IT Firms: ಇನ್ಮುಂದೆ ಐಟಿ ಕಂಪನಿಗಳಲ್ಲಿ ಹೊಸ ನೇಮಕಾತಿ ಪ್ರಕ್ರಿಯೆಗಳಿಗಿಲ್ಲ ದುಪ್ಪಟ್ಟು ವೇತನದ ಅವಕಾಶ!

ಐಟಿ ಕ್ಷೇತ್ರಗಳಲ್ಲಿ ಇನ್ನು ಮುಂದೆ ಕೈ ತುಂಬಾ ಸಂಬಳ ಪಡೆಯುವ ದಿನಗಳು ಬರೇ ಕನಸು ಮಾತ್ರ ಎಂದೇ ಹೇಳಬಹುದು. ಸಂಬಳ ಮಾತುಕತೆಯ ಶ್ರೇಣಿಗಳನ್ನು ಐಟಿ ವಲಯಗಳು ಬಿಗಿಗೊಳಿಸುತ್ತಿರುವುದರಿಂದ ಹಾಗೂ ಹೆಚ್ಚುತ್ತಿರುವ ಮಾರ್ಜಿನ್ ಒತ್ತಡಗಳಿಂದಾಗಿ ಕೈತುಂಬಾ ಸಂಬಳ ಪಡೆಯುವ ಐಟಿ ಕ್ಷೇತ್ರ ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಐಟಿ ಕ್ಷೇತ್ರಗಳಲ್ಲಿ (IT fields) ಇನ್ನು ಮುಂದೆ ಕೈ ತುಂಬಾ ಸಂಬಳ (Salary) ಪಡೆಯುವ ದಿನಗಳು ಬರೇ ಕನಸು ಮಾತ್ರ ಎಂದೇ ಹೇಳಬಹುದು. ಸಂಬಳ ಮಾತುಕತೆಯ ಶ್ರೇಣಿಗಳನ್ನು ಐಟಿ ವಲಯಗಳು ಬಿಗಿಗೊಳಿಸುತ್ತಿರುವುದರಿಂದ ಹಾಗೂ ಹೆಚ್ಚುತ್ತಿರುವ ಮಾರ್ಜಿನ್ ಒತ್ತಡಗಳಿಂದಾಗಿ ಕೈತುಂಬಾ ಸಂಬಳ ಪಡೆಯುವ ಐಟಿ ಕ್ಷೇತ್ರ ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಸಂಬಳಕ್ಕಾಗಿ ಅತಿಯಾಗಿ ವಾಗ್ವಾದ ನಡೆಸುವ ಹಾಗೂ ಇತರ ಕಂಪೆನಿಗಳ (company) ಆಫರ್‌ಗಳನ್ನು ಉಲ್ಲೇಖಿಸಿ ಮಾತನಾಡುವ ಅಭ್ಯರ್ಥಿಗಳನ್ನು (Candidate) ಸಂಸ್ಥೆಗಳು ಕೈಬಿಡುತ್ತಿವೆ ಎಂದು ಸಿಯಾಲ್ ಎಚ್‌ಆರ್ ಸರ್ವೀಸಸ್‌ನ ಸಿಇಒ ಆದಿತ್ಯ ನಾರಾಯಣ್ ಮಿಶ್ರಾ ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಇಳಿಕೆ
ಕೈಗಾರಿಕಾ ವಿಶ್ಲೇಷಣೆಗಳ ಪ್ರಕಾರ, ಕಳೆದ 2-3 ತಿಂಗಳುಗಳಲ್ಲಿ ಉದ್ಯೋಗ ವಲಯಗಳಾದ್ಯಂತ ಸಂಬಳ ಹೆಚ್ಚಳವು 25-50% ನಷ್ಟು ನೆಲಕಚ್ಚಿದ್ದು, ಒಂದೇ ಹುದ್ದೆಯಲ್ಲಿ ಬೇರೆಡೆ ಕೆಲಸ ಮಾಡುವ ಹೊಸ ಉದ್ಯೋಗಿಗಳ 40-50% ರಷ್ಟಿದ್ದ ನೇಮಕಾತಿ ಪ್ರಕ್ರಿಯೆಯು ಇದೀಗ 20-25% ಕ್ಕೆ ಇಳಿದಿದೆ ಎಂದು ಕಾರ್ಯನಿರ್ವಾಹಕ ಸಂಸ್ಥೆಗಳು ತಿಳಿಸಿವೆ.

ಇದನ್ನೂ ಓದಿ: INCOIS Recruitment: 138 ಪ್ರಾಜೆಕ್ಟ್​ ಸೈಟಿಂಸ್​ ಹುದ್ದೆಗೆ ಅರ್ಜಿ ಆಹ್ವಾನ; ಎಎಸ್ಸಿ ಆಗಿದ್ರೆ ಅವಕಾಶ

ಕಳೆದ 2-3 ತಿಂಗಳುಗಳಲ್ಲಿ ಹೆಚ್ಚಿನ ಕೌಶಲ್ಯ ಉದ್ಯೋಗ ವಲಯಗಳಲ್ಲಿ ಹೊಸ ನೇಮಕಾತಿಗಳಿಗಾಗಿ ಟೆಕ್ ವಲಯದ ವೇತನ ಹೆಚ್ಚಳವನ್ನು ಮಧ್ಯಮಗೊಳಿಸಲಾಗಿದೆ, ಎಂಬುದು ಟೆಕ್ ವಲಯದ ನಾಯಕ ನಿತಿನ್ ಭಟ್ ಅವರ ಮಾತಾಗಿದೆ. ಉದ್ಯೋಗದಾತರು ತಮ್ಮ ಮೂಲ ಬಜೆಟ್ ವಿಷಯದಲ್ಲಿ ಕಠಿಣತೆಯನ್ನು ಪಾಲಿಸುವುದರೊಂದಿಗೆ ಈ ಹಿಂದೆ ಸಂಬಳದ ಸಂವಹನಗಳಿಗೆಂದೇ ಮೀಸಲಿರಿಸಿದ್ದ 15-30% ಸಂಗ್ರಹಣೆಯು ಈಗ ಕಾಣೆಯಾಗಿದೆ ಎಂದು ನೇಮಕಾತಿದಾರರು ತಿಳಿಸಿದ್ದಾರೆ.

ಸಂಬಳ ಏರಿಕೆ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಪ್ರಕ್ರಿಯೆ
ಕಂಪನಿಗಳು ಹೆಚ್ಚು ದೃಢವಾಗುತ್ತಿದ್ದು ಅತ್ಯಾಧುನಿಕ ತಂತ್ರಜ್ಞಾನ ಹುದ್ದೆಗಳಿಗೆ 100% ಗಿಂತ ಹೆಚ್ಚಿದ್ದ ಅವ್ಯವಸ್ಥಿತ ಏರಿಕೆಗಳು ಇದೀಗ ನಿಷ್ಪಲವಾಗುತ್ತಿವೆ ಎಂಬುದಾಗಿ ಕೆರಿಯರ್‌ನೆಟ್ ಮತ್ತು ಲಾಂಗ್‌ಹೌಸ್ ಕನ್ಸಲ್ಟಿಂಗ್‌ನ ಮುಖ್ಯ ಕಾರ್ಯನಿರ್ವಾಹಕ ಅಂಶುಮಾನ್ ದಾಸ್ ಹೇಳುತ್ತಾರೆ. ಈಗೀಗ ಸಂಬಳ ಏರಿಕೆಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ ಎಂಬುದು ಅಂಶುಮಾನ್ ಅಭಿಪ್ರಾಯವಾಗಿದೆ.

ಕೆಲವು ತಿಂಗಳುಗಳ ಹಿಂದೆ ನೇಮಕಾತಿ ಪಾಲುದಾರರು ಉತ್ತಮ ಪ್ರತಿಭಾವಂತರನ್ನು ನೇಮಿಸಿಕೊಳ್ಳಿ ನಾವು ಕೇಳಿದಷ್ಟು ಸಂಬಳ ನೀಡುತ್ತೇವೆ ಎಂದು ಹೇಳುತ್ತಿದ್ದರು. ಇನ್ನು ಇಂತಹ ಮಾತುಗಳಿಗೆ ಆಸ್ಪದವೇ ಇರಲಿಕ್ಕಿಲ್ಲ ಎಂಬುದು ಮ್ಯಾನ್‌ಪವರ್‌ಗ್ರೂಪ್ ಇಂಡಿಯಾದ ಮಾರಾಟ, ಖಾತೆ ನಿರ್ವಹಣೆ ಮತ್ತು ಜಾಗತಿಕ ಖಾತೆಗಳ ಹಿರಿಯ ನಿರ್ದೇಶಕ ಅಲೋಕ್ ಕುಮಾರ್ ಅವರ ಅಂಬೋಣವಾಗಿದೆ. ಸಂಬಳದಲ್ಲಿ ಮಾಡುತ್ತಿರುವ ಬದಲಾವಣೆಗಳು ಆಫರ್ ಸ್ವೀಕಾರದ ಸುಧಾರಣೆಯತ್ತ ಕೂಡ ಸಂಪರ್ಕವನ್ನುಂಟು ಮಾಡಿದೆ.

ಅಭ್ಯರ್ಥಿಗಳಿಗಿಲ್ಲ ಸಕ್ರಿಯ ಉದ್ಯೋಗ ಅವಕಾಶ
ಅಭ್ಯರ್ಥಿಗಳಿಗಾಗಿಯೇ ಇದ್ದ ಸಕ್ರಿಯ ಉದ್ಯೋಗ ಆಫರ್‌ಗಳು ಇದೀಗ ಅರ್ಧದಷ್ಟು ಕಡಿಮೆಯಾಗಿದೆ ಹಾಗಾಗಿ ಅಭ್ಯರ್ಥಿಗಳು ಉದ್ಯೋಗಗಳು ಹೊಂದಿರುವ ಸಂಬಳಕ್ಕೆ ಆದ್ಯತೆ ನೀಡುತ್ತಿದ್ದಾರೆ. Xpheno ವಿಶ್ಲೇಷಣೆಯ ಪ್ರಕಾರ ಪ್ರತಿಭಾವಂತ ಉದ್ಯೋಗಿಗಳ ಬಳಿ ಇದ್ದ 6 ರಿಂದ 8 ಸಕ್ರಿಯ ಆಫರ್ ಆಯ್ಕೆಗಳು ಇದೀಗ 2 ರಿಂದ 3 ಕ್ಕೆ ಇಳಿದಿವೆ.

ಉದ್ಯೋಗಾಂಕ್ಷಿಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ಅಥವಾ ಹೆಚ್ಚಿನ ಉದ್ಯೋಗಗಳನ್ನು ಬದಲಾಯಿಸುವ ಮೂಲಕ ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಕಂಪೆನಿಗಳು ಉದ್ಯೋಗಾಂಕ್ಷಿಗಳ ಆಡಂಬರದ ಜೀವನ ಶೈಲಿಯನ್ನು ಆಧರಿಸಿ ಸಂಬಳ ಮಾತುಕತೆಗಳನ್ನು ನಡೆಸಲು ಸಿದ್ಧರಿರುವುದಿಲ್ಲ ಎಂದು ಎಬಿಸಿ ಕನ್ಸಲ್ಟೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Smart Business idea: ಅಲೆಲೆಲೇ ಏನ್​ ತಲೆ ಗುರು ನಿಮ್ದು! ನಿಜಕ್ಕೂ ನೀವು ವೆರೈಟಿ ಫಾರ್ಮರ್​, ಹೀಗೂ ದುಡ್ಡು ಮಾಡ್ಬಹುದು

ತಂತ್ರಜ್ಞಾನದ ಪ್ರತಿಭೆಯು ಬೇಡಿಕೆಯಲ್ಲಿದ್ದರೂ ಇದರಲ್ಲಿನ ಇಳಿಕೆಯಿಂದ ಕಂಪೆನಿಗಳಿಗೆ ಹೆಚ್ಚಿನ ಅವಕಾಶ ದೊರಕಿದಂತಾಗಿದೆ. ಸಂಬಳದ ಮಿತಗೊಳಿಸುವಿಕೆಯು ಸ್ಟಾರ್ಟಪ್ ನೇಮಕಾತಿಯಲ್ಲಿನ ನಿಧಾನಗತಿಯ ಪರಿಣಾಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಸ್‌ಗಳನ್ನು ನೇಮಿಸಿಕೊಂಡ ನಂತರ ಟೆಕ್ ಕಂಪೆನಿಗಳ ಒತ್ತಡ ನಿವಾರಣೆಯಾಗಿದೆ. ಹೊಸದಾಗಿ (ಫ್ರೆಶರ್ಸ್) ನೇಮಕಗೊಂಡವರಿಗೆ ತ್ವರಿತವಾಗಿ ತರಬೇತಿ ನೀಡಿ ಉದ್ಯೋಗದಲ್ಲಿ ಆರಿಸಿಕೊಳ್ಳುವತ್ತ ಕೇಂದ್ರೀಕರಿಸಲಾಗುತ್ತಿದೆ ಎಂದು ಐಟಿ ವಲಯದ ಸಲಹೆಗಾರರು ಹೇಳಿದ್ದಾರೆ.
Published by:Ashwini Prabhu
First published: