ಗ್ರೇಡ್​-7 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1,45,000, BE, B Tech ಆದವರಿಗೆ ಅವಕಾಶ

ಡಿಸೆಂಬರ್ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಯಿಲ್ ಇಂಡಿಯಾ

ಆಯಿಲ್ ಇಂಡಿಯಾ

  • Share this:
Oil India Limited Recruitment: ಆಯಿಲ್ ಇಂಡಿಯಾ ಲಿಮಿಟೆಡ್​​ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 146 ಗ್ರೇಡ್​-7 ಹುದ್ದೆಗಳು ಖಾಲಿ ಇವೆ. ಬಿಇ, ಬಿ.ಟೆಕ್​ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಸೆಂಬರ್ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.oil-india.com ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಆಯಿಲ್ ಇಂಡಿಯಾ ಲಿಮಿಟೆಡ್​
ಹುದ್ದೆಯ ಹೆಸರುಗ್ರೇಡ್​-7
ಒಟ್ಟು ಹುದ್ದೆಗಳು146
ವಿದ್ಯಾರ್ಹತೆ10ನೇ ತರಗತಿ, ಬಿಇ, ಬಿ.ಟೆಕ್​, ಡಿಪ್ಲೋಮಾ
ಉದ್ಯೋಗದ ಸ್ಥಳಅಸ್ಸಾಂ
ವೇತನಮಾಸಿಕ ₹ 37,500-1,45,000
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/12/2021ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/12/2021

ಇದನ್ನೂ ಓದಿ:India Railway Recruitment 2021: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ- 200 ರೂ.
ಎಸ್​ಸಿ/ಎಸ್​ಟಿ/EWS/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ವಿದ್ಯಾರ್ಹತೆ:
ಆಯಿಲ್ ಇಂಡಿಯಾ ಲಿಮಿಟೆಡ್​​ನಲ್ಲಿ ಖಾಲಿ ಇರುವ ಗ್ರೇಡ್​-7 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ 10ನೇ ತರಗತಿ, ಬಿಇ, ಬಿ.ಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಸಾಮಾನ್ಯ-18ರಿಂದ 30 ವರ್ಷ
SC/ST-18ರಿಂದ 35 ವರ್ಷ
ಒಬಿಸಿ-18-33 ವರ್ಷ

ಇದನ್ನೂ ಓದಿ: SAIL Recruitment 2021: ಸ್ಟೀಲ್ ಅಥಾರಿಟಿ ಆಫ್​ ಇಂಡಿಯಾದಲ್ಲಿ 38 ಶಿಕ್ಷಕ ಹುದ್ದೆಗಳು ಖಾಲಿ; ನೇರ ಸಂದರ್ಶನ

ಉದ್ಯೋಗದ ಸ್ಥಳ:
ಗ್ರೇಡ್​-7 ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಸ್ಸಾಂನ ದಿಬ್ರುಗರ್​​ನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಗ್ರೇಡ್​-7 ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 37,500-1,45,000 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: