NLC India Limited Recruitment 2021: ತಿಂಗಳಿಗೆ ₹ 22,000 ಸಂಬಳ, NLCಯಲ್ಲಿ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

NLC Recruitment 2021: ಅರ್ಜಿ ಪ್ರಕ್ರಿಯೆ ನವೆಂಬರ್ 1, 2021ರಿಂದ ಆರಂಭವಾಗಿ, ನವೆಂಬರ್ 22, 2021ರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

NLC

NLC

  • Share this:
NLC India Limited Recruitment 2021: ನೆಯ್ವೇಲಿ ಲಿಗ್ನೈಟ್​ ಕಾರ್ಪೊರೇಷನ್​ ಇಂಡಿಯಾ ಲಿಮಿಟೆಡ್(NLC India Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 56 ಇಂಡಸ್ಟ್ರಿಯಲ್ ಟ್ರೈನಿ(Industrial Trainee) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎನ್​ಸಿಎಲ್​ನ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಜಿ ಪ್ರಕ್ರಿಯೆ ನವೆಂಬರ್ 1, 2021ರಿಂದ ಆರಂಭವಾಗಿ, ನವೆಂಬರ್ 22, 2021ರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



























ಸಂಸ್ಥೆ ನೆಯ್ವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್(ಎನ್​ಸಿಎಲ್)​
ಹುದ್ದೆಯ ಹೆಸರು ಇಂಡಸ್ಟ್ರಿಯಲ್​ ಟ್ರೈನಿ
ಒಟ್ಟು ಹುದ್ದೆಗಳು 56
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್​​
ಅರ್ಜಿ ಸಲ್ಲಿಕೆ ಆರಂಭ 01/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/11/2021



ವಿದ್ಯಾರ್ಹತೆ:

  • ನೆಯ್ವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿಯ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • 2020-21ನೇ ಸಾಲಿನಲ್ಲಿ ಐಸಿಎಸಿ ನಡೆಸುವ ಚಾರ್ಟರ್ಡ್​ ಅಕೌಂಟೆಂಟ್​​(ಸಿಎ)ನ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ

  • ಐಸಿಎಐ ನಡೆಸುವ ವೆಚ್ಚ ಮತ್ತು ನಿರ್ವಹಣಾ ಅಕೌಂಟೆಂಟ್​​(ಸಿಎಂಎ)ನ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ವಯೋಮಿತಿ:

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (NLC ಇಂಡಿಯಾ ಲಿಮಿಟೆಡ್) ನೇಮಕಾತಿಯ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿಯನ್ನು ಹೊಂದಿರಬೇಕು.

  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ 28 ವರ್ಷ

  • ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಟ 31 ವರ್ಷ

  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಟ 33 ವರ್ಷ ಇರಬೇಕು.  ಈ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.


ಇದನ್ನೂ ಓದಿ:BMRCL Recruitment 2021: ನಿವೃತ್ತಿ ಆಗಿರೋ ಹಿರಿಯರಿಗೆ ಬೆಂಗಳೂರು ಮೆಟ್ರೋದಲ್ಲಿ ಕೆಲಸ, ಮಿನಿಮಮ್ 30,000 ಸಂಬಳ ಗ್ಯಾರಂಟಿ

ಸಂಬಳ:

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (NLC ಇಂಡಿಯಾ ಲಿಮಿಟೆಡ್) ನೇಮಕಾತಿಯ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ತದನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/-ರೂಗಳ ಸ್ಟೈಫೆಂಡ್ ನೀಡಲಾಗುವುದು ಎಂದು ಅಧಿಸೂಚನೆ 2021ರಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (NLC ಇಂಡಿಯಾ ಲಿಮಿಟೆಡ್) ನೇಮಕಾತಿಯ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಿಎ/ಸಿಎಂಎ ಮಧ್ಯಂತರ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ:ONGC Recruitment 2021: BE, B. Tech ಪದವೀಧರರಿಗೆ ಒಎನ್​ಜಿಸಿಯಲ್ಲಿ ಉದ್ಯೋಗ, ಅರ್ಜಿ ಹಾಕಲು ಹೀಗೆ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ?

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (NLC ಇಂಡಿಯಾ ಲಿಮಿಟೆಡ್) ನೇಮಕಾತಿಯ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.nlcindia.in/new_website/index.htm ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 1,2021ರ ಬೆಳಿಗ್ಗೆ 10 ರಿಂದ ನವೆಂಬರ್ 22, 2021ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: