NVS Recruitment: 1925 A, B ಮತ್ತು C ಗ್ರೂಪ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 2 ಲಕ್ಷದವರೆಗೆ

ಜನವರಿ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 10, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

NVS

NVS

  • Share this:
ನವೋದಯ ವಿದ್ಯಾಲಯ ಸಮಿತಿ(Navodaya Vidyalaya Samiti) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1925 A, B ಮತ್ತು C ಗ್ರೂಪ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್​ಸೈಟ್​ navodaya.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಜನವರಿ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 10, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆನವೋದಯ ವಿದ್ಯಾಲಯ ಸಮಿತಿ
ಹುದ್ದೆಯ ಹೆಸರುA, B ಮತ್ತು C ಗ್ರೂಪ್​
ಒಟ್ಟು ಹುದ್ದೆಗಳು 1925
ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಪದವಿ, 12ನೇ ತರಗತಿ
ವೇತನಮಾಸಿಕ ₹ 78,800-2,09,200
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10/02/2022

ಇದನ್ನೂ ಓದಿ: NIT ಕರ್ನಾಟಕ ನೇಮಕಾತಿ 2022, JRF, SRF ಹುದ್ದೆಗಳಿಗೆ ಸಂದರ್ಶನ, ಮಾಸಿಕ ವೇತನ ₹ 18,000

ಹುದ್ದೆಯ ಮಾಹಿತಿ
ಅಸಿಸ್ಟೆಂಟ್ ಕಮಿಷನರ್- 7
ಮಹಿಳಾ ಸ್ಟಾಫ್​ ನರ್ಸ್​-82
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-10
ಆಡಿಟ್ ಅಸಿಸ್ಟೆಂಟ್-11
ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್-4
ಜೂನಿಯರ್ ಎಂಜಿನಿಯರ್-1
ಸ್ಟೆನೋಗ್ರಾಫರ್-22
ಕಂಪ್ಯೂಟರ್ ಆಪರೇಟರ್-4
ಕ್ಯಾಟರಿಂಗ್ ಅಸಿಸ್ಟೆಂಟ್- 87
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟೆಂಟ್- 630
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್-273
ಲ್ಯಾಬ್​ ಅಟೆಂಡೆಂಟ್-142
ಮೆಸ್​ ಹೆಲ್ಪರ್-629
ಮಲ್ಟಿ ಟಾಸ್ಕಿಂಗ್ ಸ್ಟಾಫ್-23

ಇದನ್ನೂ ಓದಿ: Jobs Alert: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 1 ಲಕ್ಷಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳ ನೇಮಕಾತಿ; ವಿವರ ಇಲ್ಲಿದೆ

ಅರ್ಜಿ ಶುಲ್ಕ:
ಅಸಿಸ್ಟೆಂಟ್ ಕಮಿಷನರ್- 1500 ರೂ.
ಮಹಿಳಾ ಸ್ಟಾಫ್ ನರ್ಸ್-1200 ರೂ.
ಲ್ಯಾಬ್​ ಅಟೆಂಡೆಂಟ್,
ಮೆಸ್ ಹೆಲ್ಪರ್, ಎಂಟಿಸ್-750 ರೂ.
ಉಳಿದ ಹುದ್ದೆಗಳಿಗೆ-1000 ರೂ.

ವಿದ್ಯಾರ್ಹತೆ:
ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಹುದ್ದೆಗನುಸಾರ ವಿದ್ಯಾರ್ಹತೆ ಪಡೆದಿರಬೇಕು. (ಸ್ನಾತಕೋತ್ತರ ಪದವಿ, ಪದವಿ, 12ನೇ ತರಗತಿ) ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಇಲ್ಲಿ ಕ್ಲಿಕ್ ಮಾಡಿ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ವೇತನ:
ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಹುದ್ದೆಗನುಸಾರ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಶಾರ್ಟ್​ ಲಿಸ್ಟಿಂಗ್​​​
ದಾಖಲಾತಿ ಪರಿಶೀಲನೆ
ಸಂದರ್ಶನ
Published by:Latha CG
First published: