NMDC Recruitment 2022: ಮಾಸಿಕ ವೇತನ ₹ 35,000, ITI, Diploma ಪಾಸಾದವರಿಗೆ ಬಂಪರ್ ಉದ್ಯೋಗ

ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

NMDC

NMDC

  • Share this:
NMDC Recruitment 2022: ನ್ಯಾಷನಲ್ ಮಿನರಲ್ ಡೆವಲಪ್​ಮೆಂಟ್ ಕಾರ್ಪೊರೇಷನ್​ ಲಿಮಿಟೆಡ್​​(National Mineral Development Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 200 ಫೀಲ್ಡ್​ ಅಸಿಸ್ಟೆಂಟ್, ಮೇಂಟೇನೆನ್ಸ್​ ಅಸಿಸ್ಟೆಂಟ್, ಎಂಸಿಒ ಗ್ರೇಡ್-3, HEM ಮೆಕ್ಯಾನಿಕ್ ಗ್ರೇಡ್-3, ಎಲೆಕ್ಟ್ರಿಷಿಯನ್ ಗ್ರೇಡ್-3, ಬ್ಲಾಸ್ಟರ್ ಗ್ರೇಡ್-2, QCA ಗ್ರೇಡ್-3 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ https://www.nmdc.co.in/ ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



































ಸಂಸ್ಥೆನ್ಯಾಷನಲ್ ಮಿನರಲ್ ಡೆವಲಪ್​ಮೆಂಟ್ ಕಾರ್ಪೊರೇಷನ್
ಹುದ್ದೆಯ ಹೆಸರುಫೀಲ್ಡ್​ ಅಸಿಸ್ಟೆಂಟ್, ಮೇಂಟೇನೆನ್ಸ್​ ಅಸಿಸ್ಟೆಂಟ್, ಎಂಸಿಒ ಗ್ರೇಡ್-3, HEM ಮೆಕ್ಯಾನಿಕ್ ಗ್ರೇಡ್-3, ಎಲೆಕ್ಟ್ರಿಷಿಯನ್ ಗ್ರೇಡ್-3, ಬ್ಲಾಸ್ಟರ್ ಗ್ರೇಡ್-2, QCA ಗ್ರೇಡ್-3
ಒಟ್ಟು ಹುದ್ದೆಗಳು200
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ವೇತನಮಾಸಿಕ ₹ 18,100-35,040
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ02/03/2022



ಹುದ್ದೆಯ ಮಾಹಿತಿ:

ಫೀಲ್ಡ್​ ಅಸಿಸ್ಟೆಂಟ್- 43 ಹುದ್ದೆಗಳು
ಮೇಂಟೇನೆನ್ಸ್​ ಅಸಿಸ್ಟೆಂಟ್​(ಮೆಕ್ಯಾನಿಕ್)- 90 ಹುದ್ದೆಗಳು
ಮೇಂಟೇನೆನ್ಸ್​ ಅಸಿಸ್ಟೆಂಟ್(ಎಲೆಕ್ಟ್ರಿಕಲ್)-35 ಹುದ್ದೆಗಳು
ಎಂಸಿಒ ಗ್ರೇಡ್-3-4 ಹುದ್ದೆಗಳು
HEM ಮೆಕ್ಯಾನಿಕ್ ಗ್ರೇಡ್-3- 10 ಹುದ್ದೆಗಳು
ಎಲೆಕ್ಟ್ರಿಷಿಯನ್ ಗ್ರೇಡ್-3-7 ಹುದ್ದೆಗಳು
ಬ್ಲಾಸ್ಟರ್ ಗ್ರೇಡ್-2- 2 ಹುದ್ದೆಗಳು
QCA ಗ್ರೇಡ್-3- 9 ಹುದ್ದೆಗಳು
ಒಟ್ಟು-200 ಹುದ್ದೆಗಳು

ಇದನ್ನೂ ಓದಿ: NMDC Recruitment 2022: ಮಾಸಿಕ ವೇತನ ₹ 35,000, ITI, Diploma ಪಾಸಾದವರಿಗೆ ಬಂಪರ್ ಉದ್ಯೋಗ

ವಯೋಮಿತಿ:
ನ್ಯಾಷನಲ್ ಮಿನರಲ್ ಡೆವಲಪ್​ಮೆಂಟ್ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ವಿದ್ಯಾರ್ಹತೆ:
ನ್ಯಾಷನಲ್ ಮಿನರಲ್ ಡೆವಲಪ್​ಮೆಂಟ್ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಐಟಿಐ, ಡಿಪ್ಲೋಮಾ, ಬಿಎಸ್ಸಿ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: Banking Jobs: ತಿಂಗಳಿಗೆ ₹ 63,000 ಸಂಬಳ, SBIನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ, ಪದವೀಧರರು ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ- 150 ರೂ.
ಎಸ್​ಸಿ/ಎಸ್​ಟಿ/PH/ESM-ಯಾವುದೇ ಅರ್ಜಿ ಶುಲ್ಕವಿಲ್ಲ
ಪಾವತಿ ವಿಧಾನ: ಆನ್​ಲೈನ್​

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/03/2022
Published by:Latha CG
First published: