ONGC Recruitment 2021: BE, B. Tech ಪದವೀಧರರಿಗೆ ಒಎನ್​ಜಿಸಿಯಲ್ಲಿ ಉದ್ಯೋಗ, ಅರ್ಜಿ ಹಾಕಲು ಹೀಗೆ ಮಾಡಿ

ONGC Recruitment 2021: ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 1ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಎನ್​ಜಿಸಿ

ಒಎನ್​ಜಿಸಿ

  • Share this:
ONGC Recruitment 2021: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ(The Oil and Natural Gas Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇ(B.E), ಬಿಟೆಕ್(B. Tech), ಎಂ.ಡಿ(MD) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ವಿವಿಧ 309 ಹುದ್ದೆಗಳು ಖಾಲಿ ಇವೆ. ಮೆಟೀರಿಯಲ್ ಮ್ಯಾನೇಜ್​ಮೆಂಟ್ ಆಫೀಸರ್(Material Management Officer), ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್(Association of Energy Engineer), ಜಿಯಾಲಜಿಸ್ಟ್(Geologist), ಕೆಮಿಸ್ಟ್,(Chemist) ಟ್ರಾನ್ಸ್​ಪೋರ್ಟ್ ಆಫೀಸರ್(Transport Officer), ಜಿಯಾಫಿಸಿಸ್ಟ್​(Geophysicist) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 1ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

































ಸಂಸ್ಥೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ
ಹುದ್ದೆಯ ಹೆಸರು ಮೆಟೀರಿಯಲ್ ಮ್ಯಾನೇಜ್​ಮೆಂಟ್ ಆಫೀಸರ್, ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್, ಜಿಯಾಲಜಿಸ್ಟ್, ಕೆಮಿಸ್ಟ್, ಟ್ರಾನ್ಸ್​ಪೋರ್ಟ್ ಆಫೀಸರ್, ಜಿಯಾಫಿಸಿಸ್ಟ್​ ಹುದ್ದೆಗಳು
ಒಟ್ಟು ಹುದ್ದೆಗಳು 309
ವಿದ್ಯಾರ್ಹತೆ BE, B. Tech, MD
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01/11/2021



ಹುದ್ದೆಯ ಬಗ್ಗೆ ಮಾಹಿತಿ:

ಒಟ್ಟು 309 ಹುದ್ದೆಗಳು ಖಾಲಿ ಇದ್ದು, ಮೆಟೀರಿಯಲ್ ಮ್ಯಾನೇಜ್​ಮೆಂಟ್ ಆಫೀಸರ್, ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್, ಜಿಯಾಲಜಿಸ್ಟ್, ಕೆಮಿಸ್ಟ್, ಟ್ರಾನ್ಸ್​ಪೋರ್ಟ್ ಆಫೀಸರ್, ಜಿಯಾಫಿಸಿಸ್ಟ್​ ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ:

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ, ಬಿ.ಟೆಕ್ ಮತ್ತು ಎಂಡಿ ಪೂರ್ಣಗೊಳಿಸಿರಬೇಕು. ಎಂಜಿನಿಯರಿಂಗ್​/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರೂ ಉದ್ಯೋಗ ನೀಡಬಹುದು.

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, 11/10/2021 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. 01/11/2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಭ್ಯರ್ಥಿಗಳು ONGCಯ ಅಧಿಕೃತ ವೆಬ್​ಸೈಟ್​​​​​ www.ongcindia.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ:

ಸಾಮಾನ್ಯ/ಇಡಬ್ಲ್ಯೂಎಸ್​/ಒಬಿಸಿ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ. ಆದರೆ ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಹುದ್ದೆಯ ಬಗ್ಗೆ ಮಾಹಿತಿ:

ಎಇಇ-220
ಕೆಮಿಸ್ಟ್-14
ಜಿಯಾಲಜಿಸ್ಟ್​-19
ಜಿಯೋಫಿಸಿಸಿಸ್ಟ್-35
ಮೆಟೀರಿಯಲ್ ಮ್ಯಾನೇಜ್​ಮೆಂಟ್​ ಆಫೀಸರ್-13
ಟ್ರಾನ್ಸ್​ಪೋರ್ಟ್​ ಆಫೀಸರ್-08
ಒಟ್ಟು 309 ಹುದ್ದೆಗಳು ಖಾಲಿ ಇವೆ

ವಯೋಮಿತಿ:

ಎಇಇ ಹುದ್ದೆಗೆ 28 ವರ್ಷ, ಉಳಿದ ಹುದ್ದೆಗಳಿಗೆ 30 ವರ್ಷ ಆಗಿರಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಜೊತೆಗೆ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: