• Home
  • »
  • News
  • »
  • jobs
  • »
  • NIMHANS Recruitment 2022: ನಿಮಾನ್ಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 38000 ರೂ ವೇತನ

NIMHANS Recruitment 2022: ನಿಮಾನ್ಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 38000 ರೂ ವೇತನ

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ.

  • Share this:

    ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (National Institute of Mental Health and Neuro Sciences) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್​ ಸೈಂಟಿಫಿಕ್​ ಆಫೀಸರ್​, ಫಾಲೋ ಆಪ್​ ಕೌನ್ಸಿಲರ್​ ಸೇರಿದಂತೆ ಒಟ್ಟು 10 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.


    ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್
    ಹುದ್ದೆ ಹೆಸರು: ಫಾಲೋ-ಅಪ್ ಕೌನ್ಸಿಲರ್, ಜೂನಿಯರ್ ಸೈಂಟಿಫಿಕ್ ಆಫೀಸರ್
    ಹುದ್ದೆಗಳ ಸಂಖ್ಯೆ: 10
    ಉದ್ಯೋಗ ಸ್ಥಳ: ಬೆಂಗಳೂರು
    ವೇತನ: 23100-38500 ರೂ ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆಪದವಿವಯೋಮಿತಿವೇತನ
    ಕಿರಿಯ ವೈಜ್ಞಾನಿಕ ಅಧಿಕಾರಿ1ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್ಸಿಗರಿಷ್ಟ 30 ವರ್ಷ38000 ರೂ ವೇತನ
    ಖಾತೆ ಸಹಾಯಕ1ಬಿಕಾಂಗರಿಷ್ಟ 30 ವರ್ಷ  23100 ರೂ ಮಾಸಿಕ
    ಮನಶಾಸ್ತ್ರಜ್ಞ1ಮನಶಾಸ್ತ್ರದಲ್ಲಿ ಎಂಎಸ್ಸಿಗರಿಷ್ಟ 30 ವರ್ಷ25300 ರೂ ಮಾಸಿಕ
    ಸಮಾಜ ಸೇವಕ1ಸಮಾಜ ಶಾಸ್ತ್ರದಲ್ಲಿ ಎಂಎಗರಿಷ್ಟ 30 ವರ್ಷ25300 ರೂ ಮಾಸಿಕ
    ಕೋಹಾರ್ಟ್ ಮ್ಯಾನೇಜರ್1ಕ್ಲಿನಿಕಲ್​ ಸೈಕಾಲಾಜಿಯಲ್ಲಿ ಎಂಫಿಲ್ಗರಿಷ್ಟ 30 ವರ್ಷ29700 ರೂ ಮಾಸಿಕ
    ಪ್ರಾಜೆಕ್ಟ್ ಮ್ಯಾನೇಜರ್1ಸ್ನಾತಕೋತ್ತರ ಪದವಿಗರಿಷ್ಟ 30 ವರ್ಷ29700 ರೂ ಮಾಸಿಕ
    ಸಂಶೋಧನಾ ಅಧಿಕಾರಿ1 ಸಾಮಾಜ ವಿಜ್ಞಾನದಲ್ಲಿ ಪದವಿಗರಿಷ್ಟ 35 ವರ್ಷ25300 ರೂ ಮಾಸಿಕ
    ಫಾಲೋ-ಅಪ್ ಕೌನ್ಸಿಲರ್ 33ಸಮಾಜ ವಿಜ್ಞಾನದಲ್ಲಿ ಪದವಿಗರಿಷ್ಟ 35 ವರ್ಷ23100 ರೂ ಮಾಸಿಕ

    ಅರ್ಜಿ ಸಲ್ಲಿಕೆ: ಆಫ್​ಲೈನ್​


    ಅರ್ಜಿ ಶುಲ್ಕ: ಶುಲ್ಕ ವಿನಾಯಿತಿ




    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಅಕ್ಟೋಬರ್ 2022


     ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: nimhans.ac.in


    ಅರ್ಜಿ ಸಲ್ಲಿಕೆ ವಿಧಾನ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ


    ಅರ್ಜಿ ಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಿ

    Published by:Seema R
    First published: