ಕೇರಳ ಲೋಕಸ ಸೇವಾ ಆಯೋಗವು(Kerala Public Service Commission-KPSC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 5ನೇ ತರಗತಿ ಪಾಸಾದವರಿಗೆ ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ(Kerala State Water Transport Department)ಯಲ್ಲಿ ಬಂಪರ್ ಉದ್ಯೋಗ ಇದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಖಾಲಿ ಇರುವ ಒಂದು ಕೂಲಿ(Cooli Worker) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನು ನೇರ ನೇಮಕಾತಿ(Direct Recruitment) ಮಾಡಿಕೊಳ್ಳಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಾಗಲಿ ಇರುವುದಿಲ್ಲ.
ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಕುರಿತಾದ ನೋಟಿಫಿಕೇಶನ್ ಇಲ್ಲಿದೆ:
ಅರ್ಜಿ ಹಾಕುವ ಮುನ್ನ ಅಭ್ಯರ್ಥಿಗಳು ಕೇರಳ ಪಬ್ಲಿಕ್ ಸರ್ವೀಸ್ ಕಮಿಷನ್(KPSC) ವೆಬ್ಸೈಟ್ ಮೂಲಕ ಒನ್ ಟೈಂ ರಿಜಿಸ್ಟ್ರೇಷನ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳು ಈಗಾಗಲೇ ನೊಂದಾಯಿಸಿಕೊಂಡಿದ್ದರೆ ಅವರ ಪ್ರೊಫೈಲ್ ಮೂಲಕ ಅಪ್ಲೈ ಮಾಡಬಹುದು.
ಸಂಸ್ಥೆ | ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ |
ಹುದ್ದೆ | ಕೂಲಿ ವರ್ಕರ್ |
ಒಟ್ಟು ಹುದ್ದೆ | 1 |
ಉದ್ಯೋಗದ ಸ್ಥಳ | ಕೇರಳ |
ವೇತನ | ಮಾಸಿಕ ₹ 23,000-50,200 |
ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ 5ನೇ ತರಗತಿ ಪಾಸಾಗಿದ್ದರೆ ಸಾಕು. ಜೊತೆಗೆ ದೈಹಿಕವಾಗಿ ಸ್ಟ್ರಾಂಗ್ ಇರಬೇಕು. ಎಳೆಯುವ ಮತ್ತು ಈಜುವ ಪ್ರಾಕ್ಟಿಕಲ್ ಪರೀಕ್ಷೆ ನಡೆಸಲಾಗುತ್ತದೆ.
ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಅರ್ಜಿ ಹಾಕಲು ಅರ್ಹರಲ್ಲ. ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಸಹಿ ಪಡೆದ ಮೆಡಿಕಲ್ ಸರ್ಟಿಫಿಕೇಟ್ನ್ನು ಹೊಂದಿರಬೇಕು.
ವೇತನ ಎಷ್ಟು?
ಕೆಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಕೂಲಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ₹ 23,000-50,200 ರೂ. ವೇತನ ನೀಡಲಾಗುತ್ತದೆ.
ಇದನ್ನೂ ಓದಿ: BookMyShow Hiring: ಡಿಗ್ರಿ ಆಗಿದ್ರೆ ಬುಕ್ ಮೈ ಶೋನಲ್ಲಿ ಕೆಲಸ ಮಾಡಬಹುದು-ಇಲ್ಲಿ Apply ಮಾಡಿ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/11/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 04/01/2023 ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಲು ONE TIME REGISTRATION ಮೂಲಕ ಕೇರಳ ಲೋಕ ಸೇವಾ ಆಯೋಗದ ಅಧಿಕೃತ ವೆಬ್ಸೈಟ್ www.keralapsc.gov.in ಗೆ ಭೇಟಿ ನೀಡಬೇಕು.
ರಿಜಿಸ್ಟರ್ ಆಗಿರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿಕೊಂಡು ಪ್ರೊಫೈಲ್ಗೆ ಲಾಗಿನ್ ಆಗಬೇಕು.
ಬಳಿಕ ಅಭ್ಯರ್ಥಿಗಳು ಅಲ್ಲಿ ನೋಟಿಫಿಕೇಶನ್ ಲಿಂಕ್ ಮೇಲೆ ಕಾಣುವ Apply Now ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ