ONGC Recruitment: 98 ವೈದ್ಯ ಹುದ್ದೆಗಳ ನೇಮಕಾತಿಗೆ ಒಎನ್​ಜಿಸಿ ಅರ್ಜಿ ಆಹ್ವಾನ

ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಅಧಿಸೂಚನೆ, ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದೆ.

3614 ಹುದ್ದೆಗೆ ಅರ್ಜಿ ಹಾಕಿ

3614 ಹುದ್ದೆಗೆ ಅರ್ಜಿ ಹಾಕಿ

  • Share this:
    ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (Oil and Natural Gas Corporation) 98 ವೈದ್ಯಕೀಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮಾಸಿಕ ನಾಲ್ಕು ಲಕ್ಷಕ್ಕೂ ಹೆಚ್ಚು ವೇತನವನ್ನು ನಿಗದಿಸಿದ್ದು, ಅರ್ಹ ವೈದ್ಯಕೀಯ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಈ ನೇಮಕಾತಿ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 6 ಆಗಿದೆ.

    ಮುಂಬೈ ಮತ್ತು ಡೆಹ್ರಾಡೂನ್​ನಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಅಧಿಸೂಚನೆ, ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಕಂಡಂತೆ ಇದೆ.

    ಸಂಸ್ಥೆಯ ಹೆಸರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
    ಹುದ್ದೆಗಳ ಸಂಖ್ಯೆ: 98
    ಉದ್ಯೋಗ ಸ್ಥಳ: ಡೆಹ್ರಾಡೂನ್ - ಮುಂಬೈ
    ಹುದ್ದೆಯ ಹೆಸರು: ವೈದ್ಯಕೀಯ ಅಧಿಕಾರಿ, GDMO









































































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಗುತ್ತಿಗೆ ವೈದ್ಯಕೀಯ ಅಧಿಕಾರಿ – ತುರ್ತು ಕರ್ತವ್ಯ8ಎಂಬಿಬಿಎಸ್​100000 ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ – ಸಾಮಾನ್ಯ ಕರ್ತವ್ಯ4ಎಂಬಿಬಿಎಸ್100000 ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ – ಔದ್ಯೋಗಿಕ ಆರೋಗ್ಯ1ಎಂಬಿಬಿಎಸ್100000 ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ1ಜನರಲ್ ಮೆಡಿಸಿನ್‌ನಲ್ಲಿ ಎಂ.ಡಿ130000 ರೂ ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ - ಶಸ್ತ್ರಚಿಕಿತ್ಸೆ1ಜನರಲ್ ಸರ್ಜರಿಯಲ್ಲಿ ಎಂ.ಎಸ್130000 ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ - ನೇತ್ರವಿಜ್ಞಾನ1ನೇತ್ರಶಾಸ್ತ್ರದಲ್ಲಿ ಎಂ.ಡಿ, ಎಂ.ಎಸ್130000 ಮಾಸಿಕ
    ಗುತ್ತಿಗೆ ವೈದ್ಯಕೀಯ ಅಧಿಕಾರಿ - ಹೋಮಿಯೋಪತಿ  1ಬಿಎಚ್​ಎಂಎಸ್​65000 ರೂ ಮಾಸಿಕ
    ಕ್ಷೇತ್ರ ವೈದ್ಯಕೀಯ ಅಧಿಕಾರಿಗಳು63ಎಂಬಿಬಿಎಸ್​105000 ರೂ ಮಾಸಿಕ
    ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು (GDMO)6ಎಂಬಿಬಿಎಸ್​​ 100000 ರೂ ಮಾಸಿಕ
    ವೈದ್ಯಕೀಯ ಅಧಿಕಾರಿ (ಔದ್ಯೋಗಿಕ ಆರೋಗ್ಯ)1ಎಂಬಿಬಿಎಸ್​ 100000 ರೂ ಮಾಸಿಕ
    ವೈದ್ಯ 22ಜನರಲ್ ಮೆಡಿಸಿನ್‌ನಲ್ಲಿ ಎಂ.ಡಿಒಂದು ವಿಸಿಟ್​​ಗೆ 2500
    ಶಿಶುವೈದ್ಯ 22ಪೀಡಿಯಾಟ್ರಿಕ್ಸ್‌ನಲ್ಲಿ ಎಂ.ಡಿಒಂದು ವಿಸಿಟ್​​ಗೆ 2500
    ಜನರಲ್ ಸರ್ಜನ್1ಜನರಲ್ ಸರ್ಜರಿಯಲ್ಲಿ ಎಂ.ಎಸ್ಒಂದು ವಿಸಿಟ್​​ಗೆ 2500
    ಮೂಳೆಚಿಕಿತ್ಸೆ1ಆರ್ಥೋಪೆಡಿಕ್ಸ್‌ನಲ್ಲಿ ಎಂ.ಎಸ್ಒಂದು ವಿಸಿಟ್​​ಗೆ 2500
    ಸ್ತ್ರೀರೋಗತಜ್ಞ1ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿಒಂದು ವಿಸಿಟ್​​ಗೆ 2500
    ಹೋಮಿಯೋಪತಿ 33ಬಿಎಚ್​ಎಂಎಸ್​​40000 ರೂ ಮಾಸಿಕ

    ವಯೋಮಿತಿ

    ಫೀಲ್ಡ್ ಮೆಡಿಕಲ್ ಆಫೀಸರ್ (ಆಫ್‌ಶೋರ್) - ಪುರುಷ ಅಭ್ಯರ್ಥಿಗಳು: 60 ವರ್ಷಗಳು
    ಫೀಲ್ಡ್ ಮೆಡಿಕಲ್ ಆಫೀಸರ್ (ಆಫ್‌ಶೋರ್) - ಮಹಿಳಾ ಅಭ್ಯರ್ಥಿಗಳು: 45 ವರ್ಷಗಳು
    ಉಳಿದ ಹುದ್ದೆಗಳು: ವಯಸ್ಸಿನ ಮಿತಿ ಇಲ್ಲ.

    ಇದನ್ನು ಓದಿ: ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 31, 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 6, 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ - ವೈದ್ಯಕೀಯ ಅಧಿಕಾರಿ : ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ongcindia.com

    ಅರ್ಜಿ ಸಲ್ಲಿಕೆ ವಿಧಾನ
    ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: recruitment@ongc.co.in

    ಇದನ್ನು ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ; 2410 ಹುದ್ದೆಗಳ ನೇಮಕಾತಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಈ ಇಮೇಲ್ ವಿಳಾಸಕ್ಕೆ recruitment@ongc.co.in ಅಭ್ಯರ್ಥಿಗಳು ಮೇಲ್​ ಮಾಡಬೇಕಿದೆ.
    Published by:Seema R
    First published: