• Home
  • »
  • News
  • »
  • jobs
  • »
  • JOBS: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳು ಖಾಲಿ, ಇಲ್ಲಿ Apply ಮಾಡಿ

JOBS: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳು ಖಾಲಿ, ಇಲ್ಲಿ Apply ಮಾಡಿ

NMDC

NMDC

ಕೇಂದ್ರ ಸರ್ಕಾರದ(Central Government) ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನವೆಂಬರ್ 25, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    NMDC Recruitment: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ(National Mineral Development Corporation Limited-NMDC) 11 ಜೂನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ(Central Government) ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನವೆಂಬರ್ 25, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


     ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ
    ಹುದ್ದೆಯ ಹೆಸರುಜೂನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
    ಒಟ್ಟು ಹುದ್ದೆ11
    ವಿದ್ಯಾರ್ಹತೆಬಿಇ, ಬಿ.ಟೆಕ್
    ವೇತನಮಾಸಿಕ ₹ 50,000-2,60,000
    ಸ್ಥಳಅಖಿಲ ಭಾರತ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ25/11/2022


    ಹುದ್ದೆಯ ಮಾಹಿತಿ:
    ಕಂಪನಿ ಸೆಕ್ರೆಟರಿ- 1
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಲಾ)-1
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಪರ್ಸನಲ್)-3
    ಜೂನಿಯರ್ ಮ್ಯಾನೇಜರ್(ಕೆಮಿಕಲ್)-1
    ಜೂನಿಯರ್ ಮ್ಯಾನೇಜರ್ (ಎನ್ವಿರಾನ್​ಮೆಂಟ್)-3
    ಜೂನಿಯರ್ ಮ್ಯಾನೇಜರ್ (ರಾಜ್​ಭಾಷಾ)-2


    ಇದನ್ನೂ ಓದಿ: Government Job: ಹಾವೇರಿಯಲ್ಲಿ 119 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ


    ವಿದ್ಯಾರ್ಹತೆ:
    ಕಂಪನಿ ಸೆಕ್ರೆಟರಿ- ಪದವಿ
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಲಾ)- ಕಾನೂನು ವಿಭಾಗದಲ್ಲಿ ಪದವಿ
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಪರ್ಸನಲ್)-ಪದವಿ, ಸಮಾಜಶಾಸ್ತ್ರ/ಸಾಮಾಜಿಕ ಕೆಲಸ/ಕಾರ್ಮಿಕ ಕಲ್ಯಾಣ/ಸಿಬ್ಬಂದಿ ನಿರ್ವಹಣೆ/IR/IRPM/HR/HRM, MBA ನಲ್ಲಿ ಸ್ನಾತಕೋತ್ತರ ಪದವಿ
    ಜೂನಿಯರ್ ಮ್ಯಾನೇಜರ್(ಕೆಮಿಕಲ್)-ಕೆಮಿಕಲ್ ಎಂಜಿನಿಯರಿಂಗ್, ಕೆಮಿಸ್ಟ್ರಿ ವಿಭಾಗದಲ್ಲಿ ಎಂಎಸ್ಸಿ
    ಜೂನಿಯರ್ ಮ್ಯಾನೇಜರ್ (ಎನ್ವಿರಾನ್​ಮೆಂಟ್)-ಸಿವಿಲ್/ಕೆಮಿಕಲ್/ಮೈನಿಂಗ್/ಎನ್ವಿರಾನ್‌ಮೆಂಟ್ ಇಂಜಿನಿಯರಿಂಗ್‌ನಲ್ಲಿ ಪದವಿ, ಎನ್ವಿರಾನ್‌ಮೆಂಟಲ್ ಮ್ಯಾನೇಜ್‌ಮೆಂಟ್/ಎಂಜಿನಿಯರಿಂಗ್/ಎನ್ವಿರಾನ್‌ಮೆಂಟಲ್ ಸೈನ್ಸ್/ಜಿಯಾಲಜಿ/ಕೆಮಿಸ್ಟ್ರಿ/ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪರಿಸರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ, ಎನ್ವಿರಾನ್‌ಮೆಂಟ್ ಸ್ಟಡೀಸ್/ಇಂಪ್ಯಾಕ್ಟ್ ಅಸೆಸ್‌ಮೆಂಟ್‌ನಲ್ಲಿ ಡಾಕ್ಟರೇಟ್
    ಜೂನಿಯರ್ ಮ್ಯಾನೇಜರ್ (ರಾಜ್​ಭಾಷಾ)-ಹಿಂದಿಯಲ್ಲಿ ಎಂಎ


    ವಯೋಮಿತಿ:
    ಕಂಪನಿ ಸೆಕ್ರೆಟರಿ- 45 ವರ್ಷ
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಲಾ)-45 ವರ್ಷ
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಪರ್ಸನಲ್)-45 ವರ್ಷ
    ಜೂನಿಯರ್ ಮ್ಯಾನೇಜರ್(ಕೆಮಿಕಲ್)-30 ವರ್ಷ
    ಜೂನಿಯರ್ ಮ್ಯಾನೇಜರ್ (ಎನ್ವಿರಾನ್​ಮೆಂಟ್)-30 ವರ್ಷ
    ಜೂನಿಯರ್ ಮ್ಯಾನೇಜರ್ (ರಾಜ್​ಭಾಷಾ)-30 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 15 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 500 ರೂ.
    ಪಾವತಿಸುವ ಬಗೆ: ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಆನ್​ಲೈನ್​ ಟೆಸ್ಟ್​/ ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಕಂಪನಿ ಸೆಕ್ರೆಟರಿ- ಮಾಸಿಕ ₹1,00,000-2,60,000
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಲಾ)-ಮಾಸಿಕ ₹1,00,000-2,60,000
    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್(ಪರ್ಸನಲ್)-ಮಾಸಿಕ ₹1,00,000-2,60,000
    ಜೂನಿಯರ್ ಮ್ಯಾನೇಜರ್(ಕೆಮಿಕಲ್)-ಮಾಸಿಕ ₹ 50,000-1,60,000
    ಜೂನಿಯರ್ ಮ್ಯಾನೇಜರ್ (ಎನ್ವಿರಾನ್​ಮೆಂಟ್)-ಮಾಸಿಕ ₹ 50,000-1,60,000
    ಜೂನಿಯರ್ ಮ್ಯಾನೇಜರ್ (ರಾಜ್​ಭಾಷಾ)-ಮಾಸಿಕ ₹ 50,000-1,60,000


    ಇದನ್ನೂ ಓದಿ: Bengaluru Jobs: ಎಂಜಿನಿಯರಿಂಗ್ ಪಾಸಾಗಿದ್ರೆ BELನಲ್ಲಿದೆ ಉದ್ಯೋಗ, ಮಾಸಿಕ ವೇತನ ₹ 55,000


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 25/11/2022

    Published by:Latha CG
    First published: