ONGC Recruitment: ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ; 42 ಸಾವಿರ ವೇತನ

ಪದವಿ, ಐಟಿಐ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.

ONGC

ONGC

  • Share this:
    ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (Oil and Natural Gas Corporation)   ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ (Junior Consultant and Associate Consultant Posts) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 27 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪದವಿ, ಐಟಿಐ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 13 ಆಗಿದೆ.

    ಎರಡು ವರ್ಷದ ಅವಧಿಗೆ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
    ಹುದ್ದೆಯ ಹೆಸರು: ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್
    ಹುದ್ದೆಗಳ ಸಂಖ್ಯೆ: 29
    ಕಾರ್ಯ ನಿರ್ವಹಣೆ ಸ್ಥಳ: ಮೆಹ್ಸಾನಾ - ಸಿಲ್ಚಾರ್
    ವೇತನ: 15000-105000 ರೂ. ಪ್ರತಿ ತಿಂಗಳು































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಜೂನಿಯರ್ ಕನ್ಸಲ್ಟೆಂಟ್ - ಇನ್ಸ್ಟ್ರುಮೆಂಟೇಶನ್2ಡಿಪ್ಲೊಮಾ, ಪದವಿಗರಿಷ್ಠ 65 ವರ್ಷ42000-43350 ರೂ ಮಾಸಿಕ
    ಜೂನಿಯರ್ ಕನ್ಸಲ್ಟೆಂಟ್23ಐಟಿಐ, ಡಿಪ್ಲೊಮಾ, ಪದವಿಗರಿಷ್ಠ 65 ವರ್ಷ15000-28350 ರೂ ಮಾಸಿಕ
    ಅಸೋಸಿಯೇಟ್ ಕನ್ಸಲ್ಟೆಂಟ್2ಐಟಿಐ, ಡಿಪ್ಲೊಮಾ, ಪದವಿಗರಿಷ್ಠ 65 ವರ್ಷ28000-42000 ರೂ ಮಾಸಿಕ

    ಅರ್ಜಿ ಸಲ್ಲಿಕೆ: ಇಮೇಲ್​ ಮೂಲಕ

    ಇಮೇಲ್​ ವಿಳಾಸ
    ಜೂನಿಯರ್ ಕನ್ಸಲ್ಟೆಂಟ್ - ಇನ್ಸ್ಟ್ರುಮೆಂಟೇಶನ್: verma_chandrashekhar@ongc.co.in ಹಾಗೂ sejpal_akash@ongc.co.in
    ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್: SINGH2_HIMANSHU@ONGC.CO.IN

    ಇದನ್ನು ಓದಿ: ಕ್ಲರ್ಕ್​ ಮತ್ತು ಸ್ಟೆನೋಗ್ರಾಫರ್​ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಉದ್ಯೋಗದ ವಿವರ

    ಅರ್ಜಿ ಶುಲ್ಕ : ವಿನಾಯಿತಿ ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ
    ಅರ್ಹತೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 01 ಆಗಸ್ಟ್​​ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 13 ಆಗಸ್ಟ್ 2022

    ಪ್ರಮುಖ ಲಿಂಕ್
    ಅಧಿಕೃತ ಅರ್ಜಿ ವೀಕ್ಷಣೆ ಮತ್ತು ನಿಗದಿತ ಅರ್ಜಿಯ ಪಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​: ongcindia.com

    ಇದನ್ನು ಓದಿ: 6432 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ ಐಬಿಪಿಎಸ್

    ಅರ್ಜಿ ಸಲ್ಲಿಸುವ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ.  ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

    ಆನ್‌ಲೈನ್‌ನಲ್ಲಿ ಲಾಗ್​ ಇನ್​ ಆಗಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ಇಮೇಲ್​ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
    Published by:Seema R
    First published: