ONGC Recruitment 2021: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ONGC, ಎಂಜಿನಿಯರಿಂಗ್​ ಪಾಸಾದವರಿಗೆ ಅವಕಾಶ

ಡಿಸೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ONGC

ONGC

  • Share this:
ONGC Recruitment 2021: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಒಟ್ಟು 21 HR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ, ಎಂಎಸ್ಸಿ, ಎಂಬಿಎ, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.ongcindia.com ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆತೈಲ ಮತ್ತು ನೈಸರ್ಗಿಕ ಅನಿಲ ನಿಗಮ
ಹುದ್ದೆಯ ಹೆಸರುHR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್
ಒಟ್ಟು ಹುದ್ದೆಗಳು21
ವಿದ್ಯಾರ್ಹತೆಡಿಪ್ಲೋಮಾ, ಎಂಎಸ್ಸಿ, ಎಂಬಿಎ, ಎಂಜಿನಿಯರಿಂಗ್
ಉದ್ಯೋಗದ ಸ್ಥಳಡೆಹ್ರಾಡೂನ್​
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ15/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04/01/2022



ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/01/2022

ಇದನ್ನೂ ಓದಿ: DGCA: ಮಾಸಿಕ ವೇತನ ₹ 75,000; ನಾಗರಿಕ ವಿಮಾನಯಾನ ನಿರ್ದೇಶನಾಲಯದಲ್ಲಿ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ



ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/EWS- 300 ರೂ.
SC/ST/PWD- ಯಾವುದೇ ಅರ್ಜಿ ಶುಲ್ಕವಿಲ್ಲ

ಹುದ್ದೆಯ ಮಾಹಿತಿ
HR ಎಕ್ಸಿಕ್ಯೂಟಿವ್​​- 15
ಪಬ್ಲಿಕ್ ರಿಲೇಶನ್ ಆಫೀಸರ್-06

ವಿದ್ಯಾರ್ಹತೆ:
HR ಎಕ್ಸಿಕ್ಯೂಟಿವ್​​- ಕನಿಷ್ಠ ಶೇ.60 ಅಂಕಗಳೊಂದಿಗೆ HRD/HRM ನಲ್ಲಿ ಎಂಬಿಎ ಪೂರ್ಣಗೊಳಿಸಿರಬೇಕು/ ಅಥವಾ ಕನಿಷ್ಠ 60% ಅಂಕಗಳೊಂದಿಗೆ ಸಿಬ್ಬಂದಿ ನಿರ್ವಹಣೆ/ IR/ ಕಾರ್ಮಿಕ ಕಲ್ಯಾಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು/ ಅಥವಾ
ಕನಿಷ್ಠ 60% ಅಂಕಗಳೊಂದಿಗೆ PM/ IR/ ಕಾರ್ಮಿಕ ಕಲ್ಯಾಣದಲ್ಲಿ ಕನಿಷ್ಠ 2 ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಡಿಪ್ಲೊಮಾ ಪೂರ್ಣಗೊಳಿಸಿರಬೇಕು/ ಅಥವಾ ಕನಿಷ್ಠ 60% ಅಂಕಗಳೊಂದಿಗೆ IIM ನಿಂದ PGDM ಪಡೆದಿರಬೇಕು.

ಪಬ್ಲಿಕ್ ರಿಲೇಶನ್ ಆಫೀಸರ್- ಕನಿಷ್ಠ 60% ಅಂಕಗಳೊಂದಿಗೆ ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮ/ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ/ ಕನಿಷ್ಠ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ:
EWS- 30 ವರ್ಷ
ಒಬಿಸಿ-33 ವರ್ಷ
SC/ST- 35 ವರ್ಷ
PWD-40 ವರ್ಷ
ಮಾಜಿ ಸೈನಿಕ- ಗರಿಷ್ಠ 35 ವರ್ಷ ಮೀರಿರಬಾರದು

ಇದನ್ನೂ ಓದಿ: ಗ್ರೇಡ್​-7 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1,45,000, BE, B Tech ಆದವರಿಗೆ ಅವಕಾಶ

ಉದ್ಯೋಗದ ಸ್ಥಳ
HR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತರಾಖಂಡದ ಡೆಹ್ರಾಡೂನ್​​ನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
HR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
UGC NET ಜೂನ್​ 2020ರ ಮಾನದಂಡ
ಶಾರ್ಟ್​ಲಿಸ್ಟಿಂಗ್​
ವೈಯಕ್ತಿಕ ಸಂದರ್ಶನ
Published by:Latha CG
First published: