ಭಾರತೀಯ ರಿಸರ್ವ್ ಬ್ಯಾಂಕ್ (ಮುಂಬೈ) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಮುಂಬೈನ ವಿವಿಧ ಬ್ಯಾಂಕ್‌ಗಳ ಔಷಧಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಫಾರ್ಮಾಸಿಸ್ಟ್ ಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ rbi.org.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 10, 2023. ಒಟ್ಟು 25 ಖಾಲಿ ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ಸಂಸ್ಥೆ | ಭಾರತೀಯ ರಿಸರ್ವ್ ಬ್ಯಾಂಕ್ (ಮುಂಬೈ) |
ಹುದ್ದೆ | ಫಾರ್ಮಾಸಿಸ್ಟ್ |
ಒಟ್ಟು ಹುದ್ದೆ | 25 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 10- ಏಪ್ರಿಲ್- 2023 |
ವಿದ್ಯಾರ್ಹತೆ | ಫಾರ್ಮಸಿಯಲ್ಲಿ ಡಿಪ್ಲೊಮಾ, ಬಿ. ಫಾರ್ಮ್ |
ನೋಟಿಫಿಕೇಷನ್ | ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ |
ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಫಾರ್ಮಸಿಯಲ್ಲಿ ಡಿಪ್ಲೊಮಾದ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು. ಫಾರ್ಮಸಿಯಲ್ಲಿ ಪದವಿ (ಬಿ. ಫಾರ್ಮ್) ಹೊಂದಿರುವ ಅರ್ಜಿದಾರರು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅನೆಕ್ಸ್-I ನಲ್ಲಿ ನೀಡಲಾದ ನಮೂನೆಯ ಪ್ರಕಾರ ಮಾತ್ರ ಅರ್ಜಿ ಸಲ್ಲಿಸಬಹುದು. ವೃತ್ತಿಪರ/ಶೈಕ್ಷಣಿಕ/ಇತರ ವಿದ್ಯಾರ್ಹತೆಗಳು, ಜಾತಿ ಪ್ರಮಾಣ ಪತ್ರ, ಅನುಭವ ಪ್ರಮಾಣಪತ್ರ, ವಯಸ್ಸಿನ ಪುರಾವೆ ಇತ್ಯಾದಿಗಳ ಪ್ರಮಾಣಪತ್ರಗಳ ನಕಲು ಪ್ರತಿಗಳೊಂದಿಗೆ ಮುಚ್ಚಿದ ಕವರ್‌ನಲ್ಲಿರುವ ಕಳುಹಿಸಬೇಕು.
ಇದನ್ನೂ ಓದಿ: NIT Karnataka Recruitment: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 31 ಸಾವಿರ ಸಂಬಳ
ಅರ್ಜಿ ಕಳುಹಿಸಬೇಕಾದ ವಿಳಾಸ
ಪ್ರಾದೇಶಿಕ ನಿರ್ದೇಶಕರು,
ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ,
ನೇಮಕಾತಿ ವಿಭಾಗ, ಭಾರತೀಯ ರಿಸರ್ವ್ ಬ್ಯಾಂಕ್,
ಮುಂಬೈ ಪ್ರಾದೇಶಿಕ ಕಚೇರಿ, ಶಾಹಿದ್ ಭಗತ್ ಸಿಂಗ್ ರಸ್ತೆ, ಫೋರ್ಟ್,
ಮುಂಬೈ - 400001
ಆಯ್ಕೆ ಪ್ರಕ್ರಿಯೆ
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಬ್ಯಾಂಕ್ ಸಂದರ್ಶನವನ್ನು ನಡೆಸುತ್ತದೆ. ಸಂದರ್ಶನಕ್ಕೆ ಕರೆಯಲಾಗುವ ಅಭ್ಯರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಲು ಕನಿಷ್ಠ ಅರ್ಹತಾ ಮಾನದಂಡಗಳು ಇತ್ಯಾದಿಗಳನ್ನು ಹೆಚ್ಚಿಸುವ ಹಕ್ಕನ್ನು ಬ್ಯಾಂಕ್ ಹೊಂದಿದೆ. ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ವಿಧಾನವನ್ನು ಪರಿಶೀಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ