Communication Skill: ಉದ್ಯೋಗಾಕಾಂಕ್ಷಿಗಳಿಗೆ ರೆಸ್ಯೂಮ್ ಜೊತೆಗೆ ಸಂವಹನ ಕೌಶಲ್ಯವೂ ಮುಖ್ಯ; ಅದಕ್ಕಾಗಿ ಈ ವಿಷಯದತ್ತ ಗಮನಹರಿಸಿ

ಒಂದು ಕಂಪನಿ ಕೆಲವು ನೇಮಕಾತಿಯನ್ನು ಪ್ರಕಟಿಸಿದಾಗ ಅರ್ಜಿ ಸಲ್ಲಿಸಿದ ಎಲ್ಲರೂ ಆಯ್ಕೆಯಾಗುವುದಿಲ್ಲ. ಕೆಲವರು ನೇಮಕಗೊಳ್ಳುತ್ತಾರೆ ಇನ್ನೂ ಕೆಲವರು ಉಳಿದು ಬಿಡುತ್ತಾರೆ. ಹಾಗಾದರೆ, ನಾವಿಲ್ಲಿ ಯಾರು ಕೆಲಸಕ್ಕೆ ನೇಮಕಗೊಳ್ಳುತ್ತಾರೆ ಮತ್ತು ಯಾರು ಮತ್ತು ಏಕೆ ಆ ಕೆಲಸವನ್ನು ಪಡೆಯುವುದಿಲ್ಲ. ಸರಿಯಾದ ಮನಸ್ಥಿತಿಯು ಯಶಸ್ವಿ ಉದ್ಯೋಗಾಕಾಂಕ್ಷಿಗಳನ್ನು ಉಳಿದವರಿಂದ ಹೇಗೆ ಪ್ರತ್ಯೇಕಿಸುತ್ತದೆ? ಎಂಬುವುದನನ್ನು ಇಲ್ಲಿ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದು ಸಂಸ್ಥೆಯಲ್ಲಿ ಕೆಲಸ (Work) ಮಾಡಬೇಕು ಎಂಬ ಇಚ್ಚೆಯಿದ್ದರೆ ಸಾಲದು ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಎಲ್ಲಾ ರೀತಿಯ ಅರ್ಹತೆಗಳು ನಮ್ಮಲ್ಲಿರಬೇಕು. ಅದು ನಮ್ಮ ಶೈಕ್ಷಣಿಕ ಅರ್ಹತೆಯಿಂದ ಹಿಡಿದು, ವ್ಯಕ್ತಿತ್ವ, ಮಾತನಾಡುವ ಕಲೆ, ನಾವು ಕೊಡುವ ರೆಸ್ಯೂಮ್ ವರೆಗೂ (Resume) ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಂಪನಿ ಕೆಲವು ನೇಮಕಾತಿಯನ್ನು (recruitment) ಪ್ರಕಟಿಸಿದಾಗ ಅರ್ಜಿ ಸಲ್ಲಿಸಿದ ಎಲ್ಲರೂ ಆಯ್ಕೆಯಾಗುವುದಿಲ್ಲ. ಕೆಲವರು ನೇಮಕಗೊಳ್ಳುತ್ತಾರೆ ಇನ್ನೂ ಕೆಲವರು ಉಳಿದು ಬಿಡುತ್ತಾರೆ. ಹಾಗಾದರೆ, ನಾವಿಲ್ಲಿ ಯಾರು ಕೆಲಸಕ್ಕೆ ನೇಮಕಗೊಳ್ಳುತ್ತಾರೆ ಮತ್ತು ಯಾರು ಮತ್ತು ಏಕೆ ಆ ಕೆಲಸವನ್ನು ಪಡೆಯುವುದಿಲ್ಲ. ಸರಿಯಾದ ಮನಸ್ಥಿತಿಯು ಯಶಸ್ವಿ ಉದ್ಯೋಗಾಕಾಂಕ್ಷಿಗಳನ್ನು (job seeker) ಉಳಿದವರಿಂದ ಹೇಗೆ ಪ್ರತ್ಯೇಕಿಸುತ್ತದೆ? ಎಂಬುವುದನನ್ನು ಇಲ್ಲಿ ನೋಡೋಣ.

ಯಾರು ನೇಮಕಗೊಳ್ಳುತ್ತಾರೆ ಮತ್ತು ಯಾರು ಕೆಲಸ ತೆಗೆದುಕೊಳ್ಳುವುದಿಲ್ಲ ಎಂಬುದರ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ನೋಡುವುದಾದರೆ, ಇಲ್ಲಿ ಎರಡು ಅಂಶಗಳು ಬರುತ್ತವೆ. ಮೊದಲನೆಯದು ವಿಷಯ - ಇದು ನಿಮ್ಮ ರೆಸ್ಯೂಮ್ ಮತ್ತು ಕವರ್ ಲೆಟರ್ ಅನ್ನು ಒಳಗೊಂಡಿರುತ್ತದೆ. ಎರಡನೇಯದು ನಿಮ್ಮ ವ್ಯಕ್ತಿತ್ವ.

ಉದ್ಯೋಗ ಸೇರಲು ಬಯಸುವವರಿಗೆ ತಮ್ಮ ರೆಸ್ಯೂಮ್ ಹೇಗಿರಬೇಕು
ಹೊಸದಾಗಿ ಉದ್ಯೋಗ ಸೇರಲು ಬಯಸುವವರಿಗೆ ತಮ್ಮ ರೆಸ್ಯೂಮ್ ಹೇಗಿದ್ದರೆ ಫರ್ಫೆಕ್ಟ್, ಯಾವ ಪ್ರಮುಖ ಅಂಶಗಳಿಂದ ಉದ್ಯೋಗದಾತರಿಗೆ ನಮ್ಮ ರೆಸ್ಯೂಮ್ ಆಕರ್ಷಿಸಬಹುದು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹೌದು ಕೆಲಸಕ್ಕೆ ಸೇರುವ ಸಮಯದಲ್ಲಿ ರೆಸ್ಯೂಮ್ ಪ್ರಮುಖವಾಗಿದ್ದು, ಇದು ನಿಮ್ಮ ಸ್ಟೋರಿ ಬೋರ್ಡ್ ಆಗಿರುತ್ತದೆ. ಅಂದರೆ ನೇಮಕಾತಿ ಮಾಡಿಕೊಳ್ಳುವವರಿಗೆ ನಿಮ್ಮ ಬಗ್ಗೆ ಧೃಢವಾದ ಮತ್ತು ಪ್ರಮಾಣಿಕವಾದ ಕಥೆಯನ್ನು ನೀವು ರೆಸ್ಯೂಮ್ ಮೂಲಕ ಹೇಳುತ್ತೀರಿ.

ನೇಮಕಾತಿ ಮಾಡಿಕೊಳ್ಳುವವರನ್ನು ಮೆಚ್ಚಿಸಲು ನಿಮ್ಮ ಶೈಕ್ಷಣಿಕ ವಿಚಾರದಿಂದ ಹಿಡಿದು ನಿಮ್ಮ ಕಲೆ, ಕೌಶಲ್ಯ ಎಲ್ಲವನ್ನೂ ಚಿಕ್ಕದಾಗಿ, ಸ್ವಚ್ಛವಾಗಿ ರೆಸ್ಯೂಮ್ ನಲ್ಲಿ ಇರಿಸಬೇಕು. ಕೆಲವರು ನಿಮ್ಮ ರೆಸ್ಯೂಮ್ ನೋಡಿಯೇ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತಾರೆ. ರೆಸ್ಯೂಮ್ ಓದಿದ ನೇಮಕಾತಿ ವ್ಯವಸ್ಥಾಪಕರು ಅದನ್ನು ನೇಮಕಾತಿ ನಿರ್ವಾಹಕರಿಗೆ ಕಳುಹಿಸುತ್ತಾರೆ ಮತ್ತು ಮುಂದಿನ ಸುತ್ತಿಗೆ ನಿಮ್ಮನ್ನು ಶಿಫಾರಸು ಮಾಡುತ್ತಾರೆ. ಹೀಗಾಗಿ ಒಬ್ಬ ಉದ್ಯೋಗಾಂಕ್ಷಿಗೆ ರೆಸ್ಯೂಮ್ ಪವರ್ ಫುಲ್ ಆಯುಧ ಎನ್ನಬಹುದು.

ರೆಸ್ಯೂಮ್ ಮಾತ್ರವಲ್ಲ ಸಂವಹನ ಕೌಶಲ್ಯವೂ ಮುಖ್ಯ
ಈ ರೆಸ್ಯೂಮ್ ಮೊದಲ ವ್ಯತ್ಯಾಸವಾಗಿದ್ದು, ಅರ್ಹ ಅಭ್ಯರ್ಥಿಯನ್ನು ತಿರಸ್ಕರಿಸಿದ ಅಭ್ಯರ್ಥಿಯಿಂದ ಪ್ರತ್ಯೇಕಿಸುತ್ತದೆ. ರೆಸ್ಯೂಮ್ ಎಷ್ಟು ಮುಖ್ಯವೋ ಅದರ ಜೊತೆಜೊತೆಯೇ ನಿಮ್ಮ ಮಾತಿನ ಕೌಶಲ್ಯ ಸಹ ಅಗತ್ಯವಾಗಿದೆ. ಉತ್ತಮ ಪದವಿ ಹೊಂದಿದ್ದರೂ ಕೆಲವರು ಸಂದರ್ಶನದಲ್ಲಿ ಎಡವಿ ಬೀಳುತ್ತಾರೆ, ಇದಕ್ಕೆ ಪ್ರಮುಖ ಕಾರಣ ಮಾತುಗಾರಿಕೆ.

ಇದನ್ನೂ ಓದಿ:  EPFO Recruitment: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಬಿಇ ಆದವರಿಗೆ ಅವಕಾಶ

ಹೆಚ್ಚಿನ ಅರ್ಹತೆ ಪಡೆದ ನಂತರವೂ ನಮ್ಮ ಬಗ್ಗೆ ಕೌಶಲ್ಯದಿಂದ ಪ್ರಸ್ತುತಪಡಿಸಲು ಸಾಧ್ಯವಾಗದ ಕಾರಣ ಅನೇಕ ಶೈಕ್ಷಣಿಕವಾಗಿ ಉತ್ತಮವಿರುವ ನುರಿತ ಅಭ್ಯರ್ಥಿಗಳು ಸಂವಹನ ಮಾಡಿಕೊಳ್ಳುವ, ತಮ್ಮ ಬಗ್ಗೆ ಹೇಳಿಕೊಳ್ಳುವ ಸಂದರ್ಭದಲ್ಲಿ ಫೇಲ್ ಆಗುತ್ತಾರೆ. ಇವರಿಗೆ ಶಿಕ್ಷಣ ಚೆನ್ನಾಗಿರುತ್ತದೆ ಆದರೆ ಮಾತನಾಡುವ ವಿಶ್ವಾಸ ಇರುವುದಿಲ್ಲ. ಸಂವಹನ ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ತೋರಿಸುವಲ್ಲಿ ಪ್ರಮುಖವಾಗಿರುತ್ತದೆ.

ಪರಿಣಾಮಕಾರಿ ರೆಸ್ಯೂಮ್ ರಚಿಸಲು ನಿಮಗೆ ಸಹಾಯ ಮಾಡುವ ಮೂರು ಬಲವಾದ ಅಂಶಗಳು ಇಲ್ಲಿವೆ.
1) ಮೊದಲನೆಯದಾಗಿ, ನಿಮ್ಮ ಕೌಶಲ್ಯಗಳನ್ನು ಹೈಲೈಟ್ ಮಾಡಲು ವಿವರಣೆಗಳನ್ನು ಬಳಸಿ. ನೀವು ನೇಮಕಗೊಳ್ಳುತ್ತಿದ್ದರೆ, ನಿಮ್ಮ ಹಿಂದಿನ ಅನುಭವಗಳ ಸಮಯದಲ್ಲಿ ನೀವು ಕಲಿತ ಕೌಶಲ್ಯ ಮತ್ತು ಅನುಭವಗಳನ್ನು ನಮೂದಿಸಿ. ಇದರ ಮೇಲೆ ನಿಮ್ಮನ್ನು ಕೆಲಸಕ್ಕೆ ನಿರ್ಣಯಿಸಲಾಗುತ್ತದೆ.

2) ನಿಮ್ಮ ಉದ್ಯೋಗಕ್ಕೆ ನೀವು ಎಷ್ಟು ಬದ್ಧರಾಗಿದ್ದೀರಿ, ಹಿಂದೆ ವಿವಿಧ ಕೋರ್ಸ್‌ಗಳ ಮೂಲಕ ನೀವು ಹೇಗೆ ಕೌಶಲ್ಯವನ್ನು ಹೆಚ್ಚಿಸಿದ್ದೀರಿ ಮತ್ತು ಹೊಸ ಕೌಶಲ್ಯಗಳನ್ನು ಪಡೆಯುವ ನಿಮ್ಮ ಸಾಮರ್ಥ್ಯವನ್ನು ಉಲ್ಲೇಖಿಸಿ.

3) ಕೊನೆಯದಾಗಿ, ನಿಮ್ಮ ನಾಯಕತ್ವದ ಗುಣಗಳ ಬಗ್ಗೆ ಚಿಕ್ಕದಾಗಿ ನಮೂದಿಸಿ. ನೀವು ಯಾವ ರೀತಿಯ ಲೀಡರ್ ಶಿಪ್ ನಿರ್ವಹಿಸಿದ್ದೀರಿ ಮತ್ತು ನೀವು ಯಾವ ಪಠ್ಯೇತರ ಚಟುವಟಿಕೆಗಳನ್ನು ಕೈಗೊಂಡಿದ್ದೀರಿ ಎಂಬುದನ್ನು ಸಹ ನೇಮಕಕಾರರು ಪರಿಗಣಿಸುತ್ತಾರೆ.

ಉದ್ಯೋಗದಾತರು ಪರಿಗಣಿಸುವ ಮತ್ತೊಂದು ಅತ್ಯಂತ ನಿರ್ಣಾಯಕ ಅಂಶವೆಂದರೆ EQ (ಭಾವನಾತ್ಮಕ ಅಂಶ)
● ತಂಡದಲ್ಲಿ ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ?
● ನೀವು ತಂಡವನ್ನು ಹೇಗೆ ಮುನ್ನಡೆಸುತ್ತೀರಿ?
● ಮತ್ತು ಕೊನೆಯದಾಗಿ, ಕಂಪನಿಯ ದೃಷ್ಟಿಗೆ ನೀವು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?

ಇದನ್ನೂ ಓದಿ: Bounce Recruitment: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

ಈ ಎಲ್ಲಾ ಮೇಲಿನ ಅಂಶಗಳನ್ನು ಈಕ್ಯೂ ಎನ್ನಲಾಗುತ್ತದೆ ಮತ್ತು ಇದರ ಮೇಲೂ ಅಭ್ಯರ್ಥಿಗಳು ಗಮನವಹಿಸಬೇಕು. ನುರಿತ ನೇಮಕಾತಿ ತಂಡವು ಅಭ್ಯರ್ಥಿಯ ಮನಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಅಭ್ಯರ್ಥಿಗಳು ಒತ್ತಡದ ಸಂದರ್ಭಗಳನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ಅವರು ಸಂದರ್ಭಗಳ ನಾಯಕತ್ವವವನ್ನು ಹೇಗೆ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಅವರು ನಿರ್ಣಯಿಸುತ್ತಾರೆ. ಈ ಅಂಶಗಳು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹ ನೆರವಾಗುತ್ತದೆ.
Published by:Ashwini Prabhu
First published: