Petrol-Diesel Price Today: ಹೆಚ್ಚಿನ ಕಡೆಗಳಲ್ಲಿ ಇಂಧನ ಬೆಲೆ ಸ್ಥಿರ, ಎಲ್ಲೆಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ?

ಪೆಟ್ರೋಲ್, ಡೀಸೆಲ್ ಕೊಂಚ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕಳೆದ ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ (Petrol Diesel Price) ಭಾರಿ ಏರಿಕೆಯಾಗಿತ್ತು. 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಪೆಟ್ರೋಲ್ ದರಗಳಿಂದ ಗ್ರಾಹಕರಲ್ಲಿ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ದೇಶದಲ್ಲಿ ಇಂಧನ ಬೆಲೆ ಎಲ್ಲೆಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಒಂದು ಸಮಗ್ರ ಮಾಹಿತಿ ಇಲ್ಲಿದೆ.
.
ಪೆಟ್ರೋಲ್, ಡೀಸೆಲ್ ಕೊಂಚ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ.
ಜಾಗತಿಕವಾಗಿ ಎಲ್ಲಾ ಉತ್ಪನ್ನಗಳ ಬೆಲೆ ಗಗನಕ್ಕೇರಿವೆ. ಸಾಮಾಜಿಕ, ಆರ್ಥಿಕ, ಅಂತಾರಾಷ್ಟ್ರೀಯ ಸಮಾಚಾರಗಳು ಇಂಧನದ ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಬೆಲೆ ಏರಿಕೆ ಶ್ರೀಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಕಳೆದ 37 ದಿನಗಳಿಂದ ಇಂಧನ ದರ ಸ್ಥಿರವಾಗಿದೆ. ಮುಂಬೈ ನಗರದಲ್ಲಿ (Mumbai) ಪೆಟ್ರೋಲ್ ದರ 120 ರೂ ಪ್ರತಿ ಲೀಟರ್ ದಾಟಿದೆ.


ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಯಷ್ಟೇ ಇಂದೂ ಸಹ ಪೆಟ್ರೋಲ್ ಬೆಲೆ ಮುಂದುವರೆದಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 111.49 (13 ಪೈಸೆ ಏರಿಕೆ)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 111.40 (24 ಪೈಸೆ ಏರಿಕೆ)
ಬೆಳಗಾವಿ - ರೂ. 110.15 (41 ಪೈಸೆ ಇಳಿಕೆ)
ಬಳ್ಳಾರಿ - ರೂ. 112.28 ( 75 ಪೈಸೆ ಇಳಿಕೆ)
ಬೀದರ್ - ರೂ. 112.03 (4 ಪೈಸೆ ಏರಿಕೆ)
ವಿಜಯಪುರ - ರೂ. 111.21 (9 ಪೈಸೆ ಇಳಿಕೆ)
ಚಾಮರಾಜನಗರ - ರೂ. 111.22 (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 111.15 (31 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 112.36 (7 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 113.08 (57 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 110.63 (6 ಪೈಸೆ ಏರಿಕೆ)
ದಾವಣಗೆರೆ - ರೂ. 113.24 (15 ಪೈಸೆ ಏರಿಕೆ)
ಧಾರವಾಡ - ರೂ. 110.96 (12 ಪೈಸೆ ಏರಿಕೆ)
ಗದಗ - ರೂ. 111.88 (50 ಪೈಸೆ ಏರಿಕೆ)
ಕಲಬುರಗಿ - ರೂ. 110.81 (00)
ಹಾಸನ - ರೂ. 111.36 (41ಪೈಸೆ ಏರಿಕೆ)
ಹಾವೇರಿ - ರೂ. 111.09 (92 ಪೈಸೆ ಏರಿಕೆ)
ಕೊಡಗು - ರೂ. 112.34 (21 ಪೈಸೆ ಇಳಿಕೆ)
ಕೋಲಾರ - ರೂ. 111.03 (00)
ಕೊಪ್ಪಳ - ರೂ. 112.03 (8 ಪೈಸೆ ಇಳಿಕೆ)
ಮಂಡ್ಯ - ರೂ. 110.94 (4 ಪೈಸೆ ಏರಿಕೆ)
ಮೈಸೂರು - ರೂ. 110.86 (17 ಪೈಸೆ ಇಳಿಕೆ)
ರಾಯಚೂರು - ರೂ. 110.91 (99 ಪೈಸೆ ಇಳಿಕೆ)
ರಾಮನಗರ - ರೂ. 111.21 (35 ಪೈಸೆ ಇಳಿಕೆ)
ಶಿವಮೊಗ್ಗ - ರೂ. 112.31 (44 ಪೈಸೆ ಇಳಿಕೆ)
ತುಮಕೂರು - ರೂ. 111.52(9 ಪೈಸೆ ಇಳಿಕೆ)
ಉಡುಪಿ - ರೂ. 111.99 (60 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 111.14 (2.16 ಪೈಸೆ ಏರಿಕೆ)
ಯಾದಗಿರಿ - ರೂ. 111.54 (63 ಪೈಸೆ ಇಳಿಕೆ)


ಇದನ್ನೂ ಓದಿ: Salary Hike: ಲಕ್ಷ ಲಕ್ಷ ಸಂಬಳವನ್ನೂ ಕಣ್ಮುಚ್ಚಿ ಕೊಡೋಕೆ ರೆಡಿ ಇವೆಯಂತೆ ಕಂಪನಿಗಳು!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 95.17
ಬೆಂಗಳೂರು - ರೂ. 94.76
ಬೆಂಗಳೂರು ಗ್ರಾಮಾಂತರ - ರೂ. 95.07
ಬೆಳಗಾವಿ - ರೂ. 94.87
ಬಳ್ಳಾರಿ - ರೂ. 95.90
ಬೀದರ್ - ರೂ. 95.66
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ. 94.85
ಚಿಕ್ಕಮಗಳೂರು - ರೂ. 95.91
ಚಿತ್ರದುರ್ಗ - ರೂ. 96.46
ದಕ್ಷಿಣ ಕನ್ನಡ - ರೂ. 94.34
ದಾವಣಗೆರೆ - ರೂ. 96.60
ಧಾರವಾಡ - ರೂ. 94.69
ಗದಗ - ರೂ. 95.52
ಕಲಬುರಗಿ - ರೂ. 94.56
ಹಾಸನ - ರೂ. 94.91
ಹಾವೇರಿ - ರೂ. 95.71
ಕೊಡಗು - ರೂ. 95.79
ಕೋಲಾರ - ರೂ. 94. 74
ಕೊಪ್ಪಳ - ರೂ. 95.66
ಮಂಡ್ಯ - ರೂ. 94.65
ಮೈಸೂರು - ರೂ. 94.58
ರಾಯಚೂರು - ರೂ. 94.69
ರಾಮನಗರ - ರೂ. 94.89
ಶಿವಮೊಗ್ಗ - ರೂ. 95.86
ತುಮಕೂರು - ರೂ. 95.05
ಉಡುಪಿ - ರೂ. 94.66
ಉತ್ತರ ಕನ್ನಡ - ರೂ. 94.85
ಯಾದಗಿರಿ - ರೂ. 95.22

Published by:Divya D
First published: