• Home
  • »
  • News
  • »
  • jobs
  • »
  • NIT ಕರ್ನಾಟಕ ನೇಮಕಾತಿ: ನೇರ ಸಂದರ್ಶನ- BE/ B/Tech ಪದವೀಧರರು ಅರ್ಜಿ ಹಾಕಿ

NIT ಕರ್ನಾಟಕ ನೇಮಕಾತಿ: ನೇರ ಸಂದರ್ಶನ- BE/ B/Tech ಪದವೀಧರರು ಅರ್ಜಿ ಹಾಕಿ

NIT Karnataka

NIT Karnataka

ನವೆಂಬರ್ 18ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದೆ.

  • News18 Kannada
  • Last Updated :
  • Karnataka, India
  • Share this:

    NIT Karnataka Recruitment 2022: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology -Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಪ್ರಾಜೆಕ್ಟ್​ ಸ್ಟಾಫ್(Project Staff) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ನವೆಂಬರ್ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೂರತ್ಕಲ್​ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 18ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
    ಹುದ್ದೆಯ ಹೆಸರುಪ್ರಾಜೆಕ್ಟ್​ ಸ್ಟಾಫ್
    ಒಟ್ಟು ಹುದ್ದೆ1
    ವಿದ್ಯಾರ್ಹತೆಬಿಇ/ಬಿ.ಟೆಕ್
    ವೇತನಮಾಸಿಕ ₹ 17,000
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ02/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನ17/11/2022
    ಸ್ಥಳಸೂರತ್ಕಲ್
    ಸಂದರ್ಶನ ನಡೆಯುವ ದಿನಾಂಕ18/11/2022


    ವಿದ್ಯಾರ್ಹತೆ:
    ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್/ ಸಿವಿಲ್ ಎಂಜಿನಿಯರಿಂಗ್/ ಮೆಕ್ಯಾನಿಕಲ್ ಎಂಜಿನಿಯರಿಂಗ್/ ಮೆಟಿರಿಯಲ್ ಸೈನ್ಸ್​ & ಮೆಟಲರ್ಜಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: IAF Recruitment 2022: ಭಾರತೀಯ ವಾಯುಪಡೆಯಲ್ಲಿ SSLC, PUC ಆದವರಿಗೆ ಉದ್ಯೋಗ- ಸಂಬಳ 30,000


    ವಯೋಮಿತಿ:
    ಅಭ್ಯರ್ಥಿಗಳ ವಯೋಮಿತಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ವೇತನ: ಮಾಸಿಕ 17,000 ರೂ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಡಾ.ವದಿವುಚೆಜೈನ್ ಕಲಿವೀರನ್(ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್) &
    ಸುಬ್ರಹ್ಮಣ್ಯ ಕುಂದಾಪುರ (ಕೋ-ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್)
    ಜಲ ಸಂಪನ್ಮೂಲ & ಸಾಗರ ಎಂಜಿನಿಯರಿಂಗ್ ವಿಭಾಗ
    ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
    ಸೂರತ್​ಕಲ್
    ಶ್ರೀನಿವಾಸ ನಗರ-575025,
    ಮಂಗಳೂರು
    ಭಾರತ


    ಇದನ್ನೂ ಓದಿ: ಮೈಸೂರಿನ CFTRI ನಲ್ಲಿ ಕೆಲಸ ಖಾಲಿ ಇದೆ- ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಇಲ್ಲಿ Apply ಮಾಡಿ


    ಅಥವಾ ಅರ್ಜಿಯ ಸಾಫ್ಟ್ ಕಾಪಿಯನ್ನು ಇ ಮೇಲ್ ಐಡಿ- vadivuchezhian_k@nitk.edu.in, vadivuchezhian_k@yahoo.co.in ಗೆ ಕಳುಹಿಸಬಹುದು.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 17/11/2022
    ಸಂದರ್ಶನ ನಡೆಯುವ ದಿನಾಂಕ: 18/11/2022- ಬೆಳಗ್ಗೆ 10.30ಕ್ಕೆ

    Published by:Latha CG
    First published: