Make money through IRCTC: ರೈಲ್ವೆ ಇಲಾಖೆಯಿಂದ ಸಾಮಾನ್ಯ ಜನ ಟಿಕೆಟ್ ಕಾದಿರಿಸುವುದು(Ticket reservation), ಪ್ರಯಾಣ ಸಂಬಂಧಿತ ದಾಖಲೆಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲ ಸಾಕಷ್ಟು ಹಣವನ್ನು ಕೂಡಾ ಸಂಪದನೆ ಮಾಡಬಹುದು. IRCTC ಇಂದ ಹಣವನ್ನೂ ಗಳಿಸಬಹುದು, ಅದು ಕೂಡಾ ಲಕ್ಷಾಂತರ (Earn in Lakhs) ರೂಪಾಯಿಗಳಲ್ಲಿ ಎನ್ನುವುದು ಅನೇಕರಿಗೆ ಗೊತ್ತೇ ಇರುವುದಿಲ್ಲ. ಅಂದ್ಹಾಗೆ ಈ ಹಣ ಗಳಿಸುವ ಅವಕಾಶವನ್ನು ಭಾರತೀಯ ರೈಲ್ವೆ (Indian Railways) ಎಲ್ಲರಿಗೂ ನೀಡುತ್ತಿದೆ. ರೈಲ್ವೆ ಇಲಾಖೆಯೊಂದಿಗೆ ಸ್ವಂತ ವ್ಯವಹಾರ ನಡೆಸಿ ಅದರಿಂದ ಸಾಕಷ್ಟು ಆದಾಯ ಗಳಿಸುವ ಸುವರ್ಣ ಅವಕಾಶ ಇದಾಗಿದೆ. ಹಾಗಂತ ಇದಕ್ಕೇನೂ ಸಂದರ್ಶನ, ಹೆಚ್ಚಿನ ವಿದ್ಯಾಭ್ಯಾಸದ ಸರ್ಟಿಫಿಕೇಟ್ಗಳು ಯಾವುದೂ ಬೇಕಾಗಿಲ್ಲ. ನೀವು ರೈಲ್ವೆ ಟಿಕೆಟ್ ಮಾರಾಟ ಮಾಡಬೇಕು, ಅಷ್ಟೇ.
IRCTC ಅಂದರೆ ಭಾರತೀಯ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ ರೈಲ್ ಟ್ರಾವೆಲ್ ಸರ್ವೀಸ್ ಏಜೆಂಟ್ಗಳನ್ನು ನೇಮಿಸುತ್ತದೆ. ಆನ್ ಲೈನ್ ಮೂಲಕ ರೈಲಿನ ಟಿಕೆಟ್ಗಳನ್ನು ಕಾಯ್ದಿರಿಸುವ
ಕೆಲಸ ಇದಾಗಿದೆ. ತಂತಮ್ಮ ಊರುಗಳಲ್ಲೇ ಜನ ಇದನ್ನು ಮಾಡಬಹುದು.
ಟಿಕೆಟ್ ಕಾಯ್ದಿರಿಸುವ ಈ ಕೆಲಸಕ್ಕೆ ಬದಲಾಗಿ ಉತ್ತಮ ಕಮಿಷನ್ ದೊರೆಯುತ್ತದೆ. ಹಾಗಂತ ಈ ಏಜೆನ್ಸಿ ತಗೊಳೋದೇನೂ ಕಷ್ಟ ಇಲ್ಲ.
ಯಾರು IRCTC ಏಜೆಂಟ್ ಆಗಬಹುದು?
ಅನೇಕ ನಗರಗಳಲ್ಲಿ ರೈಲ್ವೆ ಇಲಾಖೆ ಅಧಿಕೃತವಾಗಿ ಏಜೆಂಟ್ಗಳನ್ನು ನೇಮಿಸುತ್ತದೆ. ಇವರಿಗಾಗಿಯೇ ವೆಬ್ ಸೈಟ್ ಲಾಗಿನ್ ಐಡಿ ನೀಡಿರುತ್ತಾರೆ. ಇದನ್ನು ಬಳಸಿಕೊಂಡು ಅವರು ತಮ್ಮ ತಮ್ಮ ಊರುಗಳಿಂದಲೇ
ಟಿಕೆಟ್ ಗಳನ್ನು ಕಾಯ್ದಿರಿಸಬಹುದು. ಪ್ರತೀ ಟಿಕೆಟ್ ರಿಸರ್ವ್ ಮಾಡಿದ್ದಕ್ಕೆ ಬದಲಾಗಿ ಈ ಏಜೆಂಟರಿಗೆ ಕಮಿಷನ್ ದೊರೆಯುತ್ತದೆ.
ಇದನ್ನೂ ಓದಿ: ಇನ್ಮುಂದೆ ವರ್ಕ್ ಫ್ರಂ ಹೋಟೆಲ್ ಕೂಡ ಮಾಡಬಹುದು; ಬಂಪರ್ ಪ್ಯಾಕೇಜ್ ನೀಡಿದ IRCTC
ಏಜೆಂಟ್ ಆಗಲು ಶುಲ್ಕ ತೆರಬೇಕಾ?
ಹೌದು, ನೀವು ಏಜೆಂಟರಾಗಲು ಬಯಸಿದರೆ ಮೊದಲಿಗೆ 20 ಸಾವಿರ ರೂಪಾಯಿಗಳ ಠೇವಣಿ ಇಡಬೇಕಾಗುತ್ತದೆ. ಈ ಭದ್ರತಾ ಠೇವಣಿ ಹಣವು ರೀಫಂಡೆಬಲ್ ಆಗಿರುತ್ತದೆ. IRTCT ಹೆಸರಿನಲ್ಲೇ ನೀವು ಈ ಹಣವನ್ನು ಪಾವತಿ ಮಾಡಬೇಕು. ಇದಲ್ಲದೇ ಏಜೆನ್ಸಿ ರಿನೀವಲ್ ಮಾಡಿಸಲು ವರ್ಷಕ್ಕೆ 5000 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಏಜೆಂಟ್ ಆಗಲು ಅರ್ಜಿ ಹಾಕುವುದು ಹೇಗೆ?
- ಮೊದಲಿಗೆ ನೀವು 100 ರೂ ಸ್ಟಾಂಪ್ ಪೇಪರ್ನಲ್ಲಿ ಒಪ್ಪಂದ ಮಾಡಿಕೊಳ್ಳಬೇಕು.
- IRCTC ಹೆಸರಿನಲ್ಲಿ 20 ಸಾವಿರ ರೂಪಾಯಿಗಳ ಬೇಡಿಕೆಯ ಕರಡು ಸಿದ್ಧಪಡಿಸಬೇಕು.
- IRCTC ನೋಂದಣಿ ನಮೂನೆಯ ಪ್ರತಿಯನ್ನು ಭರ್ತಿ ಮಾಡಿ ಜೊತೆಗೆ ಅಟ್ಯಾಚ್ ಮಾಡಬೇಕು.
- ಇದಕ್ಕೆ ಸಂಬಂಧಿಸಿದ ಪತ್ರಗಳನ್ನು ಆಯಾ ವಲಯ ರೈಲ್ವೆ ಕಚೇರಿಯಿಂದ ಪಡೆಯಬೇಕು.
- ಪ್ಯಾನ್ ಕಾರ್ಡ್ ಜೊತೆಗೆ ಹಿಂದಿನ ವರ್ಷದ ಆದಾಯ ತೆರಿಗೆ ಪಾವತಿ ದಾಖಲೆಗಳನ್ನು ನೀಡಬೇಕು.
- ವಿಳಾಸ ದೃಢೀಕರಣಕ್ಕೆ ದಾಖಲೆ ಅಥವಾ ಅಡ್ರೆಸ್ ಐಡಿ ಪ್ರೂಫ್ ನೀಡಬೇಕು
ಏಜೆನ್ಸಿ ಆರಂಭಿಸುವ ಮುನ್ನ ಇದನ್ನು ತಿಳಿದಿರಿ:
ಮೊದಲಿಗೆ ಕ್ಲಾಸ್ ಪರ್ಸನಲ್ ಡಿಜಿಟಲ್ ಸರ್ಟಿಫಿಕೇಟ್ (Class Personal Digital Certificate) ಪಡೆಯಬೇಕು. ಇದು ಯಾವುದೇ ಭಾರತೀಯ ಪ್ರಮಾಣೀಖರಣ ಪ್ರಾಧಿಕಾರದಲ್ಲಿ ಲಭ್ಯವಿರುತ್ತದೆ.
IRCTC ಏಜೆಂಟ್ಗೆ ಎಷ್ಟು ಕಮಿಶನ್ ದೊರೆಯುತ್ತದೆ?
ಏಜೆಂಟರಿಗೆ ಎಷ್ಟು ಕಮಿಷನ್ ದೊರೆಯುತ್ತದೆ ಎನ್ನುವುದನ್ನು
IRCTC ನಿರ್ಧರಿಸಿದೆ. ರೈಲ್ವೆ ಟ್ರಾವೆಲ್ ಸರ್ವಿಸ್ ಏಜೆನ್ಸಿ ವತಿಯಿಂದ ಏಜೆಂಟರಿಗೆ ಕಮಿಶನ್ ನೀಡಲಾಗುತ್ತದೆ. ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ ಸ್ಲೀಪರ್ ಕ್ಲಾಸ್ ಬುಕ್ ಮಾಡಿದರೆ ಪ್ರತಿ ಟಿಕೆಟ್ ಮೇಲೆ ಗರಿಷ್ಠ 30 ರೂಪಾಯಿ ಮತ್ತು ಎಸಿ ಕೋಚ್ ಟಿಕೆಟ್ ಗೆ 60 ರೂಪಾಯಿ ಟಿಕೆಟ್ ದರದ ಮೇಲೆ ಹೆಚ್ಚುವರಿಯಾಗಿ ಗ್ರಾಹಕರು ಪಾವತಿ ಮಾಡಿರುತ್ತಾರೆ. ಇದು ಕಮಿಶನ್ ಆಗಿರುತ್ತದೆ. ಸೇವಾ ತೆರಿಗೆ ಇದರಲ್ಲಿ ಪ್ರತ್ಯೇಕವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ