• Home
  • »
  • News
  • »
  • jobs
  • »
  • ONGC 2022 Recruitment: 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ

ONGC 2022 Recruitment: 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ

ಇಂದೇ ಅಪ್ಲೈ ಮಾಡಿ

ಇಂದೇ ಅಪ್ಲೈ ಮಾಡಿ

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ಅವಕಾಶ ನಿಮಗಿದ್ದು ಇದೇ ತಿಂಗಳ 12 ನೇ ತಾರೀಖು ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಇಂದೇ ಅರ್ಜಿ ಸಲ್ಲಿಸಿ.

  • Share this:

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ONGC) ಈಗ ಪ್ರಸ್ತುತ 871 ಹುದ್ದೆಗಳಿಗೆ  ನೇಮಕಾತಿ (Recruitment) ಅರ್ಜಿಗಳನ್ನು ಆಹ್ವಾನಿಸಿದೆ. 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ (Interested) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ವಿವರಗಳು ಈ ಕೆಳಗಿನಂತಿವೆ. ಇಲ್ಲಿ ಕೆಲಸ (Job) ಮಾಡಲು ಬಯಸುವವರು ಈ ಕೆಳಗೆ ನೀಡಿರುವ ಮಾಹಿತಿಗೆ (Information) ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

ಹುದ್ದೆವಿವಿಧ ಹುದ್ದೆ
ಸಂಸ್ಥೆತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್
ವಯೋಮಾನಕನಿಷ್ಠ 28 ರಿಂದ 40 ವರ್ಷಗಳು.
ಖಾಲಿ ಹುದ್ದೆ871
ಅರ್ಜಿ ಸಲ್ಲಿಕೆ ಆರಂಭ ದಿನಾಂಕ22/09/2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ12/10/2022
ಅಧೀಕೃತ ವೆಬ್​​ಸೈಟ್ಇಲ್ಲಿ ಕ್ಲಿಕ್ ಮಾಡಿ

ಈ ಮೇಲೆ ನೀಡಿರುವ ಮಾಹಿತಿಗಳನ್ನು ಅನುಸರಿ ನೀವು ಅರ್ಜಿ ಸಲ್ಲಿಸಬಹುದು. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ಅವಕಾಶ ನಿಮಗಿದ್ದು ಇದೇ ತಿಂಗಳ 12 ನೇ ತಾರೀಖು ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಇಂದೇ ಅರ್ಜಿ ಸಲ್ಲಿಸಿ
ಪೋಸ್ಟ್ ಹೆಸರುವಿವರ
ರಸಾಯನಶಾಸ್ತ್ರಜ್ಞ39
ಭೂವಿಜ್ಞಾನಿ55 (PG)
ಭೂ ಭೌತಶಾಸ್ತ್ರಜ್ಞ78 (PG)
ಪ್ರೋಗ್ರಾಮಿಂಗ್ ಅಧಿಕಾರಿ13 (ಡಿಪ್ಲೊಮಾ/ಪದವಿ/ಎಂಸಿಎ)
ಸಾಮಗ್ರಿಗಳು ಮತ್ತು ನಿರ್ವಹಣೆ32 (ಪದವಿ/ಸಂಬಂಧಿತ ಇಂಜಿನಿಯರಿಂಗ್)
ವರ್ಗಾವಣೆ ಅಧಿಕಾರಿ13 (ಪದವಿ/ಸಂಬಂಧಿತ ಇಂಜಿನಿಯರಿಂಗ್)

ಅರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಮೆಕ್ಯಾನಿಕಲ್ ಎಂಜಿನಿಯರಿಂಗ್, ಪೆಟ್ರೋಲಿಯಂ ಎಂಜಿನಿಯರಿಂಗ್, ಸಿವಿಎಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಭೂವಿಜ್ಞಾನಿ, ಜಿಯೋಫಿಸಿಕ್ಸ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ವಯಸ್ಸಿನ ಮಿತಿ:
ಕನಿಷ್ಠ 28 ರಿಂದ 40 ವರ್ಷಗಳು.
ಕಾಯ್ದಿರಿಸದ/ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 30 ವರ್ಷಗಳು
ಹಿಂದುಳಿದ ವರ್ಗ: 33 ವರ್ಷಗಳು
SC/ST: 35 ವರ್ಷಗಳು.


ಅರ್ಜಿ ಸಲ್ಲಿಸುವುದು ಹೇಗೆ:
* ಅರ್ಹ ಅಭ್ಯರ್ಥಿಗಳು ONGC ನೇಮಕಾತಿ 2022 ಅಧಿಸೂಚನೆಯಲ್ಲಿ ನೀಡಲಾದ ಸಂಬಂಧಿತ ನೇಮಕಾತಿ ಲಿಂಕ್ ongcindia.com/ ಅನ್ನು ಕ್ಲಿಕ್ ಮಾಡಿ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ.


ಇದನ್ನೂ ಓದಿ: ನಬಾರ್ಡ್​ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಇನ್ನು ಎರಡು ದಿನ ಬಾಕಿ



* ಶಿಕ್ಷಣ ಸಂಬಂಧಿತ ದಾಖಲೆ, ವಯೋಮಿತಿ ದಾಖಲೆ, ಗೇಟ್ ಪರೀಕ್ಷೆಯ ವಿಷಯ ಮತ್ತು ಅಂಕ ಪಟ್ಟಿಯನ್ನು ಲಗತ್ತಿಸಬೇಕು. ಅರ್ಜಿಯೊಂದಿಗೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಅನುಭವ ಆಧಾರ್ ಪ್ರಮಾಣಪತ್ರ, ಗುರುತಿನ ದೃಢೀಕರಣ ಪ್ರಮಾಣಪತ್ರ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಒದಗಿಸಬೇಕು. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಒದಗಿಸಿ.



* ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ ಮತ್ತು ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಇಮೇಲ್‌ನಲ್ಲಿ ಪರೀಕ್ಷೆಯ ದಿನಾಂಕದ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.


AEE ಡ್ರಿಲ್ಲಿಂಗ್/ಸಿಮೆಂಟಿಂಗ್ ಹುದ್ದೆಗೆ;
ಕಾಯ್ದಿರಿಸದ/ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 28 ವರ್ಷಗಳು
ಹಿಂದುಳಿದ ವರ್ಗ: 31 ವರ್ಷಗಳು
SC/ST: 33 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ವಿನಾಯಿತಿ ಲಭ್ಯವಿದೆ.


ಅರ್ಜಿ ಶುಲ್ಕ:
ಸಾಮಾನ್ಯ / OBC / ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 300
SC/ST: ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ಇದನ್ನೂ ಓದಿ: ನಿರುದ್ಯೋಗಿಗಳಿಗಾಗಿ ಸಿಹಿ ಸುದ್ಧಿ ಇಲ್ಲಿದೆ, ಆಕರ್ಷಕ ವೇತನ ನಿಮಗಾಗಿ, ಈಗ್ಲೇ ಅಪ್ಲೈ ಮಾಡಿ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22/09/2022 ರಿಂದ ಪ್ರಾರಂಭವಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12/10/2022

First published: