ಕೈಗಾದಲ್ಲಿನ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (NUCLEAR POWER CORPORATION OF INDIA LIMITED) ನಲ್ಲಿ ಐಟಿಐ ಅಪ್ರೆಂಟಿಸ್ (ITI Apprentices )ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಒಟ್ಟು 75 ಹುದ್ದೆಗಳಿಗೆ ನೇಮಕಾತಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್ 15 ಆಗಿದೆ.
ಹುದ್ದೆ ವಿವರ |
ಹುದ್ದೆ ಸಂಖ್ಯೆ |
ಫಿಟ್ಟರ್ |
20 |
ಟರ್ನರ್ |
4 |
ಮೆಕ್ಯಾನಿಸ್ಟ್ |
2 |
ಎಲೆಕ್ಟ್ರಿಷಿಯನ್ |
30 |
ವೆಲ್ಡರ್ |
4 |
ಎಲೆಕ್ಟ್ರಾನಿಕ್ ಮೆಕ್ಯಾನಿಕ್ |
9 |
ಡ್ರಾಫ್ಟ್ಸ್ಮನ್ (ಸಿವಿಲ್) |
4 |
ಸರ್ವೇಯರ್ |
2 |
ಅಣುಶಕ್ತಿ ಇಲಾಖೆಯ ಕಾರವಾರದ ಕೈಗಾದಲ್ಲಿ ಕೆಲಸ ಮಾಡಲು ಇಚ್ಚಿಸುವ ಸಂಬಂಧ ಪಟ್ಟ ವಿಷಯದಲ್ಲಿ ಐಟಿಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಈ ಅಪ್ರೆಂಟಿಸ್ ಅವಧಿ 1 ವರ್ಷದ್ದಾಗಿದೆ. ಸೆಪ್ಟೆಂಬರ್ 30ರಿಂದ ಆನ್ ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಕ್ಟೋಬರ 15 ಅರ್ಜಿ ಸಲ್ಲಿಕೆಗೆ ಕಡೆಯ ದಿನ
ಇದನ್ನು ಓದಿ: ದಕ್ಷಿಣ ಕನ್ನಡ ಜಿ. ಪಂನಲ್ಲಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲ
ವಯೋಮಿತಿ (Age limit)
ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಟ 14 ವರ್ಷ ವಾಗಿದ್ದು ಗರಿಷ್ಠ 24 ವರ್ಷವಾಗಿರಬಾರದು
ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಕೆ
ಪಿಡ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ
ವೇತನ |
ಆಯ್ಕೆ ಪ್ರಕ್ರಿಯೆ |
ಅರ್ಜಿ ಶುಲ್ಕ |
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗ ಎನ್ಪಿಸಿಐಎಲ್ ನೇಮಕಾತಿ ನಿಯಮಾನುಸಾರ ತಿಂಗಳಿಗೆ ಸ್ಟೈಫೆಂಡ್ ನೀಡಲಾಗುವುದು |
ಈ ಹುದ್ದೆಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ |
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕು |
ಅರ್ಜಿ ಸಲ್ಲಿಕೆ ವಿಧಾನ (How to apply )
*ಅರ್ಹ ಅಭ್ಯರ್ಥಿಗಳು ಮೊದಲು
https://apprenticeshipindia.org ವೆಬ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು
*ಅಪ್ರೆಂಟಿಸ್ಶಿಪ್ಗಾಗಿ ನೋಂದಾಯಿಸಿಕೊಂಡ ಬಳಿಕ ಕೈಗಾದ ಟ್ರೆಡ್ ನೋಂದಣಿ ಸಂಖ್ಯೆ E01212900046 ಸಿಗಲಿದೆ
*ಇದಾದ ಬಳಿಕ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕೈಗಾದ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಬೇಕು
*ಆನ್ಲೈನ್ನಲ್ಲಿ ನೋಂದಾಯಿಸಿದ ನಂತರಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು ಇದನ್ನ ಅಗತ್ಯವಿದಲ್ಲಿ ಶಾರ್ಟ್ಲಿಸ್ಟ್ನಲ್ಲಿ ಆಯ್ಕೆಯಾದ ಬಳಿಕ ಈ ಪ್ರತಿ ನೀಡಬೇಕಾಗುತ್ತದೆ
*ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
ಪ್ರಮುಖ ಲಿಂಕ್ಗಳು (Important links)
ಈ ಹುದ್ದೆ ಕುರಿತು ಹೊರಡಿಸಿರು ಅಧಿಕೃತ ಅಧಿಸೂಚನೆ ನೋಡಲು
ಇಲ್ಲಿ ಕ್ಲಿಕ್ ಮಾಡಿ
ಕೈಗಾದ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕೃತ ಪುಟಕ್ಕೆ ಭೇಟಿ ನೀಡಲು
ಇಲ್ಲಿ ಕ್ಲಿಕ್ ಮಾಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ