• ಹೋಂ
  • »
  • ನ್ಯೂಸ್
  • »
  • Jobs
  • »
  • NIVEDI: ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಸಿಕ ವೇತನ ₹ 35,000

NIVEDI: ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಸಿಕ ವೇತನ ₹ 35,000

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಫೆಬ್ರವರಿ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

NIVEDI Recruitment 2023: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್(National Institute of Veterinary Epidemiology and Disease Informatics) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಸೀನಿಯರ್ ರಿಸರ್ಚ್​ ಫೆಲೋ, ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಫೆಬ್ರವರಿ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್
 ಹುದ್ದೆ ಸೀನಿಯರ್ ರಿಸರ್ಚ್​ ಫೆಲೋ, ಪ್ರಾಜೆಕ್ಟ್​ ಅಸೋಸಿಯೇಟ್
 ಒಟ್ಟು ಹುದ್ದೆ 12
 ವಿದ್ಯಾರ್ಹತೆ ಬಿ.ಟೆಕ್, ಎಂ.ಟೆಕ್
 ವೇತನ ಮಾಸಿಕ ₹ 20,000-35,000
 ಉದ್ಯೋಗದ ಸ್ಥಳ ಬೆಂಗಳೂರು
 ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 13, 2023


ಹುದ್ದೆಯ ಮಾಹಿತಿ:
ಸೀನಿಯರ್ ರಿಸರ್ಚ್​ ಫೆಲೋ- 3
ಪ್ರಾಜೆಕ್ಟ್​ ಅಸೋಸಿಯೇಟ್-1
ಫೀಲ್ಡ್​ ಅಸಿಸ್ಟೆಂಟ್-1
ಯಂಗ್​ ಪ್ರೊಫೆಶನಲ್-3
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್-1
ಆಫೀಸ್ ಅಸಿಸ್ಟೆಂಟ್-1
ಅಸಿಸ್ಟೆಂಟ್ ಮ್ಯಾನೇಜರ್-1
ಬ್ಯುಸಿನೆಸ್ ಎಕ್ಸಿಕ್ಯೂಟಿವ್-1


ಇದನ್ನೂ ಓದಿ: BPNL: ಪಶುಪಾಲನಾ ನಿಗಮದಲ್ಲಿ 2826 ಹುದ್ದೆಗಳಿಗೆ ಅರ್ಜಿ ಆಹ್ವಾನ- PU ಪಾಸಾದವರು ಅಪ್ಲೈ ಮಾಡಿ


ವಿದ್ಯಾರ್ಹತೆ:
ಸೀನಿಯರ್ ರಿಸರ್ಚ್​ ಫೆಲೋ- ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋಇನ್ಫರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ, ಅಂಕಿಅಂಶಗಳಲ್ಲಿ ಎಂ.ಟೆಕ್
ಪ್ರಾಜೆಕ್ಟ್​ ಅಸೋಸಿಯೇಟ್- ಎಂಜಿನಿಯರಿಂಗ್‌ನಲ್ಲಿ ಪದವಿ, ನ್ಯಾಚುರಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಬಯೋಇನ್ಫರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್
ಫೀಲ್ಡ್​ ಅಸಿಸ್ಟೆಂಟ್- ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋ-ಇನ್‌ಫರ್ಮ್ಯಾಟಿಕ್ಸ್‌ನಲ್ಲಿ ಪದವಿ
ಯಂಗ್​ ಪ್ರೊಫೆಶನಲ್- ಪದವಿ, ಲೈಫ್ ಸೈನ್ಸ್, ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ, ಮಾಲಿಕ್ಯುಲರ್ ಬಯಾಲಜಿ, ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್, ಆಫೀಸ್ ಅಸಿಸ್ಟೆಂಟ್- ಪಿಯುಸಿ
ಅಸಿಸ್ಟೆಂಟ್ ಮ್ಯಾನೇಜರ್- ಸ್ನಾತಕೋತ್ತರ ಪದವಿ, M.Tech, MBA
ಬ್ಯುಸಿನೆಸ್ ಎಕ್ಸಿಕ್ಯೂಟಿವ್- B.Tech, ಸ್ನಾತಕೋತ್ತರ ಪದವಿ, MBA, MCA, M.Sc, M.A


ವಯೋಮಿತಿ:
ಸೀನಿಯರ್ ರಿಸರ್ಚ್​ ಫೆಲೋ- 35 ವರ್ಷ
ಪ್ರಾಜೆಕ್ಟ್​ ಅಸೋಸಿಯೇಟ್-35 ವರ್ಷ
ಫೀಲ್ಡ್​ ಅಸಿಸ್ಟೆಂಟ್- 50 ವರ್ಷ
ಯಂಗ್​ ಪ್ರೊಫೆಶನಲ್- 21-45 ವರ್ಷ
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- 18-28 ವರ್ಷ
ಆಫೀಸ್ ಅಸಿಸ್ಟೆಂಟ್- 18-28 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 25-45 ವರ್ಷ
ಬ್ಯುಸಿನೆಸ್ ಎಕ್ಸಿಕ್ಯೂಟಿವ್- 25-30 ವರ್ಷ


ಸೀನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕುವ ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಸೀನಿಯರ್ ರಿಸರ್ಚ್​ ಫೆಲೋ- ಮಾಸಿಕ ₹ 20,000-35,000
ಪ್ರಾಜೆಕ್ಟ್​ ಅಸೋಸಿಯೇಟ್- ಮಾಸಿಕ ₹ 20,000-35,000
ಫೀಲ್ಡ್​ ಅಸಿಸ್ಟೆಂಟ್- ಮಾಸಿಕ ₹ 20,000
ಯಂಗ್​ ಪ್ರೊಫೆಶನಲ್- ಮಾಸಿಕ ₹ 20,000
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- ಮಾಸಿಕ ₹ 35,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 70,000
ಬ್ಯುಸಿನೆಸ್ ಎಕ್ಸಿಕ್ಯೂಟಿವ್- ಮಾಸಿಕ ₹ 30,000


ಉದ್ಯೋಗದ ಸ್ಥಳ- ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ಸಂದರ್ಶನ



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ICAR-NIVEDI
ರಾಮಗೊಂಡನಹಳ್ಳಿ
ಯಲಹಂಕ
ಬೆಂಗಳೂರು-560064


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆ ದಿನ: ಫೆಬ್ರವರಿ 13, 2023

Published by:Latha CG
First published: