ರಾಷ್ಟ್ರೀಯ ತಾಂತ್ರಿಕ ಸಂಸ್ಥೆ(National Institute of Technology)- ಕರ್ನಾಟಕ (Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಜೂನಿಯರ್ ರಿಸರ್ಚ್ ಫೆಲೋ, ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಂಗಳೂರಿನಲ್ಲಿ(Mangaluru) ಸರ್ಕಾರಿ ಉದ್ಯೋಗ ಅರಸುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಫೆಬ್ರವರಿ 22ರಂದು ಬೆಳಗ್ಗೆ 9 ಗಂಟೆಗೆ ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ nitk.ac.in ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ |
ಹುದ್ದೆಯ ಹೆಸರು |
ಜೂನಿಯರ್ ರಿಸರ್ಚ್ ಫೆಲೋ, ಸೀನಿಯರ್ ರಿಸರ್ಚ್ ಫೆಲೋ |
ಒಟ್ಟು ಹುದ್ದೆಗಳು |
5 |
ವಿದ್ಯಾರ್ಹತೆ |
SSLC, BE/B.Tech/ ME/M.Tech |
ಉದ್ಯೋಗದ ಸ್ಥಳ |
ಮಂಗಳೂರು |
ವೇತನ |
ಮಾಸಿಕ ₹ 12,000-18,000 |
ಸಂದರ್ಶನ ನಡೆಯುವ ದಿನಾಂಕ |
02/02/2022 |
ಹುದ್ದೆಯ ಮಾಹಿತಿ:
ಸೀನಿಯರ್ ರಿಸರ್ಚ್ ಫೆಲೋ- 1
ಜೂನಿಯರ್ ರಿಸರ್ಚ್ ಫೆಲೋ- 3
ಫೀಲ್ಡ್ ಅಸಿಸ್ಟೆಂಟ್-1
ವಿದ್ಯಾರ್ಹತೆ:
ಸೀನಿಯರ್ ರಿಸರ್ಚ್ ಫೆಲೋ- ಎಂಇ/ಎಂ.ಟೆಕ್
ಜೂನಿಯರ್ ರಿಸರ್ಚ್ ಫೆಲೋ- ಬಿಇ/ಬಿ.ಟೆಕ್
ಫೀಲ್ಡ್ ಅಸಿಸ್ಟೆಂಟ್- SSLC
ಇದನ್ನೂ ಓದಿ: BSF Recruitment 2022: SSLC, ITI ಪಾಸಾದವರಿಗೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ಮಾಸಿಕ ವೇತನ ₹ 69,000
ಅನುಭವ:
ಸೀನಿಯರ್ ರಿಸರ್ಚ್ ಫೆಲೋ- ಅಭ್ಯರ್ಥಿಗಳು QGIS, ArcGIS, ENVI, SNAP, ERDAS, AutoCAD ಇತ್ಯಾದಿಗಳ ಸಾಫ್ಟ್ವೇರ್ ಜ್ಞಾನವನ್ನು ಹೊಂದಿರಬೇಕು.
ಜೂನಿಯರ್ ರಿಸರ್ಚ್ ಫೆಲೋ- ಅಭ್ಯರ್ಥಿಗಳು UAV ಕಟ್ಟಡ ಮತ್ತು ಪೈಲಟಿಂಗ್, ಸಾಲಿಡ್ ಕೆಲಸಗಳು, ವರ್ಚುವಲ್ ಲ್ಯಾಬ್ ಅಭಿವೃದ್ಧಿ ಇತ್ಯಾದಿಗಳ ಜ್ಞಾನವನ್ನು ಹೊಂದಿರಬೇಕು.
ಫೀಲ್ಡ್ ಅಸಿಸ್ಟೆಂಟ್-ಅಭ್ಯರ್ಥಿಗಳು ಲೋಹದ ತಯಾರಿಕೆ/ವಾಹನ ತಯಾರಿಕೆ, KiCAD ನಲ್ಲಿ PCB ವಿನ್ಯಾಸ, ಯಂತ್ರ ಪ್ರಕ್ರಿಯೆ ಇತ್ಯಾದಿಗಳ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು NIT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯಾಯ ವರ್ಗಕ್ಕನುಗುಣವಾಗಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಸಾಫ್ಟ್ವೇರ್ ಪ್ರಾವೀಣ್ಯತೆ ಪರೀಕ್ಷೆ
ತಾಂತ್ರಿಕ ಸಂದರ್ಶನ
ಇದನ್ನೂ ಓದಿ: RRB NTPC 2021ರ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷಾ ಫಲಿತಾಂಶ ಪ್ರಕಟ: rrbbnc.gov.in ವೆಬ್ಸೈಟ್ನಲ್ಲಿ ರಿಸಲ್ಟ್ ಲಭ್ಯ
ವೇತನ:
ಸೀನಿಯರ್ ರಿಸರ್ಚ್ ಫೆಲೋ- ಮಾಸಿಕ ₹ 18,000
ಜೂನಿಯರ್ ರಿಸರ್ಚ್ ಫೆಲೋ- ಮಾಸಿಕ ₹ 16,000
ಫೀಲ್ಡ್ ಅಸಿಸ್ಟೆಂಟ್- ಮಾಸಿಕ ₹ 12,000
ಸಂದರ್ಶನ ನಡೆಯುವ ಸ್ಥಳ:
ಸೆಂಟರ್ ಆಫ್ ಸಿಸ್ಟಂ ಡಿಸೈನ್
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೂರತ್ಕಲ್, ಕರ್ನಾಟಕ
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 12/01/2022
ಸಂದರ್ಶನ ನಡೆಯುವ ದಿನಾಂಕ: 02/02/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ