• Home
  • »
  • News
  • »
  • jobs
  • »
  • ಮಂಗಳೂರು, ಪುತ್ತೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 78,000 ಸಂಬಳ

ಮಂಗಳೂರು, ಪುತ್ತೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 78,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರ್ಜಿ ಸಲ್ಲಿಸಲು ಇದೇ ಜನವರಿ 21, 2023 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • 4-MIN READ
  • Last Updated :
  • Mangalore, India
  • Share this:

CAMPCO Recruitment 2023: ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್( Central Arecanut and Cocoa Marketing and Processing Co-operative Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್, ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರು, ಪುತ್ತೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಇದೇ ಜನವರಿ 21, 2023 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್
ಹುದ್ದೆಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್, ಆಫೀಸರ್
ಒಟ್ಟು ಹುದ್ದೆ4
ವೇತನಮಾಸಿಕ ₹ 27,650- 78,200
ಉದ್ಯೋಗದ ಸ್ಥಳಮಂಗಳೂರು, ಪುತ್ತೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜನವರಿ 21, 2023

ಹುದ್ದೆಯ ಮಾಹಿತಿ:
ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೆನೋ/ ಪರ್ಸನಲ್ ಅಸಿಸ್ಟೆಂಟ್)- 2
ಎಕ್ಸಿಕ್ಯೂಟಿವ್ ಆಫೀಸರ್ (ಅಗ್ರಿಕಲ್ಚರ್)-1
ಆಫೀಸರ್ (R&D/ ISO)-1


ವಿದ್ಯಾರ್ಹತೆ:
ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೆನೋ/ ಪರ್ಸನಲ್ ಅಸಿಸ್ಟೆಂಟ್)- ಪದವಿ, ಸೆಕ್ರೆಟರಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ
ಎಕ್ಸಿಕ್ಯೂಟಿವ್ ಆಫೀಸರ್ (ಅಗ್ರಿಕಲ್ಚರ್)- ಅಗ್ರಿಕಲ್ಚರ್/ ಹಾರ್ಟಿಕಲ್ಚರ್​​ನಲ್ಲಿ ಎಂಎಸ್ಸಿ
ಆಫೀಸರ್ (R&D/ ISO)- ಕೆಮಿಸ್ಟ್ರಿ/ ಫುಡ್​ ಸೈನ್ಸ್​/ ಫುಡ್​ ಟೆಕ್ನಾಲಜಿ/ ಬಯೋ ಟೆಕ್ನಾಲಜಿಯಲ್ಲಿ ಎಂಎಸ್ಸಿ


ಅನುಭವ:
ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೆನೋ/ ಪರ್ಸನಲ್ ಅಸಿಸ್ಟೆಂಟ್)- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ
ಎಕ್ಸಿಕ್ಯೂಟಿವ್ ಆಫೀಸರ್ (ಅಗ್ರಿಕಲ್ಚರ್)- ಅಗ್ರಿ ಇನ್​​ಪುಟ್ಸ್​​ನ ಫಾರ್ಮಿಂಗ್/ ಮ್ಯಾನುಫ್ಯಾಕ್ಚರಿಂಗ್​​ನಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿದ ಅನುಭವ
ಆಫೀಸರ್ (R&D/ ISO)- R&D ಡಿವಿಶನ್​​ನ ಫುಡ್​ ಪ್ರೊಸೆಸಿಂಗ್ ಯುನಿಟ್​ನಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿದ ಅನುಭವ


ಇದನ್ನೂ ಓದಿ: JOBS: ತಿಂಗಳಿಗೆ 25,000 ಸಂಬಳ- ಲ್ಯಾಬ್​ ಟೆಕ್ನಿಷಿಯನ್ ಹುದ್ದೆಗೆ ಈಗಲೇ ಅರ್ಜಿ ಹಾಕಿ


ವಯೋಮಿತಿ:
ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.


ವೇತನ:
ಜೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೆನೋ/ ಪರ್ಸನಲ್ ಅಸಿಸ್ಟೆಂಟ್)- ಮಾಸಿಕ ₹ 27,650-52,650
ಎಕ್ಸಿಕ್ಯೂಟಿವ್ ಆಫೀಸರ್ (ಅಗ್ರಿಕಲ್ಚರ್)-ಮಾಸಿಕ ₹40,900-78,200
ಆಫೀಸರ್ (R&D/ ISO)-ಮಾಸಿಕ ₹40,900-78,200


ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 295 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 590 ರೂ.
ಪಾವತಿಸುವ ಬಗೆ- ಡಿಮ್ಯಾಂಡ್​ ಡ್ರಾಫ್ಟ್​


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 21ರೊಳಗೆ ಕಳುಹಿಸಬೇಕು.


ವ್ಯವಸ್ಥಾಪಕ ನಿರ್ದೇಶಕರು
ದಿ ಕ್ಯಾಂಪ್ಕೋ ಲಿಮಿಟೆಡ್
P.B.No:223
"ವಾರಣಾಶಿ ಟವರ್ಸ್"
ಮಿಷನ್ ಸ್ಟ್ರೀಟ್
ಮಂಗಳೂರು - 575001




ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 21, 2023

Published by:Latha CG
First published: