• Home
  • »
  • News
  • »
  • jobs
  • »
  • Job Alert: ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗೆ 75,000 ಸಂಬಳ- ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ

Job Alert: ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗೆ 75,000 ಸಂಬಳ- ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಆಫ್​ಲೈನ್ ಮೂಲಕ ಅರ್ಜಿ ಹಾಕಿ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

    ANTRIX Recruitment 2022: ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್(Antrix Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಕಂಪನಿ ಸೆಕ್ರೆಟರಿ, ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಆಫ್​ಲೈನ್(Offline) ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್
    ಹುದ್ದೆಕಂಪನಿ ಸೆಕ್ರೆಟರಿ, ಹಿಂದಿ ಟ್ರಾನ್ಸ್​ಲೇಟರ್
    ಒಟ್ಟು ಹುದ್ದೆ2
    ವೇತನಮಾಸಿಕ 60,000-75,000
    ಉದ್ಯೋಗದ ಸ್ಥಳಬೆಂಗಳೂರು
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ

    ಹುದ್ದೆಯ ಮಾಹಿತಿ:
    ಕಂಪನಿ ಸೆಕ್ರೆಟರಿ- 1 ಹುದ್ದೆ
    ಹಿಂದಿ ಟ್ರಾನ್ಸ್​ಲೇಟರ್- 1 ಹುದ್ದೆ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022


    ವಿದ್ಯಾರ್ಹತೆ:
    ಕಂಪನಿ ಸೆಕ್ರೆಟರಿ- ಪದವಿ
    ಹಿಂದಿ ಟ್ರಾನ್ಸ್​ಲೇಟರ್- ಡಿಪ್ಲೋಮಾ, ಸ್ನಾತಕೋತ್ತರ ಪದವಿ


    ವೇತನ:
    ಕಂಪನಿ ಸೆಕ್ರೆಟರಿ- ಮಾಸಿಕ ₹ 75,000
    ಹಿಂದಿ ಟ್ರಾನ್ಸ್​ಲೇಟರ್- ಮಾಸಿಕ ₹ 60,000


    ವಯೋಮಿತಿ:
    ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 1, 2022ಕ್ಕೆ ಗರಿಷ್ಠ 65 ವರ್ಷ ಮೀರಿರಬಾರದು.


    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 30ಕ್ಕೆ ಮುನ್ನ ಕಳುಹಿಸಬೇಕು.


    ಸೀನಿಯರ್ ಮ್ಯಾನೇಜರ್ (P &GA)
    ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್​
    ಅಂತರಿಕ್ಷಾ ಭವನ ಕ್ಯಾಂಪಸ್
    ಹೊಸ BEL ರಸ್ತೆ
    ಬೆಂಗಳೂರು- 560094


    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22178302 ಗೆ ಕರೆ ಮಾಡಬಹುದು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು