NIT Karnataka Recruitment 2021: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ NIT; ಮಂಗಳೂರಿನಲ್ಲಿ ಉದ್ಯೋಗ

NIT Recruitment 2021: ಒಟ್ಟು 23 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು 05/10/2021ರಿಂದ 10/11/2021ರವರೆಗೆ ಆನ್​ಲೈನ್(Online) ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

NIT

NIT

  • Share this:
NIT Karnataka Recruitment 2021 - ರಾಷ್ಟ್ರೀಯ ತಾಂತ್ರಿಕ ಸಂಸ್ಥೆ(National Institute of Technology)- ಕರ್ನಾಟಕ(Karnataka), ಸುರತ್ಕಲ್(Surathkal) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2)(Assistant Professor-Grade 2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1)(Assistant Professor Grade 1) ಹುದ್ದೆಗಳಿಗೆ ನೇಮಕಾತಿ ಹೊರಡಿಸಿದೆ. ಬಿಇ(BE), ಬಿ.ಟೆಕ್(B.Tech), ಎಂಬಿಎ(MBA), ಎಂಟೆಕ್(M.Tech)​ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 23 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು 05/10/2021ರಿಂದ 10/11/2021ರವರೆಗೆ ಆನ್​ಲೈನ್(Online) ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ-ಕರ್ನಾಟಕ, ಸುರತ್ಕಲ್
ಜಾಹೀರಾತು ಸಂಖ್ಯೆ 5212/Advt./Faculty/NITK/2021/B1
ಹುದ್ದೆಯ ಹೆಸರು ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್​-1)
ಒಟ್ಟು ಹುದ್ದೆಗಳು 23
ವಿದ್ಯಾರ್ಹತೆ ಬಿಇ, ಬಿ.ಟೆಕ್, ಎಂಬಿಎ, ಎಂಟೆಕ್, ಎಂಇ, ಪಿಎಚ್​ಡಿ
ಕೆಲಸದ ಸ್ಥಳ ಮಂಗಳೂರು
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 05/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/11/2021
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ನವೆಂಬರ್ 3, 2021
ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 5, 2021ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/10/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/11/2021

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್ 3, 2021

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 5, 2021

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಪ್ರಕ್ರಿಯೆ ಶುಲ್ಕವಾಗಿ 100 ರೂ. ಇರುತ್ತದೆ. (ಹಿಂದಿರುಗಿಸಲಾಗುವುದಿಲ್ಲ)

ವಿದ್ಯಾರ್ಹತೆ:

ಹೊಸದಾಗಿ ಪ್ರವೇಶ ಪಡೆದವರೆಲ್ಲೂ ಪಿಎಚ್​ಡಿ ಹೊಂದಿರಬೇಕು. ಸಂಬಂಧಿತ/ ತತ್ಸಮಾನ ವಿಭಾಗದಲ್ಲಿ ಮತ್ತು ಹಿಂದಿನ ಪದವಿಗಳಲ್ಲಿ ಪ್ರಥಮ ದರ್ಜೆಯನ್ನು ಹೊಂದಿರಬೇಕು.ಇದನ್ನೂ ಓದಿ:ESIC Recruitment 2021: ಇಎಸ್​ಐಸಿ ಬೆಂಗಳೂರು ನೇಮಕಾತಿ; ಮಾಸಿಕ ವೇತನ ₹76,000, ನೇರ ಸಂದರ್ಶನ

ಹಿಂದಿನ ಪದವಿಗಳು (ಮೂಲ ಪದವಿಗಳು):

ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಾಪಕ ಹುದ್ದೆಗಳಿಗೆ: B.E./ B.Tech. ಅಥವಾ ಯಾವುದೇ ಸಮಾನ ಪದವಿ ಮತ್ತು M.E./ M.Tech ಅಥವಾ ಸಂಬಂಧಿತ ವಿಭಾಗದಲ್ಲಿ ಯಾವುದೇ ಸಮಾನ ಪದವಿ ಪಡೆದಿರಬೇಕು.

ಬಿಇ/ ಬಿಟೆಕ್ ನಂತರ ನೇರವಾಗಿ ಪಿಎಚ್‌ಡಿ ಪದವಿ ಪಡೆದಿರಬೇಕು.

ಇತರ ಮಾನದಂಡಗಳನ್ನು ಪೂರೈಸಿದರೆ ಪ್ರತಿಷ್ಠಿತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಿಂದ ಪರಿಗಣಿಸಲಾಗುತ್ತದೆ.

ಗಣಿತದಲ್ಲಿ ಅಧ್ಯಾಪಕ ಹುದ್ದೆಗಳಿಗೆ: ಸಂಬಂಧಿತ ವಿಭಾಗದಲ್ಲಿ M.Sc ಪೂರ್ಣಗೊಳಿಸಿರಬೇಕು.ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಾಪಕ ಹುದ್ದೆಗಳಿಗೆ: ಸಂಬಂಧಿತ ವಿಭಾಗದಲ್ಲಿ M.A/ M.Sc/ M.Com/ MBA/ M.Tech ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್​ ಲಿಸ್ಟಿಂಗ್

  • ದಾಖಲಾತಿ ಪರಿಶೀಲನೆ

  • ಆನ್​ಲೈನ್ ಸಂದರ್ಶನ
 

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: