• Home
  • »
  • News
  • »
  • jobs
  • »
  • PGCIL Recruitment 2022: ಪವರ್ ಗ್ರಿಡ್ ಕಾರ್ಪೊರೇಷನ್​ನಲ್ಲಿ 800 ಹುದ್ದೆಗಳು ಖಾಲಿ, BE, B Tech ಆದವರು ಅರ್ಜಿ ಸಲ್ಲಿಸಿ

PGCIL Recruitment 2022: ಪವರ್ ಗ್ರಿಡ್ ಕಾರ್ಪೊರೇಷನ್​ನಲ್ಲಿ 800 ಹುದ್ದೆಗಳು ಖಾಲಿ, BE, B Tech ಆದವರು ಅರ್ಜಿ ಸಲ್ಲಿಸಿ

PGCIL

PGCIL

ಡಿಸೆಂಬರ್ 11, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು.

  • Share this:

    PGCIL Recruitment 2022: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​ (Power Grid Corporation of India Limited -PGCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 800 ಫೀಲ್ಡ್ ಎಂಜಿನಿಯರ್(Field Engineer), ಫೀಲ್ಡ್​ ಸೂಪರ್​​ವೈಸರ್(Field Supervisor) ಪೋಸ್ಟ್​​ಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 11, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​
    ಹುದ್ದೆಯ ಹೆಸರುಫೀಲ್ಡ್ ಎಂಜಿನಿಯರ್, ಫೀಲ್ಡ್​ ಸೂಪರ್​​ವೈಸರ್
    ಒಟ್ಟು ಹುದ್ದೆ800
    ವಿದ್ಯಾರ್ಹತೆಬಿಇ/ಬಿ.ಟೆಕ್
    ವೇತನನಿಯಮಾನುಸಾರ
    ಸ್ಥಳಪ್ಯಾನ್ ಇಂಡಿಯಾ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ15/11/2022
    ಅರ್ಜಿ ಸಲ್ಲಿಸಲು ಕೊನೆ ದಿನ11/12/2022


    ಹುದ್ದೆಯ ಮಾಹಿತಿ:
    ಫೀಲ್ಡ್​ ಎಂಜಿನಿಯರ್ (ಎಲೆಕ್ಟ್ರಿಕಲ್)- 50
    ಫೀಲ್ಡ್​ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್)-15
    ಫೀಲ್ಡ್​ ಎಂಜಿನಿಯರ್ (ಐಟಿ)- 15
    ಫೀಲ್ಡ್​ ಸೂಪರ್​ವೈಸರ್ (ಎಲೆಕ್ಟ್ರಿಕಲ್)- 480
    ಫೀಲ್ಡ್​ ಸೂಪರ್​ವೈಸರ್​ (ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್)- 240


    ಇದನ್ನೂ ಓದಿ: NIT Karnataka Recruitment 2022: ತಿಂಗಳಿಗೆ ₹ 31,000 ಸಂಬಳ-ಮಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ


    ವಿದ್ಯಾರ್ಹತೆ:
    ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಫೀಲ್ಡ್ ಎಂಜಿನಿಯರ್, ಫೀಲ್ಡ್​ ಸೂಪರ್​​ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್​ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಫೀಲ್ಡ್ ಎಂಜಿನಿಯರ್, ಫೀಲ್ಡ್​ ಸೂಪರ್​​ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು  PGCIL ನಿಯಮಾನುಸಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಫೀಲ್ಡ್ ಎಂಜಿನಿಯರ್, ಫೀಲ್ಡ್​ ಸೂಪರ್​​ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಇದನ್ನೂ ಓದಿ: UPSC ನೇಮಕಾತಿ: ಎಂಜಿನಿಯರ್, ಲೆಕ್ಚರರ್​ ಸೇರಿ 160 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಪದವೀಧರರು Apply ಮಾಡಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/11/2022
    ಇ-ಮೇಲ್ ಮಾಡಲು ಕೊನೆ ದಿನ: 11/12/2022

    Published by:Latha CG
    First published: