೋನ್‌ಪೇ (PhonePe) ಕೂಡ ಮಹಾರಾಷ್ಟ್ರದಿಂದ (Maharashtra) ಸ್ಥಳಾಂತರಗೊಳ್ಳಲು ನಿರ್ಧರಿಸಿದೆ. ಸಾರ್ವಜನಿಕ ಪ್ರಕಟಣೆಯಲ್ಲಿ ಈ ಬಗ್ಗೆ ಸೂಚಿಸಿರುವ ಸಂಸ್ಥೆ ಮುಂಬೈನಲ್ಲಿರುವ ಫೋನ್‌ಪೇ ಕಚೇರಿಯನ್ನು ಕರ್ನಾಟಕಕ್ಕೆ (Karnataka) ಸ್ಥಳಾಂತರಿಸಲಾಗುತ್ತದೆ ಎಂಬ ಸೂಚನೆ ನೀಡಿದೆ.


ಬಿಜೆಪಿ ಸರಕಾರಕ್ಕೆ ಹಿನ್ನಡೆ


ವೇದಾಂತ ಮಹಾರಾಷ್ಟ್ರದಿಂದ ನಿರ್ಗಮಿಸಲು ನಿರ್ಧರಿಸಿದ ಬೆನ್ನಲ್ಲೇ ಫೋನ್‌ಪೇ ಕೂಡ ತನ್ನ ಮುಂಬೈ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಲು ನಿರ್ಧರಿಸುವುದು ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ವೇದಾಂತ-ಫಾಕ್ಸ್‌ಕಾನ್ ಫಾಕ್ಸ್‌ಕಾನ್ ತನ್ನ 2.06 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ನೆರೆಯ ಗುಜರಾತ್‌ನಲ್ಲಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದು ಮಹಾರಾಷ್ಟ್ರದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. 90% ಒಪ್ಪಂದದ ಈ ಉದ್ಯೋಗವು 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿತ್ತು ಹಾಗೂ ಈ ಒಪ್ಪಂದವನ್ನು ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರಕಾರವು ಅಂತಿಮಗೊಳಿಸಿತ್ತು.


ಗುಜರಾತ್ ಆಯ್ಕೆಮಾಡಿಕೊಂಡ ವೇದಾಂತ ಗ್ರೂಪ್


ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರಕ್ಕೆ ಆಡಳಿತವು ಬದಲಾದ ನಂತರ, ವೇದಾಂತ ಗ್ರೂಪ್ ಜುಲೈನಲ್ಲಿ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿತು, ಆದರೆ ಅಂತಿಮವಾಗಿ ಗುಜರಾತ್ ಅನ್ನು ಆಯ್ಕೆ ಮಾಡಲು ನಿರ್ಧರಿಸಿತು, ಇದು ಪಶ್ಚಿಮ ರಾಜ್ಯಕ್ಕೆ ಭಾರಿ ಆಘಾತವನ್ನು ನೀಡಿದೆ.ಬಹುರಾಷ್ಟ್ರೀಯ ಗಣಿ ಕಂಪನಿ ವೇದಾಂತ ಲಿಮಿಟೆಡ್ ತನ್ನ $20 ಬಿಲಿಯನ್ (ರೂ. 1.54 ಲಕ್ಷ ಕೋಟಿ) ಸೆಮಿಕಂಡಕ್ಟರ್ ಯೋಜನೆಗಾಗಿ ಗುಜರಾತ್ ಅನ್ನು ಆಯ್ಕೆ ಮಾಡಿತು. ತೈವಾನ್‌ನ ಫಾಕ್ಸ್‌ಕಾನ್‌ ಸಂಸ್ಥೆಯೊಂದಿಗಿನ ಜಂಟಿ ಯೋಜನೆ ಇದಾಗಿತ್ತು.


ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಗೋವಾ, ಕರ್ನಾಟಕ, ರಾಜಸ್ಥಾನ ಮತ್ತು ಒಡಿಶಾದಲ್ಲಿ ಕಬ್ಬಿಣದ ಅದಿರು, ಚಿನ್ನ ಮತ್ತು ಅಲ್ಯೂಮಿನಿಯಂ ಗಣಿಗಾರಿಕೆಯಲ್ಲಿ ತನ್ನ ಪ್ರಮುಖ ಕಾರ್ಯಾಚರಣೆಗಳನ್ನು ಹೊಂದಿದೆ.ವೇದಾಂತ ಲಿಮಿಟೆಡ್ ವಿದ್ಯುತ್ ಉತ್ಪಾದನೆ, ಗಣಿಗಾರಿಕೆ, ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಪ್ರಮುಖ ಅಸ್ತಿತ್ವವನ್ನು ಹೊಂದಿರುವ ವ್ಯಾಪಕವಾದ ವೈವಿಧ್ಯಮಯ ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿದೆ.


ಸಂಸ್ಥೆಯು $20 ಶತಕೋಟಿಗೂ ಹೆಚ್ಚಿನ ಆದಾಯವನ್ನು ಹೊಂದಿದೆ. ಹಾನ್‌ಹೈ ಟೆಕ್ನಾಲಜಿ ಗ್ರೂಪ್, ಅಂತರಾಷ್ಟ್ರೀಯವಾಗಿ ಫಾಕ್ಸ್‌ಕಾನ್ ಎಂದೂ ಕರೆಯಿಸಿಕೊಳ್ಳುವ ಸಂಸ್ಥೆ ತೈವಾನ್‌ನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ತಯಾರಕನಾಗಿದ್ದು 2021 ಫಾರ್ಚೂನ್ ಗ್ಲೋಬಲ್ 500 ರಲ್ಲಿ 22 ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಎಬಿಜಿ ಶಿಪ್‌ಯಾರ್ಡ್ ಮಾಜಿ ಅಧ್ಯಕ್ಷ ರಿಷಿ ಅಗರ್ವಾಲ್ ಅರೆಸ್ಟ್‌!


ವೇದಾಂತ ನಿರ್ಗಮನಕ್ಕೆ MVA ಸರಕಾರವನ್ನು ದೂರಿದ ಶಿಂಧೆ


ಮಹಾರಾಷ್ಟ್ರದಲ್ಲಿ ವೇದಾಂತ ಫಾಕ್ಸ್‌ಕಾನ್ ಯೋಜನೆಯನ್ನು ತರುವಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಂಪೆನಿಯು ಕೋರಿದ ಯೋಜನೆಗೆ ಬಂಡವಾಳವಾಗಿ ಸಹಾಯ ಧನ ಏರ್ಪಾಡು ಮಾಡಲು ಪ್ರಸ್ತುತ ಸರಕಾರ ಒಪ್ಪಿಗೆ ನೀಡಿತ್ತು ಎಂಬುದು ಶಿಂಧೆ ಮಾತಾಗಿದೆ.


ಇದನ್ನೂ ಓದಿ: ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲ್ಲ; ಅಶೋಕ್ ಗೆಹ್ಲೋಟ್


ನಮ್ಮ ಸರಕಾರ ರಚನೆಯಾಗಿ ಬರೇ ಎರಡು ತಿಂಗಳಾಗಿದೆ. ಆದರೆ ಒಂದೂವರೆ ವರ್ಷದಿಂದ ವೇದಾಂತ್ ಗ್ರೂಪ್ ಮುಂಬೈನಲ್ಲಿ ವ್ಯವಹಾರ ನಡೆಸುವ ಯೋಜನೆಗೆ ಪ್ರಯತ್ನಿಸುತ್ತಿತ್ತು. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವೇದಾಂತ ಸಂಸ್ಥೆಯ ಬೇಡಿಕೆಗಳನ್ನು ಪರಿಗಣಿಸಲು ನಾನು ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಘಡ್ನವಿಸ್ ತುರ್ತು ಸಭೆ ನಡೆಸಿದ್ದೆವು ಹಾಗೂ ಸಂಸ್ಥೆ ಕೋರಿದಂತೆ ಸಹಾಯ ಧನದ ಆಶ್ವಾಸನೆಯನ್ನು ನೀಡಿದ್ದೆವು. ಆದರೆ ಆ ಸಮಯದಲ್ಲಿ ವೇದಾಂತಾ ಗುಜರಾತ್‌ನಲ್ಲಿ ನಿರ್ಧಾರ ತೆಗೆದುಕೊಂಡಿತ್ತು ಎಂದು ಶಿಂಧೆ ತಿಳಿಸಿದ್ದಾರೆ.

First published: