NHM Recruitment 2022: ರಾಷ್ಟ್ರೀಯ ಆರೋಗ್ಯ ಸಂಸ್ಥೆ(National Health Mission-NHM) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್, ಕನ್ಸಲ್ಟೆಂಟ್, ಸೀನಿಯರ್ ಕನ್ಸಲ್ಟೆಂಟ್, ಕೌನ್ಸಲರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಡಿಎನ್ಬಿ, ಎಂಎಸ್ಸಿ, ಎಂಫಿಲ್, ಎಂ.ಡಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್(Online) ಮೂಲಕ ಅರ್ಜಿ ಹಾಕಿ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ ತಿಂಗಳ 23 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಆರೋಗ್ಯ ಸಂಸ್ಥೆ |
ಹುದ್ದೆ | ನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್, ಕನ್ಸಲ್ಟೆಂಟ್, ಸೀನಿಯರ್ ಕನ್ಸಲ್ಟೆಂಟ್, ಕೌನ್ಸಲರ್ |
ಒಟ್ಟು ಹುದ್ದೆ | 19 |
ವೇತನ | ಮಾಸಿಕ 17,000-20,000 |
ಉದ್ಯೋಗದ ಸ್ಥಳ | ಕೇರಳ |
ವಿದ್ಯಾರ್ಹತೆ:
ಕೌನ್ಸಲರ್- ಸ್ನಾತಕೋತ್ತರ ಪದವಿ
ಸೀನಿಯರ್ ಕನ್ಸಲ್ಟೆಂಟ್-ಡಿಎನ್ಬಿ, ಎಂ.ಡಿ, ಸ್ನಾತಕೋತ್ತರ ಪದವಿ, ಡಿಪಿಎಂ
ಕನ್ಸಲ್ಟೆಂಟ್-ಡಿಎನ್ಬಿ, ಎಂ.ಡಿ, ಸ್ನಾತಕೋತ್ತರ ಪದವಿ, ಡಿಪಿಎಂ
ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್- ಎಂ.ಫಿಲ್, ಎಂಎಸ್ಸಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 23/12/2022
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು ಆಫ್ಲೈನ್ ಮೂಲಕ 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಇದನ್ನೂ ಓದಿ: Railway Recruitment: ಡಿಗ್ರಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ
ವಯೋಮಿತಿ:
ಕೌನ್ಸಲರ್- ಗರಿಷ್ಠ 40 ವರ್ಷ
ಸೀನಿಯರ್ ಕನ್ಸಲ್ಟೆಂಟ್- ಗರಿಷ್ಠ 57 ವರ್ಷ
ಕನ್ಸಲ್ಟೆಂಟ್- ಗರಿಷ್ಠ 40 ವರ್ಷ
ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್-ಗರಿಷ್ಠ 40 ವರ್ಷ
ವೇತನ:
ಕೌನ್ಸಲರ್- ತಿಂಗಳಿಗೆ 17,000
ಸೀನಿಯರ್ ಕನ್ಸಲ್ಟೆಂಟ್-ನಿಯಮಾನುಸಾರ
ಕನ್ಸಲ್ಟೆಂಟ್- ತಿಂಗಳಿಗೆ 20,000
ಕ್ಲಿನಿಕಲ್ ಸೈಕಾಲಜಿಸ್ಟ್/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್/ ಸೈಕಿಯಾಟ್ರಿಕ್ ನರ್ಸ್-ತಿಂಗಳಿಗೆ 20,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ