Northern Railway Recruitment 2021: SSLC ಪಾಸಾದವರಿಗೆ ಉದ್ಯೋಗ, ರೈಲ್ವೆ ಇಲಾಖೆಯಲ್ಲಿ 1664 ಅಪ್ರೆಂಟಿಸ್​ ಹುದ್ದೆಗಳು ಖಾಲಿ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
Northern Railway Recruitment 2021: ಉತ್ತರ ರೈಲ್ವೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 1664 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12 ತರಗತಿ ಹಾಗೂ ಐಟಿಐ ಪೂರ್ಣಗೊಳಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ 2/11/2021ರಿಂದ 1/12/2021ರವರೆಗೆ ಅರ್ಜಿ ಹಾಕಬಹುದು. ಉದ್ಯೋಗಾಂಕ್ಷಿಗಳು ಉತ್ತರ ರೈಲ್ವೆ ನೇಮಕಾತಿ-2021ರ ಅಧಿಕೃತ ವೆಬ್​ಸೈಟ್ nr.indianrailways.gov.in ಗೆ ಭೇಟಿ ನೀಡಿ ಅರ್ಜಿ ಹಾಕಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಉತ್ತರ ರೈಲ್ವೆ
ಜಾಹೀರಾತು ಸಂಖ್ಯೆ  RRC/NRC/02/2021
ಹುದ್ದೆಯ ಹೆಸರು ಅಪ್ರೆಂಟಿಸ್
ಒಟ್ಟು ಹುದ್ದೆಗಳು 1664
ವಿದ್ಯಾರ್ಹತೆ 10th,12th, ITI ಉತ್ತೀರ್ಣರಾಗಿರಬೇಕು
ಕೆಲಸದ ಸ್ಥಳ ಆಗ್ರಾ, ಝಾನ್ಸಿ, ಪ್ರಯಾಗ್​ರಾಜ್
ಸಂಬಳ ನಿಯಮಾನುಸಾರ
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ  02/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01/12/2021ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/12/2021

ಅರ್ಜಿ ಶುಲ್ಕ:

ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ₹100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಹುದ್ದೆಯ ಬಗ್ಗೆ ಮಾಹಿತಿ

ವಿಭಾಗದ ಹೆಸರು ಹುದ್ದೆಗಳ ಸಂಖ್ಯೆ
ಪ್ರಯಾಗ್​ರಾಜ್​​ ವಿಭಾಗ:ಮೆಕ್ಯಾನಿಕಲ್ ಡಿಪಾರ್ಟ್​​ಮೆಂಟ್ 364 ಹುದ್ದೆಗಳು
ಪ್ರಯಾಗ್​ರಾಜ್​​ ವಿಭಾಗ: ಎಲೆಕ್ಟ್ರಿಕಲ್​ ಡಿಪಾರ್ಟ್​ಮೆಂಟ್ 339 ಹುದ್ದೆಗಳು
ಝಾನ್ಸಿ ವಿಭಾಗ 480 ಹುದ್ದೆಗಳು
ವರ್ಕ್​​ಶಾಪ್​ ಝಾನ್ಸಿ 185 ಹುದ್ದೆಗಳು
ಆಗ್ರಾ ವಿಭಾಗ 296 ಹುದ್ದೆಗಳು
ಒಟ್ಟು 1664 ಹುದ್ದೆಗಳುವಿದ್ಯಾರ್ಹತೆ:

ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 10ನೇ ತರಗತಿ/ಮೆಟ್ರಿಕ್ಯುಲೇಷನ್/ಎಸ್​ಎಸ್​ಸಿಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಸ್ಥೆಯಿಂದ ಐಟಿಐ ಪಾಸಾಗಿರಬೇಕು.

ತಾಂತ್ರಿಕ ಅರ್ಹತೆ-NCVT/ SCVTಯಿಂದ ಐಟಿಐ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಪಡೆದಿರಬೇಕು.

ಇದನ್ನೂ ಓದಿ:SWR Recruitment 2021: ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ 904 ಹುದ್ದೆಗಳು ಖಾಲಿ, 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ವಯೋಮಿತಿ:

ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿರಬೇಕು.
ಡಿಸೆಂಬರ್ 1, 2021ಕ್ಕೆ ಅಭ್ಯರ್ಥಿಗಳ ವಯಸ್ಸು 24 ವರ್ಷ ಮೀರಿರಬಾರದು.

ಕೆಲಸದ ಸ್ಥಳ

ಆಗ್ರಾ, ಝಾನ್ಸಿ, ಪ್ರಯಾಗ್​ರಾಜ್​-ಉತ್ತರಪ್ರದೇಶ

ಸಂಬಳ:

ಅಪ್ರೆಂಟಿಸ್ ಆಗಿ ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಪಡೆಯುತ್ತಾರೆ. ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳ ನಿಯಮಗಳ ಪ್ರಕಾರ, ನಿಗದಿತ ದರದಲ್ಲಿ ತರಬೇತಿಯ ಸಮಯದಲ್ಲಿ ಸ್ಟೈಫಂಡ್ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್​ಲಿಸ್ಟಿಂಗ್​

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ
 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: