ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಂಪನಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಸೂಚನೆಯನ್ನು ಹೊರಡಿಸಿದೆ. ಟ್ರೈನಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಸೇರಿದಂತೆ 13 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಿಸಿದೆ. ಇದಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನ ಜನವರಿ 15, 2023 ಎಂದು ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
ಸಂಸ್ಥೆ | ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ |
ಒಟ್ಟು ಹುದ್ದೆಗಳು | 13 |
ಟ್ರೈನಿ ಇಂಜಿನಿಯರ್ | 4 ಹುದ್ದೆಗಳಿಗೆ ನೇಮಕಾತಿ |
ಪ್ರಾಜೆಕ್ಟ್ ಇಂಜಿನಿಯರ್ | 9 ಹುದ್ದೆಗಳಿಗೆ ನೇಮಕಾತಿ |
ವಿದ್ಯಾರ್ಹತೆ | ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್, BE |
ವೇತನ | 30 ಸಾವಿರ ಹಾಗೂ 40 ಸಾವಿರ ರೂ. |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 15-01-2023 |
ಅರ್ಜಿ ಸಲ್ಲಿಕೆ ವಿಧಾನ | ಆನ್ ಲೈನ್ |
ವಿಳಾಸ | ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ |
ಟ್ರೈನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಶುಲ್ಕ: 150 ರೂ.
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಶುಲ್ಕ: 450 ರೂ.
ಹೆಚ್ಚಿನ ಮಾಹಿತಿ
1) ಮಾನ್ಯತೆ ಪಡೆದ ಸಂಸ್ಥೆಯಿಂದ BE/B.Tech ಪದವಿ ಪಡೆದಿರಬೇಕು.
2) ಸಾಮಾನ್ಯ, EWS, OBC ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಪಾಸ್ ಆಗಿರಬೇಕು.
3) SC, ST, PwBD ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು.
4) ಟ್ರೈನಿ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳಿಗೆ 30,000 ರೂ.ವೇತನ ನೀಡಲಾಗುವುದು.
5) ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದವರಿಗೆ 40000 ರೂ. ವೇತನ ನೀಡಲಾಗುವುದು.
ಇದನ್ನೂ ಓದಿ: UPSC Recruitment: ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ: ಪೂರ್ತಿ ಮಾಹಿತಿ ಇಲ್ಲಿದೆ
ಇದನ್ನು ಮರೆಯಬೇಡಿ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಮಾಹಿತಿಯನ್ನು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ