Northern Central Railway Recruitment 2021: ತಿಂಗಳಿಗೆ ₹ 20,200 ಸಂಬಳ, ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ‘C‘ ಹುದ್ದೆಗಳು ಖಾಲಿ

ನವೆಂಬರ್ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Northern Central Railway Recruitment 2021: ಉತ್ತರ ಮಧ್ಯ ರೈಲ್ವೆ(Northern Central Railway )ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಸ್ಪೋರ್ಟ್ಸ್​ ಕೋಟಾ, ಗ್ರೂಪ್ ಸಿ ಹುದ್ದೆಗಳು ಖಾಲಿ ಇದ್ದು, ಕ್ರೀಡಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಉತ್ತರ ಮಧ್ಯ ರೈಲ್ವೆಯ ಅಧಿಕೃತ ವೆಬ್​ಸೈಟ್​ ncr.indianrailways.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಉತ್ತರ ಮಧ್ಯ ರೈಲ್ವೆ
ಹುದ್ದೆಯ ಹೆಸರುಸ್ಪೋರ್ಟ್ಸ್​ ಕೋಟಾ, ಗ್ರೂಪ್​ ಸಿ
ಒಟ್ಟು ಹುದ್ದೆಗಳು21
ವಿದ್ಯಾರ್ಹತೆಕ್ರೀಡಾ ಅಭ್ಯರ್ಥಿಗಳು
ಉದ್ಯೋಗದ ಸ್ಥಳಭಾರತದ ಯಾವುದೇ ಸ್ಥಳ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ26/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/12/2021

ಇದನ್ನೂ ಓದಿ: NHB Recruitment 2021: ನ್ಯಾಷನಲ್ ಹೌಸಿಂಗ್ ಬ್ಯಾಂಕ್​ನಲ್ಲಿ ಪದವಿ ಆದವರಿಗೆ ಉದ್ಯೋಗ; ಮಾಸಿಕ ವೇತನ ₹ 89,890

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಕಟ್ಟಬೇಕು.
SC/ST/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಮಧ್ಯಂತರ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರುವ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಉದ್ಯೋಗದ ಸ್ಥಳ:
ಸ್ಪೋರ್ಟ್ಸ್​ ಕೋಟಾ, ಗ್ರೂಪ್​ ಸಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ: UPSC Recruitment 2021: ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಹಲವು ಹುದ್ದೆಗಳು ಖಾಲಿ, ಅರ್ಜಿ ಸಲ್ಲಿಸಲು ನಾಳೆಯೇ ಕಡೇ ದಿನ

ವಯೋಮಿತಿ:
ಸ್ಪೋರ್ಟ್ಸ್​ ಕೋಟಾ, ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-25 ವರ್ಷದೊಳಗಿರಬೇಕು.

ವೇತನ:
ಸ್ಪೋರ್ಟ್ಸ್​ ಕೋಟಾ, ಗ್ರೂಪ್​ ಸಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 20,200 ವೇತನ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಕ್ರೀಡಾ ಸಾಧನೆ
ವೈಯಕ್ತಿಕ ಸಂದರ್ಶನ
Published by:Latha CG
First published: