Mumbai Port Authority Recruitment 2022: ಮುಂಬೈ ಬಂದರು ಪ್ರಾಧಿಕಾರ(Mumbai Port Authority)ದಲ್ಲಿ 2 ಮೆಡಿಕಲ್ ಆಫೀಸರ್(Medical Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ mumbaiport.gov.in ಗೆ ಭೇಟಿ ನೀಡಬಹುದು. ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮುಂಬೈ ಬಂದರು ಪ್ರಾಧಿಕಾರ |
ಹುದ್ದೆ | ಮೆಡಿಕಲ್ ಆಫೀಸರ್(ENT) |
ಒಟ್ಟು ಹುದ್ದೆ | 2 |
ವೇತನ | ಮಾಸಿಕ ₹20,600-46,500 |
ಉದ್ಯೋಗದ ಸ್ಥಳ | ಮುಂಬೈ |
ಅರ್ಜಿ ಸಲ್ಲಿಸಲು ಕೊನೆ ದಿನ | 13/12/2022 |
ಅಧಿಕೃತ ವೆಬ್ಸೈಟ್ | mumbaiport.gov.in |
ವಯೋಮಿತಿ:
ಮುಂಬೈ ಬಂದರು ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.
ಇದನ್ನೂ ಓದಿ: KRCL Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೆ- ತಿಂಗಳಿಗೆ 65,000 ಸಂಬಳ
ವೇತನ:
ಮುಂಬೈ ಬಂದರು ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹20,600-46,500 ವೇತನ ನೀಡಲಾಗುತ್ತದೆ.
ಅನುಭವ:
ಮೆಡಿಕಲ್ ಆಫೀಸರ್ ಆಗಿ ಕನಿಷ್ಠ 1 ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು.
ಹಿಂದಿ ಹಾಗೂ ಮರಾಠಿ ಭಾಷೆಯ ಜ್ಞಾನ ಇರಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 66567712, 66567780 ಗೆ ಸಂಪರ್ಕಿಸಬಹುದು.
ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ಒರಿಜಿನಲ್ ಸರ್ಟಿಫಿಕೇಟ್ಸ್, ಸ್ವಯಂ ದೃಢೀಕರಿಸಿದ ಎಲ್ಲಾ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಗಳು, 4 ಭಾವಚಿತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಶನಿವಾರ, ಭಾನುವಾರ ಮತ್ತು ಎಲ್ಲಾ ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಕಳುಹಿಸಬಹುದು. ಅಭ್ಯರ್ಥಿಗಳು ಇವತ್ತೇ ಅರ್ಜಿ ಹಾಕಿ.
ಮುಂಬೈ ಬಂದರು ಪ್ರಾಧಿಕಾರ ಆಸ್ಪತ್ರೆ
ನಂದ್ಕರ್ಣಿ ಪಾರ್ಕ್
ವಾಡಾಲ(ಈಸ್ಟ್)
ಮುಂಬೈ- 400037
ಸಂದರ್ಶನ ನಡೆಯುವ ದಿನಾಂಕವನ್ನು ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುವ ಮೂಲಕ ತಿಳಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ