Oil India Recruitment 2022: ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಅಧಿಕೃತ ಅಧಿಸೂಚನೆಯ ಮೂಲಕ ವಿಚಾರಣೆ ಪ್ರಾಧಿಕಾರದ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ (Central Government) ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.
ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು |
ಆಯಿಲ್ ಇಂಡಿಯಾ ಲಿಮಿಟೆಡ್ |
ಹುದ್ದೆಗಳ ಸಂಖ್ಯೆ |
05 |
ಉದ್ಯೋಗ ಸ್ಥಳ |
ದಿಬ್ರುಗಢ್ - ಅಸ್ಸಾಂ |
ಹುದ್ದೆಯ ಹೆಸರು |
ವಿಚಾರಣಾ ಪ್ರಾಧಿಕಾರ ಅಧಿಕಾರಿ |
ಸಂಬಳ |
ರೂ.50000/- ಪ್ರತಿ ತಿಂಗಳು |
ವಯೋಮಿತಿ |
ಗರಿಷ್ಠ ವಯಸ್ಸು 70 ವರ್ಷ |
ಅವಧಿ |
3 ವರ್ಷ |
ಅರ್ಜಿ ಕಳುಹಿಸುವ ಇ-ಮೇಲ್ |
IAempanelment@oilindia.in |
ಅರ್ಜಿ ಕಳುಹಿಸುವ ವಿಳಾಸ |
ಜನರಲ್ ಮ್ಯಾನೇಜರ್ (ಎಚ್ಆರ್ ಸಂಬಂಧಗಳು) I/C, ಫೀಲ್ಡ್ ಹೆಡ್ಕ್ವಾರ್ಟರ್ಸ್, ಆಯಿಲ್ ಇಂಡಿಯಾ ಲಿಮಿಟೆಡ್, ದುಲಿಯಾಜನ್, ದಿಬ್ರುಗರ್, ಅಸ್ಸಾಂ-786602 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
07-05-2022 (ಇಂದು ಕೊನೆಯ ದಿನ) |
ಖಾಲಿ ಇರುವ 5 ವಿಚಾರಣಾ ಪ್ರಾಧಿಕಾರ ಅಧಿಕಾರಿ ಹುದ್ದೆಗಳ ಭರ್ತಿಗೆ ಆಯಿಲ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅನುಭವಿ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆಫ್ಲೈನ್ ಮೂಲಕ ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.50000/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಆಯಿಲ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 5
ಉದ್ಯೋಗ ಸ್ಥಳ: ದಿಬ್ರುಗಢ್ - ಅಸ್ಸಾಂ
ಹುದ್ದೆಯ ಹೆಸರು: ವಿಚಾರಣಾ ಪ್ರಾಧಿಕಾರ ಅಧಿಕಾರಿ
ಸಂಬಳ: ರೂ.50000/- ಪ್ರತಿ ತಿಂಗಳು
ಅರ್ಹತೆ
ಜನರಲ್ ಮ್ಯಾನೇಜರ್ ಆಗಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿರಬೇಕು.
ವಯಸ್ಸಿನ ಮಿತಿ: ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 70 ವರ್ಷಗಳು.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಫೈರ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 40 ಸಾವಿರ ಸಂಬಳ
ಅವಧಿ: 3 ವರ್ಷಗಳು
ವಯಸ್ಸಿನ ಸಡಿಲಿಕೆ: ಆಯಿಲ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್ (ಎಚ್ಆರ್ ಸಂಬಂಧಗಳು) I/C, ಫೀಲ್ಡ್ ಹೆಡ್ಕ್ವಾರ್ಟರ್ಸ್, ಆಯಿಲ್ ಇಂಡಿಯಾ ಲಿಮಿಟೆಡ್, ದುಲಿಯಾಜನ್, ದಿಬ್ರುಗರ್, ಅಸ್ಸಾಂ-786602 ಗೆ ಮೇ 7 ರ ಮೊದಲು ಕಳುಹಿಸಬೇಕಾಗುತ್ತದೆ. ಅಭ್ಯರ್ಥಿಗಳು ಇಮೇಲ್ ಐಡಿ ಮೂಲಕ ಸಹ ಅರ್ಜಿಯನ್ನು ಕಳುಹಿಸಬಹುದು:
IAempanelment@oilindia.in
ವೆಬ್ಸೈಟ್: oil-india.com
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ
ಜನರಲ್ ಮ್ಯಾನೇಜರ್ (ಎಚ್ಆರ್ ಸಂಬಂಧಗಳು) I/C,
ಫೀಲ್ಡ್ ಹೆಡ್ಕ್ವಾರ್ಟರ್ಸ್,
ಆಯಿಲ್ ಇಂಡಿಯಾ ಲಿಮಿಟೆಡ್,
ದುಲಿಯಾಜನ್, ದಿಬ್ರುಗರ್,
ಅಸ್ಸಾಂ-786602
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-04-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-05-2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ