• ಹೋಂ
  • »
  • ನ್ಯೂಸ್
  • »
  • Jobs
  • »
  • IT Jobs: ನೆಟ್​ವರ್ಕ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಿ- ಮಾಸಿಕ ವೇತನ 60,000

IT Jobs: ನೆಟ್​ವರ್ಕ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಿ- ಮಾಸಿಕ ವೇತನ 60,000

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸುರತ್ಕಲ್​​ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

  • Share this:

NIT Karnataka Recruitment 2023: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology -Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ನೆಟ್​ವರ್ಕ್ ಎಂಜಿನಿಯರ್(Network Engineer), ಟೆಕ್ನಿಕಲ್ ರೈಟರ್(Technical Writer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಫೆಬ್ರವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸುರತ್ಕಲ್​​ನಲ್ಲಿ(Suratkal) ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಇ-ಮೇಲ್(E-Mail) ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
ಹುದ್ದೆನೆಟ್​ವರ್ಕ್ ಎಂಜಿನಿಯರ್, ಟೆಕ್ನಿಕಲ್ ರೈಟರ್
ಒಟ್ಟು ಹುದ್ದೆ5
ವಿದ್ಯಾರ್ಹತೆಎಂಜಿನಿಯರಿಂಗ್
ವೇತನಮಾಸಿಕ ₹45,000-60,000
ಉದ್ಯೋಗದ ಸ್ಥಳಸುರತ್ಕಲ್
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 10, 2023

ಹುದ್ದೆಯ ಮಾಹಿತಿ:
ನೆಟ್​ವರ್ಕ್​ ಎಂಜಿನಿಯರ್- 4
ಟೆಕ್ನಿಕಲ್ ರೈಟರ್- 1


ವಿದ್ಯಾರ್ಹತೆ:
ನೆಟ್​ವರ್ಕ್​ ಎಂಜಿನಿಯರ್- ಕಂಪ್ಯೂಟರ್​ ಸೈನ್ಸ್​ & ಎಂಜಿನಿಯರಿಂಗ್/ ಇನ್ಫರ್ಮೇಶನ್ ಟೆಕ್ನಾಲಜಿ/ ಇನ್ಫರ್ಮೇಶನ್ ಸೈನ್ಸ್​ & ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್ ಎಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್, ಎಂಇ/ ಎಂ.ಟೆಕ್, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.
ಟೆಕ್ನಿಕಲ್ ರೈಟರ್- ಸ್ನಾತಕೋತ್ತರ ಪದವಿ


ಇದನ್ನೂ ಓದಿ: UPSC ನೇಮಕಾತಿ- 1255 ಫಾರೆಸ್ಟ್​ ಸರ್ವೀಸ್​ & ಸಿವಿಲ್ ಸರ್ವೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಯೋಮಿತಿ:
ನಿಗದಿಪಡಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ನೆಟ್​ವರ್ಕ್​ ಎಂಜಿನಿಯರ್- ಮಾಸಿಕ ₹45,000-60,000
ಟೆಕ್ನಿಕಲ್ ರೈಟರ್- ಮಾಸಿಕ ₹ 33,000


ಆಯ್ಕೆ ಪ್ರಕ್ರಿಯೆ:
ಕೋಡಿಂಗ್ ಟೆಸ್ಟ್​
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ ipv6@nitk.edu.in ಗೆ ಕಳುಹಿಸಬೇಕು.




ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 10, 2023

Published by:Latha CG
First published: